Beluru Ganesha Temple: ಗಣೇಶನಿಗೆ ಚಪ್ಪಲಿ ಹಾರ ಹಾಕಿದ ಮಹಿಳೆ ಯಾರು ಗೊತ್ತಾ..?
ಹಾಸನದ ಪುರಸಭೆ ಆವರಣದಲ್ಲಿರೋ ಶ್ರೀ ವರಸಿದ್ಧಿ ವಿನಾಯಕ ದೇವಾಲಯದ ಕಲ್ಲಿನ ಗಣೇಶನ ಮೂರ್ತಿಗೆ ಚಪ್ಪಲಿ ಹಾರ ಹಾಕಿರೋ ಘಟನೆ ಇಡೀ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಬೆಳಗ್ಗೆ ದೇವರ ದರ್ಶನಕ್ಕೆ ಬಂದ ಭಕ್ತಾದಿಗಳಿಗೆ ಆಘಾತವಾಗಿದ್ದಲ್ಲದೇ, ತೀವ್ರ ಟೀಕೆಗಳು ಕೂಡ ಕೇಳಿ ಬಂದಿದ್ವು. ಈ ಕೃತ್ಯ ಎಸಗಿದವ್ರ ಬಂಧನಕ್ಕೆ ಸ್ಥಳಿಯರು ಆಗ್ರಹಿಸಿದ್ರು. ಜನರ ಧಾರ್ಮಿಕ ಭಾವನೆಗೆ ಧಕ್ಕೆಯಾಗಿರೋ ಸೂಕ್ಷ್ಮ ಪ್ರಕರಣವಾಗಿರೋದ್ರಿಂದ ಎಚ್ಚೆತ್ತುಕೊಂಡ ಪೊಲೀಸರು ಸ್ಥಳಕ್ಕಾಗಮಿಸಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ರು.
ಗಣೇಶನ ಮೂರ್ತಿಗೆ ಚಪ್ಪಲಿ ಹಾರ
ದೃಶ್ಯದಲ್ಲಿ ಮಹಿಳೆಯೊಬ್ಬಳು ಕಾಲಿನಲ್ಲಿ ಚಪ್ಪಲಿ ಹಾಕಿಕೊಂಡೇ ದೇವಾಲಯ ಪ್ರವೇಶ ಮಾಡಿ, ವಾಪಾಸಾಗುವ ವೇಳೆ ಬರಿಗಾಲಲ್ಲಿ ಬಂದಿರೋದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೇಲ್ನೋಟಕ್ಕೆ ಮಾನಸಿಕ ಅಸ್ವಸ್ಥ ಮಹಿಳೆಯಂತೆ ಕಂಡು ಬರ್ತಿರೋ ಈ ದೃಶ್ಯಗಳು ಅಚ್ಚರಿ ಉಂಟು ಮಾಡಿತ್ತು. ಆಕೆ ಹಾಕಿದ್ದ ಚಪ್ಪಲಿ ಹಾಗೂ ಗಣೇಶನ ಮೂರ್ತಿಯ ಮೇಲಿದ್ದ ಚಪ್ಪಳಿ ಪರಿಶೀಲಿಸಿದಾಗ ಒಂದೇ ಎಂದು ಗೊತ್ತಾಗಿದೆ. ಈ ಘಟನೆ ಭಕ್ತರಲ್ಲಿ ಆಘಾತ ಮೂಡಿಸಿದ್ದು, ಆರೋಪಿಗಳ ಬಂಧನಕ್ಕೆ ಆಗ್ರಹ ಮಾಡಿದ್ದರು. ಸ್ಥಳಕ್ಕೆ ಸಿಟಿ ರವಿ ಕೂಡ ಆಗಮಿಸಿದ್ರು. ಬೇಲೂರಿನ ಹೃದಯ ಭಾಗವಾದ ಪುರಸಭೆ ಆವರಣದಲ್ಲೇ ಇಂತಹ ಘಟನೆ ನಡೆದಿರೊದು ದುರದೃಷ್ಠಕರ ಎನ್ನಲಾಗ್ತಿದೆ.
ಆದರೆ, ಪೊಲೀಸರ ಪ್ರಕಾರ ಮಹಿಳೆಯ ಮಾನಸಿಕ ಸ್ಥಿತಿ ಪರಿಶೀಲನೆ ಮಾಡಲಾಗ್ತಿದೆ. ಯಾವುದೇ ಕೋಮು ಷಡ್ಯಂತ್ರ ಇಲ್ಲ. ವೈಯಕ್ತಿಕ ಕಾರಣ ಏನೋ ಇರಬಹುದು. ನಂಬಿಕೆಗಳಿಗೆ ಮೋಸ ಆಗಿರೋ ಕಾರಣ ಕೂಡ ಇರಬಹುದು. ಹಾಗಾಗಿ ಈ ರೀತಿ ನಡೆದಿರಬಹುದು. ಮಹಿಳೆ ಮಾನಸಿಕ ಅಸ್ವಸ್ಥೆ ಕೂಡ ಇರಬಹುದು ಎನ್ನಲಾಗ್ತಿದೆ.