Ajim Premji Foundation:ಸರ್ಕಾರಿ ಶಾಲೆಗಳಲ್ಲಿ ಓದಿರುವ ಹೆಣ್ಣುಮಕ್ಕಳಿಗೆ ಸಿಗಲಿದೆ ಇನ್ನುಮುಂದೆ ವರ್ಷಕ್ಕೆ 30 ಸಾವಿರ ರೂಗಳು.

ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮುಗಿಸಿದ ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕೆ ಅಂದರೆ ಪದವಿ ಶಿಕ್ಷಣಕ್ಕೆ ಅನುಕೂಲವಾಗಲು “ದೀಪಿಕಾ ವಿದ್ಯಾರ್ಥಿ ವೇತನ” ಕಾರ್ಯಕ್ರಮದಡಿ 37 ಸಾವಿರ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಅಜೀಂ ಪ್ರೇಮ್‌ ಜಿ ಫೌಂಡೇಶನ್ ನಿರ್ಧರಿಸಿದೆ. ಇದರಿಂದ ಇನ್ನು ಮುಂದೆ 37 ಸಾವಿರ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ ಎಂದು, “ದೀಪಿಕಾ ವಿದ್ಯಾರ್ಥಿ ವೇತನ” ಯೋಜನೆಯನ್ನು ಲೋಕಾರ್ಪಣೆ ಮಾಡಿದ ಸಿ.ಎಂ ಸಿದ್ದರಾಮಯ್ಯ ಹೇಳಿದರು.

“ದೀಪಿಕಾ ವಿದ್ಯಾರ್ಥಿ ವೇತನ” ಯೋಜನೆಯನ್ನು ಲೋಕಾರ್ಪಣೆ ಮಾಡಿದ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿ.ಎಂ ಸಿದ್ದರಾಮಯ್ಯ, ಐಟಿ ದಿಗ್ಗಜರೆಂದೇ ಹೆಸರಾಗಿರುವ ಅಜೀಂ ಪ್ರೇಮ್‌ ಜಿ, ತಮ್ಮ ಫೌಂಡೇಶನ್ ಮೂಲಕ ಅನೇಕ ಜನಪರ ಕಾರ್ಯಕ್ರಮಗಳನ್ನ ಕೈಗೊಂಡಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರ ಪೂರೈಸುತ್ತಿದ್ದಾರೆ. ಕಳೆದ ವರ್ಷ ಮಕ್ಕಳಿಗೆ ಮೊಟ್ಟೆ ಕೊಡುವ ಯೋಜನೆಗೆ 1500 ಕೋಟಿ ನೀಡಿದ್ದರು. ಇದರ ಜೊತೆಗೆ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಪದವಿ ಶಿಕ್ಷಣವನ್ನು ಪಡೆಯುವಂತಾಗಲಿ ಎಂಬ ದೃಷ್ಟಿಯಿಂದ “ದೀಪಿಕಾ ವಿದ್ಯಾರ್ಥಿ ವೇತನ” ಯೋಜನೆಗೂ ತಮ್ಮ ನೆರೆವು ನೀಡುತ್ತಿದ್ದಾರೆ ಎಂದರು.

ಯೋಜನೆ ಪದವಿ ಮುಗಿಯುವವರೆಗೂ ಅನ್ವಯವಾಗಲಿದ್ದು, ಕೋರ್ಸ್‌ ಮುಗಿಯುವವರೆಗೂ ಪ್ರತಿ ವರ್ಷ 30 ಸಾವಿರ ರೂಗಳು ಒಬ್ಬ ವಿದ್ಯಾರ್ಥಿನಿಗೆ ವಿದ್ಯಾರ್ಥಿ ವೇತನವಾಗಿ  ಸಿಗಲಿದೆ. ವರ್ಷ ಯೋಜನೆಯನ್ನು 37 ಸಾವಿರ ವಿದ್ಯಾರ್ಥಿನಿಯರು ಪಡೆಯಬಹುದಾಗಿದೆ. ಯೋಜನೆಯಿಂದ ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕೆ ಕೈ ಜೋಡಿಸಿರುವ ಅಜೀಂ ಪ್ರೇಮ್‌ ಜಿ, ಫೌಂಡೇಶನ್ ಗೆ ಸರ್ಕಾರ ಅಭಿನಂದನೆ ಸಲ್ಲಿಸಿತು.

ಹೆಚ್ಚಾಗುತ್ತಿರುವ ಬಾಲ್ಯ ವಿವಾಹ,ಬಾಲ ಕಾರ್ಮಿಕರ ಸಮಸ್ಯೆಯಿಂದ ಹಾಗೂ ಬಡ ಕುಟುಂಬ ಹೆಣ್ಣು ಮಕ್ಕಳು ಹಣವಿಲ್ಲದೆ ಪದವಿ ಶಿಕ್ಷಣದಿಂದ ವಂಚಿತರಾಗುತ್ತಿರುವವರಿಗೆ ಯೋಜನೆ ತುಂಬಾ ಅನುಕೂಲವಾಗಲಿದೆ. ಮಹಿಳೆಯರು ಸ್ವಾವಲಂಬಿಗಳಾಗಿ ದುಡಿಯಲು ಶಿಕ್ಷಣ ಅತ್ಯವಶ್ಯಕ. ನಮ್ಮ ಸರ್ಕಾರ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚು  ಒತ್ತು ನೀಡುತ್ತದೆ. ಎಲ್ಲರೂ ಯೋಜನೆಯನ್ನುಸದುಪಯೋಗ ಪಡಿಸಿಕೂಳ್ಳಬೇಕು ಎಂದು ಸಿ.ಎಂ ಸಿದ್ದರಾಮಯ್ಯ ಹೇಳಿದರು.

ಅರ್ಜಿ ಸಲ್ಲಿಸುವುದು ಹೇಗೆ..?

https://azimpremjifoundation.org/

ಈ ಮೇಲಿನ ಲಿಂಕ್‌ ಗೆ ಬೇಟಿ ನೀಡಿ ಇದೇ ಸೆ.30 ರೂಳಗೆ ಅರ್ಜಿ ಸಲ್ಲಿಸಬಹುದು.

ಅರ್ಹತೆಗಳು..

1 ರಿಂದ 12ನೇ ತರಗತಿಯವರೆಗೆ ಸರ್ಕಾರಿ ಶಾಲಾ-ಕಾಲೇಜಿನಲ್ಲೇ ವ್ಯಾಸಾಂಗ ಮಾಡಿರಬೇಕು.

    2025-26 ನೇ ಸಾಲಿನ ಪದವಿಯನ್ನು ಯಾವುದೇ ಸರ್ಕಾರಿ ಹಾಗೂ ಖಾಸಗಿ ಕಾಲೇಜಿನಲ್ಲಿ ಪ್ರವೇಶ ಪಡೆದಿರಬೇಕು.

    Rakesh arundi

    Leave a Reply

    Your email address will not be published. Required fields are marked *