Gadag/Naragunda:ಯುವತಿಯರಿಗೆ ಚುಡಾಯಿಸಿದ್ದಕ್ಕೆ ಎರಡು ಕುಟುಂಬಗಳು ಮಾರಾಮಾರಿ.!
ಗದಗ ಜಿಲ್ಲೆ ನರಗುಂದ ಪಟ್ಟಣದ ಕೊರವರ ಓಣಿಯಲ್ಲಿ ಹುಡುಗಿಯರನ್ನು ಚುಡಾಯಿಸಿದ್ದಕ್ಕೆ 2 ಕುಟುಂಬಗಳ ನಡುವೆ ದೊಡ್ಡ ಮಾರಾಮಾರಿಯೇ ನಡೆದಿದೆ. ಸುಮಾರು 80 ಜನ ದೊಣ್ಣೆ, ಕಟ್ಟಿಗೆ, ಕಲ್ಲುಗಳಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಎರಡು ಕುಟುಂಬಗಳ ಮೇಲೂ ಕಲ್ಲು ತೂರಾಡಿದ ಪರಿಣಾಮ ಗಾಜುಗಳೆಲ್ಲಾ ಪುಡಿ ಪುಡಿಯಾಗಿವೆ.
ಜಮಖಂಡಿ ಕುಟುಂಬ ಹಾಗೂ ಗಾಳೇಪ್ಪನವರ ಕುಟುಂಬಗಳ ನಡುವೆ ಬಡಿದಾಡ ನಡೆದಿದ್ದು,ಗಾಳೆಪ್ಪನವ್ರ ಕುಟುಂಬದವ್ರು ಜಮಖಂಡಿ ಕುಟುಂಬದ ಹೆಣ್ಣು ಮಕ್ಕಳನ್ನು ಚುಡಾಯಿಸಿದ್ದಾರೆ. ಇದೇ ಕಾರಣಕ್ಕೆ ರೊಚ್ಚಿಗೆದ್ದ ಜಮಖಂಡಿ ಕುಟುಂಬದವ್ರು ಪ್ರಶ್ನೆ ಮಾಡಿದ್ದಾರೆ. ಮಾತಿಗೆ ಮಾತು, ವಾದ ವಾಗ್ವಾದ ನಡೆದು ಜಗಳ ವಿಕೋಪಕ್ಕೆ ತಿರುಗಿದೆ. ಪರಸ್ಪರ ದೂರು ಆಧರಿಸಿ 75ಕ್ಕೂ ಹೆಚ್ಚು ಜನರ ಮೇಲೆ ಎಫ್ಐಆರ್ ದಾಖಲಾಗಿದೆ.
ಇದೆಲ್ಲ ಸುಳ್ಳು:- ಗಾಳೇಪ್ಪ ಕುಟುಂಬ
ಜಮಖಂಡಿ ಕುಟುಂಬದವನೊಬ್ಬ ಯ್ಯೂಟ್ಯೂಬರ್ ಅಂತಾ ಹಫ್ತಾ ವಸೂಲಿ ಮಾಡ್ತಿದ್ಧಾನೆ. ದುಡಿದ ಹಣ ನಾವ್ಯಾಕೆ ಕೊಡಬೇಕು. ಹಲವು ವರ್ಷಗಳಿಂದ ಇದೇ ವಿಷ್ಯವಾಗಿ ಧಮ್ಕಿ ಹಾಕ್ತಿದ್ದಾನೆ ಆ ಯ್ಯೂಟ್ಯೂಬರ್. ಹಾಗಾಗಿ ಪ್ರಶ್ನೆ ಮಾಡಿದ್ದಕ್ಕೆ ನಮ್ಮ ಮೇಲೆ ಹಲ್ಲೆ ಮಾಡ್ತಾರೆ ಎಂದು ಆರೋಪ ಮಾಡಿದ್ದಾರೆ.ಒಟ್ಟಿನಲ್ಲಿ ಎರಡು ಕುಟುಂಬಗಳ ನಡುವಿನ ಮಾರಾಮಾರಿ ನರಗುಂದ ಪಟ್ಟಣವನ್ನು ಬೆಚ್ಚಿಬೀಳಿಸಿದೆ. ಘಟನೆ ಸಂಬಂಧ ಈವರೆಗೆ 6 ಜನರ ಬಂಧನವಾಗಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸ್ತಿದ್ದಾರೆ.