M.P. Renukacharya avoiding conflict: ಸಂಘರ್ಷ ತಪ್ಪಿಸಿ ಸಾಮರಸ್ಯ ಉಳಿಸಿಕೊಟ್ಟ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ
ಹೊನ್ನಾಳಿ ಹಿರೇಕಲ್ಮಠ ಮಠದ ಸುಭದ್ರ ಎಂಬ 32 ವರ್ಷದ ಆನೆಯನ್ನು ಉಡುಪಿ ಶ್ರೀ ಕೃಷ್ಣ ಮಠದ ಆಡಳಿತ ಮಂಡಳಿಯು ವಶಪಡಿಸಿಕೊಳ್ಳಲು ಬಂದಾಗ ಹೊನ್ನಾಳಿ ತಾಲೂಕಿನ ಸಹಸ್ರರು ಭಕ್ತರು ಶ್ರೀ ಮಠಕ್ಕೆ ಧಾವಿಸಿ, ನಮ್ಮ ಶ್ರೀಮಠದ ಸುಭದ್ರೆ ಆನೆಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದು ಆಕ್ಷೇಪ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ ಎಂಪಿ ರೇಣುಕಾಚಾರ್ಯ ಅವರು ಮದ್ಯ ಪ್ರವೇಶಿಸಿ, ಸಂಘರ್ಷ ಬೇಡ ಸಾಮರಸ್ಯದಿಂದ ಎಲ್ಲರೂ ನಡೆದುಕೊಳ್ಳೋಣ ಎಂದು ತಿಳಿಸಿದರು. ನಂತರ ವೇದಿಕೆಯ ಮೇಲೆ ಮಾನ್ಯ ಅರಣ್ಯ ಸಚಿವರಾದ ಈಶ್ವರ್ ಕಂಖ್ರೆ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿಕೊಂಡು ಸುಭದ್ರೆಯನ್ನು ಹೊನ್ನಾಳಿ ಮಠದಲ್ಲಿ ಉಳಿಸುವಂತೆ ಕೇಳಿದಾಗ ಮಾನ್ಯ ಸಚಿವರು ಸಹಮತ ವ್ಯಕ್ತಪಡಿಸಿದರು. ಹಿಗಾಗಿ ಸುಭದ್ರಯು ಸಾವಿರಾರು ಭಕ್ತರ ಆಶಾಯದಂತೆ ಹೊನ್ನಾಳಿ ಮಠದಲ್ಲೇ ಉಳಿದಿದೆ.