Hasanamba Temple: ಹಾಸನಾಂಬೆ ಗರ್ಭಗುಡಿ ಬಾಗಿಲು ಓಪನ್: ನಾಳೆಯಿಂದ 13 ದಿನಗಳ ಕಾಲ ಸಾರ್ವಜನಿಕರ ದರ್ಶನಕ್ಕೆ ಅವಕಾಶ!
ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲನ್ನು ತೆರೆಯಲಾಗಿದೆ. ಗುರುವಾರ ಮಧ್ಯಾಹ್ನ 12:21ಕ್ಕೆ ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳೊಂದಿಗೆ ಗರ್ಭಗುಡಿಯ ಬಾಗಿಲು ತೆರೆಯಲಾಗಿದೆ.
ಅರಸು ವಂಶಸ್ಥ ನಂಜರಾಜೇಅರಸ್ ಬಾಳೆಕಂದು ಕತ್ತರಿಸಿದ ಬಳಿಕ ಗರ್ಭಗುಡಿ ಬಾಗಿಲನ್ನು ತೆರೆಯಲಾಯಿತು. ಈ ಸಂದರ್ಭದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು, ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿಗಳು, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಶಾಸಕ ಹೆಚ್.ಪಿ. ಸ್ವರೂಪ್ ಪ್ರಕಾಶ್ ಹಾಗೂ ಸಂಸದ ಶ್ರೇಯಸ್ ಪಟೇಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದೇವಿಯನ್ನು ನೋಡಲು ಲಕ್ಷಾಂತರ ಭಕ್ತರು ರಾಜ್ಯದ ಹಾಗೂ ಹೊರ ರಾಜ್ಯಗಳಿಂದಲೂ ಆಗಮಿಸುತ್ತಾರೆ. ನಾಳೆಯಿಂದ 13 ದಿನಗಳ ಕಾಲ ಸಾರ್ವಜನಿಕರಿಗೆ ಹಾಸನಾಂಬೆಯ ದರ್ಶನಕ್ಕೆ ಅವಕಾಶವಿರುತ್ತದೆ. ಇಂದು ಮತ್ತು ಅಕ್ಟೋಬರ್ 23 ರಂದು ಕೊನೆಯ ದಿನ ಭಕ್ತರಿಗೆ ದರ್ಶನ ಇರುವುದಿಲ್ಲ.
ಕಳೆದ ವರ್ಷ ಅಕ್ಟೋಬರ್ 24 ರಿಂದ ನವೆಂಬರ್ 3ರವರೆಗೆ ಹಾಸನಾಂಬೆ ಜಾತ್ರೋತ್ಸವ ನಡೆದಿದ್ದು, 20 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದರು, ಈ ಬಾರಿ 25 ಲಕ್ಷಕ್ಕೂ ಅಧಿಕ ಜನರು ಆಗಮಿಸುವ ನಿರೀಕ್ಷೆ ಇದೆ.
ಹಾಸನಾಂಬೆ ದೇವಾಲಯದ ದರ್ಶನದ ಸಮಯ
09-10-2025 ಗುರುವಾರ: ಮಧ್ಯಾಹ್ನ 12.00 ರಿಂದ ಬಾಗಿಲು ತೆಗೆಯಲಾಗುವದು, ಸಾರ್ವಜನಿಕ ದರ್ಶನ ಇರುವುದಿಲ್ಲ.
10-10-2025 ಶುಕ್ರವಾರ: ಬೆಳಗ್ಗೆ 6.00 ರಿಂದ ಸಂಜೆ 7.00
11-10-2025 ಶನಿವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 3.00
12-10-2025 ಭಾನುವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 3.00
13-10-2025 ಸೋಮವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 3.00
14-10-2025 ಮಂಗಳವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 3.00
15-10-2025 ಬುಧವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 3.00
16-10-2025 ಗುರುವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 2.00
17-10-2025 ಶುಕ್ರವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 3.00
18-10-2025 ಶನಿವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 3.00
19-10-2025 ಭಾನುವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 2.00
20-10-2025 ಸೋಮವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 3.00
21-10-2025 ಮಂಗಳವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 2.00
22-10-2025 ಬುಧವಾರ: ಬೆಳಗ್ಗೆ 5.00 ರಿಂದ ಸಂಜೆ 7.00, ರಾತ್ರಿ 1.00 ರಿಂದ ಬೆಳಗ್ಗೆ 7.00
23-10-2025ಗುರುವಾರ: ಮಧ್ಯಾಹ್ನ 12.00 ಗಂಟೆಗೆ ಬಾಗಿಲು ಮುಚ್ಚಲಾಗುವುದು.