ನಟಿ ಶಕೀಲಾ ರಿಯಲ್ ಲೈಫ್ ಸ್ಟೋರಿ ಗೊತ್ತಾ? ಕೇಳಿದ್ರೆ ಕಣ್ಣೀರು ತರಿಸುತ್ತೆ

ನಟಿ ಶಕೀಲಾ ಅವರ ಹೆಸರು ಕೇಳಿದ್ರೆ ನಮಗೆ ನೆನಪಾಗೋದು ಅವರು ನಟಿಸುತ್ತಿದ್ದ ಬೋಲ್ಡ್ ಪಾತ್ರಗಳು. ಹೆಣ್ಣೆಂದರೆ ಸೀರೆಯನ್ನುಟ್ಟು, ಮಲ್ಲಿಗೆ ಮುಡಿದು ಜನರನ್ನು ರಂಜಿಸುತ್ತಿದ್ದ ಕಾಲದಲ್ಲಿ ನಟಿ ಶಕೀಲಾ ಬೋಲ್ಡ್ ಪಾತ್ರದಲ್ಲಿ ನಟಿಸುವ ಮೂಲಕ ಪಡ್ಡೆ ಹುಡುಗರ ಮನ ಗೆದ್ದಿದ್ದರು. ಶಕೀಲಾ ಸಿನಿಮಾ ನೋಡಲೆಂದೇ ಥಿಯೇಟರ್ ಮುಂದೆ ಹುಡುಗರು ಕ್ಯೂನಿಲ್ಲುತ್ತಿದ್ದರು. ಬಿಗ್ರೇಡ್ ಮೂವಿಗಳಲ್ಲಿಯೇ ಅಭಿನಯಿಸುತ್ತ ಭಾರೀ ಪ್ರೇಕ್ಷಕರ ಮನ ಗೆದ್ದ ನಟಿ ಆಗಿನ ಕಾಲದಲ್ಲಿ ನೀಲಿ ಚಿತ್ರಗಳ ರಾಣಿ ಎಂದೇ ಪ್ರಖ್ಯಾತಿ ಪಡೆದುಕೊಂಡವರು.

ಅದೊಂದು ಕಾಲದಲ್ಲಿ ಎಲ್ಲಾ ಸಿನಿಮಾ ಇಂಡಸ್ಟ್ರಿಗು ಬೇಕಿದ್ದಂತಹ ಶಕೀಲ ಏನಾದ್ರೂ? ಎಂಬ ಇಂಟರೆಸ್ಟಿಂಗ್ ಮತ್ತು ಶಕೀಲಾ ಬದುಕಿನ ಕರುಣಾಜನಕ ಕಥೆಯನ್ನು ನಾವಿವತ್ತು ತಿಳಿಸಲ್ಲಿದ್ದೇವೆ.

ಒಂದು ಸಿನಿಮಾದಲ್ಲಿ ನಟಿ ಶಕೀಲಾ ಅಭಿನಯಿಸಲು ಲಕ್ಷಾಂತರ ರೂಪಾಯಿ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಂತಹ ಕಾಲವದು, ಕನ್ನಡ ಸೇರಿದಂತೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಚಿತ್ರಗಳಲ್ಲಿ ಅಭಿನಯಿಸುತ್ತ ಪಂಚಭಾಷ ನಟಿ ಎಂದೆ ಪ್ರಖ್ಯಾತಿ ಪಡೆದಿದ್ದಂತಹ ಶಕೀಲಾ ಅವರು ಉದ್ದೇಶಪೂರ್ವಕವಾಗಿ ನೀಲಿ ಚಿತ್ರರಂಗಕ್ಕೆ ಪ್ರವೇಶ ಮಾಡಲಿಲ್ಲ.

ಬದಲಿಗೆ ಕೆಲ ಅನಿವಾರ್ಯ ಪರಿಸ್ಥಿತಿಗಳು ಅವರನ್ನು ಅಂತಹ ಸಿನಿಮಾಗಳಲ್ಲಿ ನಟಿಸುವಂತೆ ಪ್ರೇರೇಪಿಸಿದವು. ಅತಿ ಸಣ್ಣ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡಂತಹ ಶಕೀಲಾ ಒಟ್ಟು ಆರು ಮಕ್ಕಳಿದ್ದಂತಹ ಕುಟುಂಬದ ಜವಾಬ್ದಾರಿ ಅವರ ಮೇಲಿತ್ತು.

ಅಂದಿನಿಂದ ಪ್ರತಿದಿನ ತಮ್ಮ ಕುಟುಂಬಕ್ಕಾಗಿ ದುಡಿಯಲು ಪ್ರಾರಂಭ ಮಾಡಿದ್ದ ಶಕೀಲಾ ಅವರಿಗೆ 1994 ರಲ್ಲಿ ಅರೆ ನೀಲಿ ಸಿನಿಮಾಗಳಲ್ಲಿ ಅಭಿನಯಿಸುವಂತಹ ಅವಕಾಶ ದೊರಕುತ್ತದೆ. ಇಂತಹ ಸಿನಿಮಾಗಳಲ್ಲಿ ಹೆಚ್ಚು ಸಂಭಾನೆ ದೊರಕುತ್ತದೆ ಇದರಿಂದ ನನ್ನ ಕುಟುಂಬವನ್ನು ಚೆನ್ನಾಗಿ ಸಾಕಬಹುದು ಎಂಬ ಒಂದೇ ಒಂದು ಕಾರಣದಿಂದಾಗಿ ತಮ್ಮ ಸಂಪೂರ್ಣ ಬದುಕನ್ನೇ ಹಾಳು ಮಾಡಿಕೊಳ್ಳುವಂತಹ ನಿರ್ಧಾರಕ್ಕೆ ಶಕೀಲಾ ಬಂದಿದ್ದರು.

ಹೀಗಾಗಿ ಬಿಗೇಡ್ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ತಮ್ಮ ನಟನ ಕರಿಯರ್ ಅನ್ನು ಶಕೀಲಾ ಪ್ರಾರಂಭ ಮಾಡುತ್ತಾರೆ. ಆನಂತರ ಕನ್ನಡ ಹಿಂದಿ ಮಲಯಾಳಂ ತೆಲುಗು ತಮಿಳು ಹೇಗೆ ಮುಂತಾದ ಸಿನಿಮಾ ನಿರ್ದೇಶಕರು ಶಕೀಲಾರವರ ಡೇಟ್ಸ್ ಗಾಗಿ ಮನೆ ಮುಂದೆ ಕ್ಯೂ ನಿಲ್ಲುತ್ತಿದ್ದಂತಹ ಕಾಲ.

ಯಾವುದಾದರೂ ಸಿನಿಮಾದಲ್ಲಿ ನಟಿ ಶಕೀಲಾ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ತಿಳಿದರೆ ಸಾಕು ಆ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗುವುದು ಪಕ್ಕ ಎಂದು ಆಗಿನ ನಿರ್ದೇಶಕ ನಿರ್ಮಾಪಕರು ಲೆಕ್ಕಾಚಾರ ಹಾಕುತ್ತಿದ್ದಂತಹ ಕಾಲವದು. ಆದರೆ ಕಾಲ ಕ್ರಮೇಣ ಇಂತಹ ಮಾದಕ ನಟಿ ಕೂಡ ಅವಕಾಶ ವಂಚಿತರಾಗುವ ಪರಿಸ್ಥಿತಿ ಎದುರಿಸಬೇಕಾಯಿತು.

ಇದರ ನಡುವಿನಲ್ಲೇ ಅಂದರೆ, 2012ರಲ್ಲಿ ಅಧಿಕೃತವಾಗಿ ನಟಿ ಶಕೀಲಾ ಅವರು ‘ನಾನು ಇನ್ಮುಂದೆ ಬಿಗ್ರೇಡ್ ಸಿನಿಮಾಗಳಲ್ಲಿ ನಟಿಸುವುದಿಲ್ಲ’ ಎಂದು ಘೋಷಣೆ ಮಾಡಿಬಿಡುತ್ತಾರೆ. ಹೌದು ತನ್ನ ಕುಟುಂಬಕೋಸ್ಕರ ಸರ್ವಸ್ವವನ್ನು ತ್ಯಾಗ ಮಾಡಿದಂತಹ ನಟಿ ಶಕೀಲಾ ಅವರನ್ನು ಜನರು ಹಂತಹಂತವಾಗಿ ನಿಂದಿಸಲು ಆರಂಭಿಸುತ್ತಾರೆ. ಅಲ್ಲದೆ ಸ್ವಂತ ತಂಗಿ ಮಗನ ಮದುವೆಗೆ ಹೋದಾಗ ಶಕೀಲಾ ಕೊಟ್ಟಂತಹ ಉಡುಗೊರೆಯನ್ನು ಎಡಗೈಯಿಂದ ತೆಗೆದುಕೊಂಡು ಅವಮಾನ ಮಾಡುತ್ತಾರೆ.

ಮಾದಕ ಸಿನಿಮಾಗಳಲ್ಲಿ ಅಭಿನಯಿಸುವ ನಿನ್ನಂಥವಳಿಂದ ನಾನು ಗಿಫ್ಟ್ ತೆಗೆದುಕೊಳ್ಳಬೇಕಾ ಎಂದು ಅವಮಾನ ಮಾಡುತ್ತಾರೆ. ತನ್ನ ಹೆತ್ತ ತಾಯಿಗಾಗಿ ಒಡಹುಟ್ಟಿದವರಿಗಾಗಿ ಸರ್ವಸ್ವವನ್ನು ತ್ಯಾಗ ಮಾಡಿದಂತಹ ಶಕೀಲಾ ಅವರನ್ನು ಕುಟುಂಬದವರೇ ದೂರ ಮಾಡಿ ಬಿಡುತ್ತಾರೆ.

ಅದೊಂದು ಕಾಲದಲ್ಲಿ ದಿನವೊಂದಕ್ಕೆ ಲಕ್ಷಾಂತರ ರೂಪಾಯಿ ದುಡಿಯುತ್ತಿದ್ದಂತಹ ನಟಿ ಶಕೀಲಾ ತನ್ನನ್ನು ನಂಬಿದವರಿಗೆ ಹಾಗೂ ಕುಟುಂಬಸ್ತರಿಗೆ ಹಣವನ್ನು ನೀರಿನಂತೆ ಖರ್ಚು ಮಾಡುತ್ತಿದ್ದರು.

ಆದರೆ ಯಾವಾಗ ಅವರಿಂದಲೇ ಈ ರೀತಿ ಮೋಸಕ್ಕೊಳಗಾದರೊ, ಎಲ್ಲರನ್ನು ತೊರೆದು ಓರ್ವ ಹೆಣ್ಣು ಮಗಳನ್ನು ದತ್ತು ಪಡೆದು ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಅಲ್ಲದೆ ತಾವು ವೃತ್ತಿ ಬದುಕಿನಿಂದ ದುಡಿದಂತಹ ಹಣದಲ್ಲಿ ಸಮಾಜ ಸೇವೆಯನ್ನು ಮಾಡುತ್ತ ಬಡವರ ನೆರವಿಗೆ ನಿಂತಿರುವಂತಹ ಅದ್ಭುತ ನಟಿ ಈ ಶಕೀಲಾ.

Rakesh arundi

Leave a Reply

Your email address will not be published. Required fields are marked *