ಧರ್ಮಸ್ಥಳ ಸರಣಿ ಕೃತ್ಯಗಳ ತನಿಖೆ: ಎಸ್‌ಐಟಿ ತಂಡದ ಮೆಗಾ ಅಪ್ಡೇಟ್!
ಸ್ನೇಹಿತರೆ ನಮಸ್ಕಾರ ನಾನು ನಿಮ್ಮ ರಾಕೇಶ್ ಆರುಂಡಿ.. ಧರ್ಮಸ್ಥಳ ಸರಣಿ ಕೃತ್ಯಗಳ ಕೇಸ್‌ಗೆ ಸಂಬಂಧ ಪಟ್ಟ ಹಾಗೆ
ಇವತ್ತು ಏನೆಲ್ಲಾ ಡೆವಲೆಪ್‌ಮೆಂಟ್ಸ್ ಆಗ್ತಿದೆ ಅನ್ನೋದನ್ನು ನೋಡ್ಥಾ ಹೋಗೋಣ.. ಎಸ್‌ಐಟಿ ಟೀಮ್ ಇವತ್ತು
ಮಂಗಳೂರಿಗೆ ಎಂಟ್ರಿ ಕೊಟ್ಟಾಗಿದೆ.. ಕೇಸ್‌ಗೆ ಸಂಬಂಧ ಪಟ್ಟ ಹಾಗೆ ಮುಂದಿನ ಇನ್ವಿಸ್ಟೇಗೆಷನ್‌ಗೆ ಪ್ರಣವ ಮೊಹಂತಿ
ಅಂಡ್ ಅನುಚೇತ್ ಸೇರಿದಂತೆ ಸೌಮ್ಯಲತಾ ಇನ್‌ಕ್ಲೂಡೆಡ್ ಜಿತೇಂದ್ರ ಕುಮಾರ್ ಸಾಕ್ಷಿದಾರ ಕೊಟ್ಟಿರೋ ದೂರಿನ
ಆಧಾರದಲ್ಲಿ ಕೇಸ್‌ನಾ ಮುನ್ನಡೆಸಲಾಗ್ತಿದೆ. ಇನ್ನು ಇವತ್ತು ನಾಳೆ ಏನೆಲ್ಲಾ ಪ್ರೊಸಿಜರ್ಸ್ ಫಾರ್ಮಾಲಿಟಿಯಾಗಿ ಎಸ್‌ಐಟಿ
ಟೀಮ್‌ನಲ್ಲಿ ಇರುತ್ತೆ ಅನ್ನೋದನ್ನು ನೋಡೋದಕ್ಕೂ ಮುನ್ನ ಈಗಾಗ್ಲೇ ಈ ಕೇಸ್‌ನಲ್ಲಿ ಪದ್ಮಲತಾ ಕೇಸ್ ಕೂಡ
ಮುನ್ನೆಲೆಗೆ ಬಂದಿದ್ದೂ ಎಸ್‌ಐಟಿ ಒಳಗೆ ಈ ಕೇಸ್‌ನಾ ಕೂಡ ಸೇರಿಸಲಾಗುತ್ತಾ ಅನ್ನೋದನ್ನು ಟೀಮ್ ನಿರ್ಧಾರ
ಮಾಡಲಿದೆ..
ಸ್ನೇಹಿತರೆ ಇನ್ನು ಕೇರಳದ ಜೋಯ್ ತಂದೆಯ ಆಕ್ಸಿಡೆಂಟ್ ಕೇಸ್.. ಅನನ್ಯಾ ಭಟ್ ಕೇಸ್‌ಗಳು ಕೂಡ
ಚಾಲ್ತಿಯಲ್ಲಿದ್ದು ಈಗಾಗ್ಲೇ ಎಸ್‌ಐಟಿ ಟೀಮ್ ಈ ಎಲ್ಲಾ ಕೇಸ್‌ಗಳ ದಾಖಲೆಗಳ ಕಡೆ ಗಮನ ಹರಿಸ್ತಿದೆ.. ಸರ್ಕಾರದ
ಆದೇಶದಂತೆ,, ಮಂಗಳೂರಿನ ಎಸ್‌ಪಿ ಕಚೇರಿಯಿಂದ್ಲೇ ಎಸ್‌ಐಟಿ ಟೀಮ್ ಆಪರೇಟ್ ಮಾಡುತ್ತೆ.. ಇದಕ್ಕೆ ಸಿಐಡಿ ಈ
ಟೀಮ್‌ಗೆ ಕಚೇರಿ ಕೂಡ ಕೊಡಬಹುದು.. ಈಗಾಗ್ಲೇ ನಾಲ್ಕು ಜನ ಸೀನಿಯರ್ ಐಪಿಎಸ್ ಅಧಿಕಾರಿಗಳೇ ಹಾಗಿರೋದ್ರಿಂದ
ಕೆಲವು ಟೀಮ್‌ಗಳನ್ನು ಫಾರ್ಮ್ ಮಾಡುವ ಕಡೆ ಇವತ್ತು ನಾಳೆ ಯೋಜನೆ ಹಾಕಿಕೊಳ್ಳಬಹುದು.. ಅಂದ್ರೆ ಫಾರೆನ್ಸಿಕ್,
ಫಿಂಗರ್ ಪ್ರಿಂಟಿಂಗ್ ಸೇರಿದಂತೆ ಆರೋಪಿಯ ಫುಲ್ ಡಿಟೈಲ್ಸ್, ಜೊತೆಗೆ ಬೆಳ್ತಂಗಡಿ ಪೊಲೀಸ್ ಲಿಮಿಟ್ಸ್‌ನಲ್ಲಿ
ನಡೆದಿರೋ ಎಲ್ಲಾ ಮಿಸ್ಸಿಂಗ್ ಕಂಪ್ಲೆಂಟ್ ಹಾಗೂ ಲೈಂಗಿಕವಾಗಿ ಬಳಸಿಕೊಂಡು ಹತ್ಯೆ ಮಾಡಲಾದ ಎಲ್ಲಾ ಕೇಸ್‌ಗಳ
ರಿಪೋರ್ಟ್‌ಗಳನ್ನು ಕೂಲಂಕುಷವಾಗಿ ಸ್ಟಡಿ ಮಾಡಿ, ನೇರವಾಗಿ ಸ್ಥಳ ಮಹಜರಿಗೆ ಕರೆದುಕೊಂಡು ಹೋಗೋ ಸಾಧ್ಯತೆ
ಇದೆ..
ಸ್ನೇಹಿತರೆ.. ಇದೆಲ್ಲವೂ ಹೋಮ್ ಮಿನಿಸ್ಟರ್‌ಗೆ ಡೈರೆಕ್ಟ್ಲಿ ರಿಪೋರ್ಟ್ ಹಾಗೋದ್ರಿಂದ.. ಚಾರ್ಜ್ ಶೀಟ್ ಸಲ್ಲಿಸಿದ
ಮೇಲೆ ಬೆಳ್ತಂಗಡಿ ಕೋರ್ಟ್‌ಗೆ ಒಂದು ಕಾಪಿ ಸೇರಿ ಸರ್ಕಾರಕ್ಕೆ ಒಂದು ರಿಪೋರ್ಟ್‌ನಾ ಪ್ರತಿ ಸಲ್ಲಿಕೆಯಾಗಲಿದೆ. ಇನ್ನು
ಡಿಪೆಂಡಿಂಗ್ ಅಪಾನ್‌ಅ ದಿ ಅಫೆನ್ಸ್ ಈ ಕೇಸ್ ಯಾಔ ಕೋರ್ಟ್ ವ್ಯಾಪ್ತಿಗೆ ಬರಲಿದೆ ಅನ್ನೋದು ಪ್ರೂವ್ ಆಗಲಿದೆ..
ಇನ್ನು ಈ ಕೇಸ್‌ನಲ್ಲಿ ಇನ್ನು ಯಾರೂ ಅರೆಸ್ಟ್ ಆಗದೇ ಇರೋದ್ರಿಂದ ಆ ವ್ತಕ್ತಿ ತೋರಿಸೋ ಮೃತದೇಹಗಳ ಆಧಾರದ
ಮೇಲೆ.. ಈ ಕೇಸ್ ಏನಾದ್ರೂ ತಿರುವು ಕೂಡ ಪಡೆದುಕೊಳ್ಳಬಹುದು.. ಇನ್ನು ಒಂದ್ಕಡೆ.. ಕೆಲವ್ರು ಈಗಾಗ್ಲೇ ದೇವಸ್ಥಾನದ
ಮುಂದೆಯೇ ಸೌಜನ್ಯಾ ನ್ಯಾಯಕ್ಕಾಗಿ ಹೋರಾಡ್ತಿರೋ ಅಂತಾ ಪ್ರಕರಣಗಳಿಂದ ಲಾ ಅಂಡ್ ಆರ್ಡ್‌ರ್ ಸಮಸ್ಯೆಯಾಗಿ ಈ
ಕೇಸ್ ಮುಂದಕ್ಕೆ ಹೋದ್ರು ಅಚ್ಚರಿ ಇಲ್ಲ.. ಆಗಾಗಿ ಈ ಕೇಸ್‌ನಲ್ಲಿ ತುಂಬಾ ಎಚ್ಚರಿಕೆಯಿಂದ ಹೋರಾಟಗಾರರು ಕೂಡ
ಇರಬೇಕಾಗುತ್ತೆ.. ಒಟ್ಟಾರೆಯಾಗಿ ಕಂಪ್ಲೀಟ್ ಈ ರಿಪೋರ್ಟ್ 5 ರಿಂದ 6 ತಿಂಗಳು ಸಮಯ ತೆಗೆದುಕೊಂಡ್ರು ಅಚ್ಚರಿ
ಏನಿಲ್ಲ.. ಇನ್ನು ಈಗಾಗ್ಲೇ ದೂರುದಾರ ಕೊಟ್ಟಿರೋ ತಲೆಬುರಡೆಯನ್ನು ಎಫ್‌ಎಸ್‌ಎಲ್ ಟೀಮ್‌ಗೆ ಕಳಿಸೋಕೆ ಎಲ್ಲಾ
ಸಿದ್ಧತೆಗಳು ಕೂಡ ನಡೆದಿದ್ದು ಅದ್ರ ಮಾಹಿತಿಯ ಆಧಾರದ ಮೇಲೆ ಈ ಕೇಸ್ ಇನ್ನಷ್ಟು ಹೈಪ್ ತೆಗೆದುಕೊಳ್ಳುವ
ಚಾನ್ಸ್ ಕೂಡ ಇದೆ.. ಇನ್ನು ಒಂದ್ಕಡೆ.. ಸೌಜನ್ಯಾ ತಾಯಿ ಕೂಡ ನನ್ನ ಮಗಳ ಕೇಸ್‌ನಾ ಕೂಡ ಎಸ್‌ಐಟಿ ವ್ಯಾಪ್ತಿಗೆ
ಸೇರಿಸಿ ಅಂತಾ ಮನವಿ ಮಾಡಿದ್ದಾರೆ.. ಅದ್ರೆ, ಸರ್ಕಾರ ಕಡ್ಡಾಯವಾಗಿ ಈ ಕೇಸ್‌ನಲ್ಲಿ ಸೌಜನ್ಯಾ ಪ್ರಕರಣ ಸೇರಿಸುವ
ಅವಶ್ಯಕತೆ ಇಲ್ಲ ಅನ್ನೋದನ್ನು ಹೇಳಿರೋದ್ರಿಂದ ತನಿಖಾಧಿಕಾರಿಗಳು ಹೇಗೆ ಈ ಸರಣಿ ಕೃತ್ಯಗಳ ಆರೋಪವನ್ನು
ತೆಗೆದುಕೊಂಡು ಹೋಗ್ತಾರೋ ಗೊತ್ತಿಲ್ಲ. ಇದ್ರ ಬೆನ್ನಲ್ಲೆ.. ಇನ್ನು ಅಚ್ಚರಿಯ ವಿಷ್ಯ ಅಂದ್ರೆ ಅನುಚೇತ್ ಅವ್ರ ಕೆಲಸದ
ದಕ್ಷತೆ ಬಗ್ಗೆ ವ್ಯಾಪಕ ಚರ್ಚೆಗಳು ಶುರುವಾಗಿರೋದು..
ಅನುಚೇತ್ ರವರು ಸೌಜನ್ಯ ಹತ್ಯೆ ನಡೆದ ಸಂದರ್ಭದಲ್ಲಿ ಕರಾವಳಿ ಪ್ರದೇಶದಲ್ಲಿ ಅಧಿಕಾರದಲ್ಲಿದ್ದರು ಅನ್ನುವುದು ಇಲ್ಲಿ
ಗಮನಾರ್ಹ. ಧರ್ಮಸ್ಥಳದಲ್ಲಿ 2012 ರಲ್ಲಿ ಸೌಜನ್ಯ ಅತ್ಯಾಚಾರ ಕೊಲೆ ಆದ ಸಂದರ್ಭದಲ್ಲಿ ಖಡಕ್ ಅಧಿಕಾರಿಯಾಗಿದ್ದ
ಅನುಚೇತ್ ಪುತ್ತೂರಿನಲ್ಲಿ ಎಎಸ್ಪಿ ಆಗಿದ್ದರು. ಅಂದು ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಯುತ್ತಿತ್ತು. ಸೌಜನ್ಯ ಅತ್ಯಾಚಾರ
ಕೊಲೆ ನಡೆದ ಸಂದರ್ಭ ಕೂಡ ಎಸ್ಐಟಿ ರಚನೆಯಾಗಿತ್ತು. ಅದಾಗ ತಾನೇ ಆರೋಪಿ ಸಂತೋಷ ರಾವ್ ನ ಬಂಧನವಾಗಿತ್ತು.
ಈ ಪ್ರಕರಣದಲ್ಲಿ ಇನ್ನೂ ಮೂರು ನಾಲ್ಕು ಜನ ಇದ್ದಾರೆ ಎಂದು ಅನುಚೇತ್ ರವರು ಹೇಳಿದ್ದರು ಎಂದು ವರದಿಯಾಗಿತ್ತು.
ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದ್ದ ಸಂದರ್ಭ ಏಕಾಏಕಿ ಅನುಚೇತ್ ರನ್ನು ತಕ್ಷಣ ವರ್ಗ ಮಾಡಿ ಆ ಜಾಗಕ್ಕೆ
ಬೇರೆಯವರನ್ನು ತರಲಾಗಿತ್ತು.
ಈಗ ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿಯವರ ಪಾರದರ್ಶಕತೆ ಮತ್ತು ಅನುಚೇತ್’ಗೆ ಕರಾವಳಿಯಲ್ಲಿ ಈ ಹಿಂದೆ ಇದ್ದ
ಅನುಭವ ಮತ್ತು ಮಾಹಿತಿ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗಲು ಸಹಾಯ ಮಾಡಲಿದೆ ಎನ್ನಲಾಗುತ್ತಿದೆ. ಅವತ್ತಿನ SIT
ನಲ್ಲಿದ್ದ ಅನುಚೇತ್ ಮತ್ತೆ ಧರ್ಮಸ್ಥಳ ಹೂತ ಶವಗಳ ಪ್ರಕರಣಗಳ ತನಿಖಾ ತಂಡದಲ್ಲಿ ಅನುಚೇತ್ ಸೇರಿಕೊಂಡಿದ್ದಾರೆ.
ಒಟ್ಟಾರೆ ಮಿರಾಕಲ್ ನಡೆದುಹೋಗಿದೆ
ಇನ್ನು ಸ್ನಹಿತರೆ.. 39 ವರ್ಷಗಳ ಹಿಂದಿನ ಪದ್ಮಲತಾ ಹತ್ಯೆ ಪ್ರಕರಣ ಮತ್ತೆ ಮುನ್ನಲೆಗೆ
ಇತ್ತೀಚಿನ ಶವ ಹೂತುಹಾಕಿದ ಪ್ರಕರಣದ ಬೆನ್ನಲ್ಲೇ, ಧರ್ಮಸ್ಥಳದಲ್ಲಿ ನಡೆದ 39 ವರ್ಷದ ಹಿಂದಿನ ಪದ್ಮಲತಾ ಹತ್ಯೆ
ಪ್ರಕರಣ ಮತ್ತೆ ಚರ್ಚೆಯ ಕೇಂದ್ರಬಿಂದುವಾಗಿದ್ದು, ನ್ಯಾಯಕ್ಕಾಗಿ ಪ್ರತಿಭಟನೆಗಳು ಜೋರಾಗುತ್ತಿವೆ.
ಪದ್ಮಲತಾ ನಾಪತ್ತೆ ಮತ್ತು ಹತ್ಯೆ ಪತ್ತೆ:
1986ರ ಡಿಸೆಂಬರ್ 22ರಂದು, ಧರ್ಮಸ್ಥಳದ ಬೋಳಿಯಾರು ಗ್ರಾಮದ ಪದ್ಮಲತಾ ಉಜಿರೆ ಕಾಲೇಜಿಗೆ ಹೋಗುತ್ತಿದ್ದ ವೇಳೆ
ನಾಪತ್ತೆಯಾದರು. 56 ದಿನಗಳ ಶೋಧನೆ ಬಳಿಕ, ನೇತ್ರಾವತಿ ನದಿಯಲ್ಲಿ ಕೈ-ಕಾಲು ಕಟ್ಟಿದ ಸ್ಥಿತಿಯಲ್ಲಿ ಮೃತದೇಹ
ಅಸ್ಥಿಪಂಜರದ ರೂಪದಲ್ಲಿ ಪತ್ತೆಯಾಯಿತು. ಸಾಕಷ್ಟು ಹೋರಾಟಗಳ ಬಳಿಕ ಸಿಐಡಿ ತನಿಖೆ ನಡೆಸಿದರೂ ಯಾವುದೇ
ಆರೋಪಿಗಳ ಪತ್ತೆಯಾಗದ ಕಾರಣ, ಪ್ರಕರಣವನ್ನು ಮುಚ್ಚಿ ಹಾಕಲಾಯ್ತು. ಪದ್ಮಲತಾ, ಧರ್ಮಸ್ಥಳದ ಪ್ರಭಾವಿ
ಕಮ್ಯೂನಿಸ್ಟ್ ಮುಖಂಡರ ಮಗಳಾಗಿದ್ದರು. ಅತ್ಯಾ*ಚಾರ ನಡೆಸಿ ಕೊಲೆ ಮಾಡಿರಬಹುದೆಂಬ ಅನುಮಾನಗಳ ನಡುವೆ,
ಇದೀಗ ಈ ಹಳೆಯ ಪ್ರಕರಣ ಮತ್ತೆ ಬೆಳಕಿಗೆ ಬಂದಿದೆ.
ಪದ್ಮಲತಾದ ಸಹೋದರಿ ಚಂದ್ರಾವತಿ ನ್ಯಾಯಕ್ಕೆ ಒತ್ತಾಯ
ಪದ್ಮಲತಾ ಸಹೋದರಿ ಚಂದ್ರಾವತಿ, “ನಮ್ಮ ಸಹೋದರಿಯ ಹತ್ಯೆಗೆ ಈವರೆಗೆ ನ್ಯಾಯ ಸಿಕ್ಕಿಲ್ಲ. ಇತ್ತೀಚಿನ ಪ್ರಕರಣದ
ನಡುವೆ, ನಮ್ಮ ಸಹೋದರಿಯ ಪ್ರಕರಣವನ್ನೂ ಎಸ್‌ಐಟಿ ತನಿಖೆಗೆ ಒಳಪಡಿಸಬೇಕು,” ಎಂದು ಒತ್ತಾಯಿಸಿದ್ಧಾರೆ..
ಧರ್ಮಸ್ಥಳದ ಶವ ಹೂತುಹಾಕಿದ ಪ್ರಕರಣವನ್ನು ನಿಖರವಾಗಿ ತನಿಖೆ ಮಾಡಲು ರಾಜ್ಯ ಸರ್ಕಾರದಿಂದ ವಿಶೇಷ ತನಿಖಾ ತಂಡ
ರಚಿಸಲಾಗಿದೆ. ಈಗ ಪದ್ಮಲತಾ ಹತ್ಯೆ ಪ್ರಕರಣವನ್ನೂ ಈ ತಂಡ ತನಿಖೆಗೆ ತೆಗೆದುಕೊಳ್ಳುತ್ತದೆಯಾ ಎಂಬ ಕುತೂಹಲ
ಜನರಲ್ಲಿ ಮೂಡಿದೆ.