Ganesh Chathruti: ಗಣೇಶನ ಮೂರ್ತಿಯನ್ನು ಕೊನೆಗೆ ನೀರಿನಲ್ಲಿ ಬಿಡೋದ್ಯಾಕೆ.?

ಭಾರತೀಯ ಸಂಸ್ಕೃತಿ, ಹಿಂದೂ ಪುರಾಣಗಳು ಹೇಳುವಂತೆ ಗಣೇಶನನ್ನು ಒಂದಿಷ್ಟು ದಿನಗಳ ಕಾಲ ಕೂರಿಸಿ ನೀರಿಗೆ ಬಿಡುವ ಪದ್ಧತಿ ಇದೆ. ಬಾಲಗಂಗಾಧರ್‌ ತಿಲಕ್‌ರು ಸ್ವಾತಂತ್ರ್ಯ ಹೋರಾಟಗಾರರನ್ನು ಒಂದೆಡೆ ಸಂಘಟನೆ ಮಾಡಲು ಹುಟ್ಟು ಹಾಕಿದ ಈ ಹಬ್ಬದ ಹಿಂದಿರೋ ಧಾರ್ಮಿಕ ನಂಬಿಕೆಗಳು ಏನು ಅನ್ನೋದೆ ವಿಶೇಷ.

ಸ್ನೇಹಿತರೆ, ಗಣೇಶನ ಹಬ್ಬ ಹಿಂದೂ ಧಾರ್ಮಿಕ ನಂಬಿಕೆಗಳಲ್ಲಿ ವಿಶೇಷ ಸ್ಥಾನಮಾನ ಪಡೆದಿದೆ. ಈ ಹಬ್ಬ ಬಂತೆಂದರೆ ಪುಟ್ಟ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಒಂದು ತಿಂಗಳ ಸಂಭ್ರಮ ಎಂದರೆ ತಪ್ಪಾಗೋದಿಲ್ಲ. ಅನೇಕರಿಗೆ ಇಂದಿಗೂ ಒಂದು ಅನುಮಾನ ಇದ್ದೇ ಇದೆ. ಗಣೇಶನ ಮೂರ್ತಿಯನ್ನು ಅಷ್ಟು ಸಂಭ್ರಮದಿಂದ ಕೂರಿಸಿ ಕೊನೆಗೆ ಕೆರೆ, ಹೊಳೆ, ನದಿಗೆ, ಹಾಗೂ ಬಾಲ ಗಣಪನನ್ನು ಮನೆ ತೊಟ್ಟಿಯಲ್ಲಿ ಬಿಡೋದ್ಯಾಕೆ ಎಂಬ ಪ್ರಶ್ನೆಗಳು ಮೂಡುತ್ತವೆ. ಅದಕ್ಕೆ ಇಲ್ಲಿದೆ ಉತ್ತರ.

ಇದೊಂದು ಪ್ರಕೃತಿ ನಿಯಮದ ಪಾಠವನ್ನು ನಮಗೆ ಹೇಳಿಕೊಡುವಂತದ್ದು. ನಮ್ಮ ಹುಟ್ಟಿನ ಮೂಲವೇ ಈ ಮಣ್ಣು. ಕೊನೆಗೆ ನಾವೆಲ್ಲಾ ಸೇರೋದು ಮಣ್ಣನ್ನೇ. ಹಾಗಾಗಿ ಈ ಮಣ್ಣಿನಿಂದ ರೂಪುಗೊಂಡ ಈ ಗಣೇಶನನ್ನು ಕೊನೆಗೆ ಈ ಮಣ್ಣಿಗೆ ಸೇರಿಸಬೇಕೆಂಬ ನಿಯಮವನ್ನು ಮಾರ್ಮಿಕವಾಗಿ ಹೇಳಲು ಹೊರಟಿರೋದೆ ಈ ಧಾರ್ಮಿಕ ಶಾಸ್ತ್ರದ ನಿಯಮ. ನಿರ್ಧಿಷ್ಟ ದಿನಗಳ ಕಾಲ ಮನೆಯಲ್ಲಿ ಪೂಜಿಸಿ ನಂತ್ರ ನೀರಿಗೆ ಬಿಡುವುದು ಒಳ್ಳೇದು. ಮನೆಯಲ್ಲೇ ಇಟ್ಟರೆ ಶ್ರೇಯಸ್ಸು ಅಲ್ಲ. ಅದಕ್ಕಾಗಿಯೇ ಹೇಳೋದು ಈ ಕರಗದ ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ ಗಣಪನ ಮೂರ್ತಿ ಇಟ್ಟು ನಮ್ಮ ನಂಬಿಕೆಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದೇವೆ.

ಇದಕ್ಕೆ ಹೇಳೋದು 3,5,9 ದಿನಗಳಂತೆ ವಿಸರ್ಜನೆ ಮಾಡಬಹುದು. ಸಾತ್ವಿಕ ಆಹಾರ ಪದ್ಧತಿ ಇರಬೇಕು. ವಿಸರ್ಜನೆಗೂ ಮುನ್ನ ಆರತಿ ಎತ್ತಿ ಪೂಜೆ ಮಾಡಿ, ಶುದ್ದ ಮನಸ್ಸಿನಿಂದ ಮತ್ತೆ ನಮ್ಮ ಮನೆಗೆ ಬಾರಪ್ಪ ಅಂತಾ ಅಕ್ಕರೆ, ಪ್ರೀತಿಯಿಂದ್ಲೇ ನೀರಿಗೆ ಬಿಡಬೇಕು. ಮನೆಯಲ್ಲಿಟ್ಟರೆ, ಎಂದೂ ಮನೆಗೆ ಬೀಗ ಹಾಕಬೇಡಿ. ಪ್ರಥಮ ಪೂಜಿತ ಗಣೇಶ ನಿಮಗೆ ಒಳ್ಳೇಯದನ್ನೇ ಮಾಡುತ್ತಾನೆ.

Rakesh arundi

Leave a Reply

Your email address will not be published. Required fields are marked *