Hassan Truck driver: ಹಾಸನ ಟ್ರಕ್ ಚಾಲಕನಿಗೆ ಮದ್ಯ ಸೇವನೆ ಪರೀಕ್ಷೆ.ವೈಧ್ಯರು ಹೇಳಿದ್ದೇನು.?
ಖುಷಿಯಾಗಿ ಇಡೀ ಗ್ರಾಮಸ್ಥರೇ ಗಣೇಶನ ವಿಸರ್ಜನಾ ಸಡಗರದಲ್ಲಿದ್ದವರ ನಿದ್ದೆಗೆಡಿಸಿದ ಡ್ರೈವರ್ ಮಂಡ್ಯ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯರ್ರಾಬಿರ್ರಿಯಾಗಿ ಡ್ರೈವಿಂಗ್ ಮಾಡಿ ಮೆರವಣಿಗೆ ನಡೆಯುತ್ತಿದ್ದ ಜಾಗದ ಕಡೆ ಲಾರಿ ಚಲಾಯಿಸಿದ ಚಾಲಕ 10 ಜನರ ಪ್ರಾಣವನ್ನೇ ಕಿತ್ತುಕೊಂಡಿದ್ದಾನೆ. ಹಾಸನದ ಮೊಸಳೆ ಹೊಸಹಳ್ಳಿಯಲ್ಲಿ ನಡೆದ ಈ ದುರಂತ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಈಗಾಗ್ಲೇ ಚಾಲಕ ಭುವನೇಶ್‌ನಾ ಪೊಲೀಸರು ವಶಕ್ಕೆ ಪಡೆದಿದ್ದು, ಮಂಡ್ಯದ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸ್ತಿದ್ದಾರೆ. ಚಾಲನೆ ವೇಳೆ ಏನಾದ್ರೂ ಮದ್ಯಪಾನ ಮಾಡಿದ್ನಾ ಅನ್ನೋ ವಿಷ್ಯವಾಗಿ ಪರೀಕ್ಷೆ ನಡೆಯುತ್ತಿದೆ.
ಅಪಘಾತ ನಡೆದ ನಂತ್ರ ಸ್ಥಳಿಯರು ಆತನಿಗೆ ಚೆನ್ನಾಗಿ ಥಳಿಸಿದ್ದರು. ಆತನಿಗೂ ಗಂಭೀರ ಗಾಯಗಳಾಗಿದ್ದವು. ನಂತ್ರ ವಶಕ್ಕೆ ಪಡೆದಿದ್ದ ಪೊಲೀಸರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬೆಳ್ಳೂರಿನಲ್ಲಿರುವ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿದ್ದರು.
ಡಾಕ್ಟರ್ ಪ್ರಾಥಮಿಕ ವರದಿಯಲ್ಲಿ ಏನಿದೆ..?
ಹೊಟ್ಟೆ ಭಾಗಕ್ಕೆ ಪೆಟ್ಟು ಬಿದ್ದಿದ್ದು, ಸ್ವಲ್ಪ ನಿತ್ರಾಣಗೊಂಡಿದ್ದಾನೆ. ಸದ್ಯ ರಕ್ತಪರೀಕ್ಷೆ ನಡೆದಿದೆ. ಗಂಭೀರ ಗಾಯಗಳು ಏನು ಆಗಿಲ್ಲ. ಆದ್ರೆ, ನಾಳೆಯೊಳಗೆ ಬ್ಲಡ್ ರಿಪೋರ್ಟ್ ಬಂದ ಮೇಲೆ ಆತ ಮದ್ಯಪಾನ ಮಾಡಿದ್ದನಾ..? ಇಲ್ಲವಾ..? ಗೊತ್ತಾಗಲಿದೆ. ಇದೀಗ ಪ್ರಾಥಮಿಕ ವರದಿಗಳ ಪ್ರಕಾರ ಆತ ಆರೋಗ್ಯವಾಗಿದ್ದಾನೆ ಎಂದು ತಿಳಿದುಬಂದಿದೆ.