Hasanamba Temple: ಹಾಸನಾಂಬೆ ದರ್ಶನದ ವೇಳೆ ಅಧಿಕಾರಿಗಳಿಂದ ಕರ್ತವ್ಯ ಲೋಪ; ನಾಲ್ವರು ಕಂದಾಯ ಇಲಾಖೆ ಸಿಬ್ಬಂದಿ ಅಮಾನತು

ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವ ಹಾಸನದ ಹಾಸನಾಂಬೆ ದರ್ಶನವು ಅ.9 ರಿಂದ ಶುರುವಾಗಿದ್ದು, ಹಾಸನಾಂಬೆಯನ್ನು ನೋಡಲು ಜನ ಸಾಗರವೇ ಹಾರಿದು ಬರುತ್ತಿದೆ. ಹಾಸನಾಂಬೆ ದರ್ಶನದ ವೇಳೆ ಕರ್ತವ್ಯ ಲೋಪ ಆರೋಪದ ಮೇಲೆ ನಾಲ್ವರು ಕಂದಾಯ ಇಲಾಖೆ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಗೋಲ್ಡ್ ಪಾಸ್ ಸೌಲಭ್ಯ ಕಲ್ಪಿಸಲಾಗಿದೆ. ಇದರ ಉಸ್ತುವಾರಿಗಾಗಿ ಕಂದಾಯ ಇಲಾಖೆಯ ಸಿಬ್ಬಂದಿಯನ್ನೂ ನೇಮಿಸಲಾಗಿತ್ತು. ಆದರೆ ಈಗ ಇದೇ ಸಿಬ್ಬಂದಿಗಳಿಂದ ಕರ್ತವ್ಯ ಲೋಪವಾಗಿದ್ದು, ನಾಲ್ವರು ಅಮಾನತುಗೊಂಡಿದ್ದಾರೆ. ಗೋಲ್ಡ್ ಕಾರ್ಡ್​ ಕೌಂಟರ್​ನಲ್ಲಿ ಕುಳಿತಿದ್ದ ಸಿಬ್ಬಂದಿ ಭಕ್ತರ ಕಾರ್ಡ್​ ಸ್ಕ್ಯಾನ್ ಮಾಡದೆಯೇ ಒಳಗೆ ಬಿಟ್ಟಿದ್ದಾರೆ. ಅನಧಿಕೃತ ಪ್ರವೇಶಕ್ಕೆ ಅವಕಾಶ ನೀಡಿರುವುದರಿಂದ ಗೋವಿಂದರಾಜ್ ಹಾಗೂ ಯೋಗಾನಂದ್ ಹಾಗೂ ವಿಎಗಳಾದ ಸಂತೋಷ್ ಅಂಬಿಗರ, ಶಿರಾಜ್ ಮಹಿಮಾ ಪಟೇಲ್ ಇವರನ್ನು ಅಮಾನತುಗೊಳಿಸಲಾಗಿದೆ.

ಸರ್ಕಾರಿ ಗುರುತಿನ ಚೀಟಿಯನ್ನು ದುರುಪಯೋಗಪಡಿಸಿಕೊಳ್ಳುವುದು ಗಂಭೀರ ಅಪರಾಧ. ಇಂತಹ ವರ್ತನೆ ಸರ್ಕಾರಿ ನೌಕರರಿಗೆ ಯೋಗ್ಯವಲ್ಲ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂಬ ಆರೋಪದ ಮೇಲೆ ಅಮಾನತು ಮಾಡಿ ಡಿಸಿ ಕೆ.ಎಸ್.ಲತಾಕುಮಾರಿ ಆದೇಶ ಹೊರಡಿಸಿದ್ದಾರೆ. ಮೊದಲ ದಿನ ಕೂಡ ಕರ್ತವ್ಯದ ಐಡಿ ಕಾರ್ಡ್ ದುರುಪಯೋಗ ಆರೋಪದಲ್ಲಿ ಇಬ್ಬರು ವಾರ್ಡನ್‍ಗಳನ್ನು ಅಮಾನತು ಮಾಡಲಾಗಿತ್ತು.

ಈ ಮೂಲಕ ಕರ್ತವ್ಯ ಪಾಲನೆಯಲ್ಲಿ ಬೇಜವಾಬ್ದಾರಿತನ ತೋರುತ್ತಿರುವ ಅಧಿಕಾರಿಗಳ ಮೇಲೆ ಜಿಲ್ಲಾಡಳಿತ ಶಿಸ್ತು ಕ್ರಮ ಕೈಗೊಳ್ಳುವ ಕೈಗೊಂಡಿದೆ.

Rakesh arundi

Leave a Reply

Your email address will not be published. Required fields are marked *