Shivamoga: ಮಲೆನಾಡಿಗರಿಗೆ ಗುಡ್ ನ್ಯೂಸ್ 90 ಹೊಸ 4ಜಿ ಟವರ್
ಬಿಎಸ್ಎನ್ಎಲ್ ವತಿಯಿಂದ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ‘4ಜಿ’ ನೆಟ್ವರ್ಕ್ನ ಮೊಬೈಲ್ ಟವರ್ಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದಾರೆ. ಇದರಿಂದ ಮಲೆನಾಡಿನ ನೆಟ್ವರ್ಕ್ ಸಮಸ್ಯೆ ಅನುಭವಿಸುತ್ತಿರುವ ಗ್ರಾಮದ ಜನರಿಗೆ ಗುಡ್ ನ್ಯೂಸ್ ಸಿಕ್ಕಿದಂತಾಗಿದೆ.
ಮೋದಿ ಉದ್ಘಾಟಿಸಿದ ‘4ಜಿ’ ನೆಟ್ ವರ್ಕ್ ಮೊಬೈಲ್ ಟವರ್ಗಳಲ್ಲಿ 90 ಮೊಬೈಲ್ ಟವರ್ ಗಳು ಶಿವಮೊಗ್ಗ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಗೆ ಸೇರಿದೆ.
ಈ 4ಜಿ ನೆಟ್ವರ್ಕ್ ಟವರ್ ಗಳು ಪ್ರಧಾನಿಯವರ ಡಿಜಿಟಲ್ ಇಂಡಿಯಾದ ದೃಷ್ಟಿಕೋನಕ್ಕೆ ಪೂರಕವಾಗಿದ್ದು, ಜಿಲ್ಲೆಗಳ ನೆಟ್ವರ್ಕ್ ಇಲ್ಲದ ಗ್ರಾಮಗಳಿಗೆ ಅನುಕೂಲ್ವಾಗಲಿವೆ. ಕ್ಲೌಡ್ ತಂತ್ರಜ್ಞಾನ ಆಧರಿಸಿ ಭವಿಷ್ಯಕ್ಕೆ ಸಿದ್ಧವಾಗುವಂತೆ ವಿನ್ಯಾಸಗೊಳಿಸಲಾಗಿದ್ದು, 5ಜಿಗೆ ಸರಾಗವಾಗಿ ಅಪ್ಗ್ರೇಡ್ ಮಾಡುವ ಸಾಮರ್ಥ್ಯ ಹೊಂದಿವೆ.
ದೇಶದಾದ್ಯಂತ ಮೊಬೈಲ್ ನೆಟ್ವರ್ಕ್ ಇಲ್ಲದ 26,700ಕ್ಕೂ ಹೆಚ್ಚು ಹಳ್ಳಿಗಳಿಗೆ ಈಗ ಟೆಲಿಕಾಂ ಪ್ರವೇಶ ಪಡೆದುಕೊಂಡಿದೆ. ಇದರಿಂದ ದೇಶದ ಸುಮಾರು 20 ಲಕ್ಷಕ್ಕೂ ಹೆಚ್ಚು ಹೊಸ ಚಂದಾದಾರರಿಗೆ ಪ್ರಯೋಜನವಾಗಲಿದೆ. ಈ ನೆಟ್ವರ್ಕ್ಗಳು ಸೌರಶಕ್ತಿ ಚಾಲಿತವಾಗಿದ್ದು ಭಾರತದ ಅತಿದೊಡ್ಡ ಹಸಿರು ಟೆಲಿಕಾಂ ಸೈಟ್ಗಳ ಸಮೂಹವನ್ನಾಗಿ ಮಾಡಿದೆ ಎಂದು ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ. ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾವ್ಯಾವ ತಾಲೂಕುಗಳಲ್ಲಿ ಎಷ್ಟು 4ಜಿ ಟವರ್ಗಳು
- ತೀರ್ಥಹಳ್ಳಿ – 16
- ಶಿವಮೊಗ್ಗ – 05
- ಹೊಸನಗರ – 14
- ಸಾಗರ – 26
- ಶಿಕಾರಿಪುರ – 04
- ಸೊರಬ- 01
- ಭದ್ರಾವತಿ – 01
- ಬೈಂದೂರು – 23
- ಒಟ್ಟು – 90
for igas: new