Earthquake: ವಿಜಯಪುರದಲ್ಲಿ ಭೂಕಂಪನ: ಬೆಚ್ಚಿಬಿದ್ದ ಜನ
ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಭಯದಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ಹಲವು ಭಾಗದಲ್ಲಿ ಭೂಕಂಪ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 2.8 ರಷ್ಟು ತೀವ್ರತೆ ದಾಖಲಾಗಿದೆ.
ಶುಕ್ರವಾರ ರಾತ್ರಿ 10:01 ಕ್ಕೆ ಭೂಕಂಪನ ಅನುಭವ ಆಗಿದೆ. ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವ ಆಗಿದ್ದು, ವಿಜಯಪುರ ಗ್ರಾಮೀಣ ಭಾಗದ 12 ಕಿ.ಮೀ ಸುತ್ತ ಮುತ್ತ ಭೂಕಂಪನದ ಅನುಭವ ಆಗಿದೆ. ಆದರೆ ಯಾವುದೇ ಆಸ್ತಿ ಪಾಸ್ತಿ ಹಾನಿ ಉಂಟಾಗಿಲ್ಲ. ಮೇಲಿಂದ ಮೇಲೆ ಇಂತಹ ಅನುಭವ ಆಗುತ್ತಿರುವುದರಿಂದ ಜನ ಆತಂಕಕ್ಕೀಡಾಗಿದ್ದಾರೆ.
ಕಳೆದ ತಿಂಗಳು ಸಿಂದಗಿ ಪಟ್ಟಣದಲ್ಲಿ ಕೂಡ ಸರಣಿ ಭೂಕಂಪನ ಅನುಭವವಾಗಿತ್ತು. ಈಗ ನಗರ ಭಾಗದಲ್ಲಿ ಕಂಪನದ ಅನುಭವ ಆಗಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ.