“ಧರ್ಮಸ್ಥಳ ಹತ್ಯೆ-ಅತ್ಯಾಚಾರ ಕೇಸ್: ಭೀಮನ ವಿಚಾರಣೆಯಿಂದ ಬಯಲಾಗುತ್ತಿರುವ ಶಾಕ್ ಮಾಡಿದ ಸತ್ಯ!”
ಸ್ನೇಹಿತರೆ ನಮಸ್ಕಾರ ನಾನು ನಿಮ್ಮ ರಾಕೇಶ್ ಆರುಂಡಿ.. ಧರ್ಮಸ್ಥಳ ಸುತ್ತಾ ಮುತ್ತಾ ನಡೆಇದರೋ ನಿಗೂಢ ಹತ್ಯೆ,
ಹಾಗೂ ಲೈಂಗಿಕ ದೌರ್ಜನ್ಯದ ಕೇಸ್ಗೆ ಸಂಬಂಧ ಪಟ್ಟ ಹಾಗೆ ಈ ಕ್ಷಣದ ಎಕ್ಸ್ ಕ್ಲೂಸಿವ್ ಅಪ್ಡೇಟ್ ಏನಿದೆ
ಅನ್ನೋದನ್ನು ನೋಡ್ತಾ ಹೋಗೋಣ. ದೂರುದಾರ ಭೀಮ ಸಾಕ್ಷಿಯಾಗಿ ಬುರುಡೆ ಸಮೇತ ಈಗಾಗ್ಲೇ ಪೊಲೀಸರ
ವಿಚಾರಣೆ ದುರಿಸಿದ್ದಾಯ್ತು.. ಸತತ 8 ಗಂಟೆಗಳ ಕಾಲ ಬಿಡುವಿಲ್ಲದ ವಿಚಾರಣೆಗೆ ಭೀಮನೂ ಕೂಡ
ಅಚ್ಚರಿಗೊಳಗಾಗಿದ್ದಾನೆ..ಕಾರಣ ಡಿಐಜಿ ಎಮ್ನೆ ಅನುಚೇತ್ ಅಂಡ್ ಆಂತರಿಕ ಭದ್ರತಾ ವಿಭಾಗದ ಎಸ್ಪಿ
ಜಿತೇಂದ್ರಕುಮಾರ್ ದಯಾಮ ಟೀಮ್ ಪಟ್ಟು ಹಿಡಿದು ತಿಳಿದುಕೊಳ್ಳಬೇಕಾದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಪಡೆದೇ
ತೀರಬೇಕು ಅನ್ನೋ ಹಠದಲ್ಲಿದ್ದರು.. ಹಾಗೂ ಅನಿವಾರ್ಯವಾಗಿ ಈ ಕೇಸ್ನಲ್ಲಿ ಎಲ್ಲೂ ಕೂಡ ಗೊಂದಲಗಳು
ಇರಬಾರದು ಅನ್ನೋ ಕಾರಣದಿಂದ್ಲೇ ಬೆಳಗ್ಗೆ, 10:15 ಕ್ಕೆ ವಿಚಾರಣೆ ಶುರು ಮಾಡಿದ ಎಸ್ಐಟಿ ಟೀಮ್ ಬರೋಬ್ಬರಿ 8
ವರೆ ಗಂಟೆ ವಿಚಾರಣೆ ಮಾಡಿದೆ..
ಸ್ನೇಹಿತರೆ. ಭೀಮ ವಿಚಾರಣೆ ಮುಗಿಸಿ ವಾಪಾಸ್ ವಕೀಲರ ಜೊತೆಗೆ ವಾಪಾಸ್ ಹೊರಟಾಗ ಸರಿಯಾಗಿ ಸಮಯ ರಾತ್ರಿ
07:20.. ಮಂಗಳೂರಿನ ಕದ್ರಿ ಮಲ್ಲಿಕಟ್ಟೆಯ ಸರ್ಕಾರಿ ಅತಿಥಿ ಗೃಹದಿಂದ ಸುರಿಯೋ ಮಳೆಯಲ್ಲೇ ವಕೀಲರ ಕಾರತ್ತಿ
ವಾಪಾಸ್ ವಕೀಲರ ಮನೆ ಕಡೆ ವಾಪಾಸ್ ಆದ್ರು.. ಸ್ನೇಹಿತರೆ ಮುಸುಕು ಧರಿಸಿದ್ದ ದೂರುದಾರ ಭೀಮ ಒಬ್ಬ ಮಹಿಳಾ
ಲಾಯರ್..ಹಾಗೂ ಇನ್ನೊಬ್ಬ ಪುರುಷ ಲಾಯರ್ ಕೂಡ ಇದ್ದರು.. ವಿಚಾರಣೆಯ ಗೌಪ್ಯತೆಯನ್ನು, ಭೀಮ ಕೊಟ್ಟ
ಉತ್ತರಗಳನ್ನು ಅನೇಕ ವಿಚಾರಣೆಗಳಲ್ಲಿ ಸೀನಿಯರ್ ಪೊಲೀಸ್ ಆಫೀಸರ್ಗಳಿಂದ ಪಡೆಯಬಹುದಾದ್ರು.. ಈ ಕೇಸ್ನಲ್ಲಿ
ಸದ್ಯಕ್ಕೆ ಭೀಮ ಬಿಚ್ಚಿಟ್ಟ ಕೆಲವು ರಹಸ್ಯಗಳ ಬಗ್ಗೆ ಇನ್ನು ಆ ಕೂತೂಹಲ ಹಾಗೆ ಉಳಿದಿದೆ.. ಸದ್ಯ ಈ ಮದ್ಯಂತರ
ವರದಿಯನ್ನು ಕೋರ್ಟ್ಗೆ ಸಲ್ಲಿಕೆ ಮಾಡಲಾಗುತ್ತೆ…ಹಾಗಾಗಿ ಇದೂ ಕೂಡ ಮುಂದೆ ಈ ಕೇಸ್ನಲ್ಲಿ ವ್ಯಾಲಿಡ್
ಎವಿಡೆನ್ಸ್ ಆಗಿ ಬದಲಾಗಲಿದೆ.. ಭಿಮನನ್ನು ಪೊಲೀಸನವ್ರು ಕಸ್ಟಡಿಗೆ ತೆಗೆದುಕೊಳ್ತಾರಾ ಅನ್ನೋ ಕನ್ಫ್ಯಷನ್ ಕುಡ
ಇದ್ದವು.. ಆದ್ರೆ, ಅಗ್ನಾತ ಸ್ಥಳಕ್ಕೆ ಮತ್ತೆ ಭೀಮ ವಾಪಾಸಾಗಿದ್ದು,ಸದ್ಯ ಭೀಮನ ರಕ್ಷಣೆಯನ್ನು ಪರ ವಕೀಲರೇ
ನೋಡಿಕೊಳ್ಳಲಿದ್ದಾರೆ.. ಆತನಿಗೆ ಅಲ್ಲೇ ಸುಭದ್ರತೆ ಇದೆ ಅನ್ನೋದು ಆತನ ನಂಬಿಕೆ ಕೂಡ..
ಆದ್ರೆ, ವಕೀಲ ಧನಂಜಯ ಅವ್ರ ಬಳಿ ಭೀಮ ಕನ್ಫೆಸ್ ಮಾಡಿರೋದನ್ನು ನೋಡಿದ್ರೆ, ವಿಚಾರಣೆ ವೇಳೆಯೂ ಆತ ವೆರಿ
ಕಾನ್ಫಿಡೆಂಟ್ ಆಗಿ ಆನ್ಸರ್ ಮಾಡಬೇಕಾಗುತ್ತೆ… ಎಲ್ಲಿಯೂ ವಿಚಲಿತನಾಗದೇ ಭಯಭೀತಿಗೊಳ್ಳದೇ, ಹೌದು ನನಗೆ
ಪಾಪಪ್ರಜ್ಞೆ ಕಾಡುತ್ತಿದೆ; ನಾನು ಹೇಳಿದ್ದೆಲ್ಲವೂ ಸತ್ಯ. ನಾನು ಶವ ಹೂತಿಟ್ಟ ಜಾಗ ತೋರಿಸುತ್ತೇನೆ. ನನಗೆ ಎಲ್ಲವೂ
ನೆನಪಿದೆ. ಹೂತಿಟ್ಟ ಶವಗಳಲ್ಲಿ ಮಹಿಳೆಯರದ್ದೇ ಹೆಚ್ಚು, ಕೆಲ ಮಹಿಳೆಯರ ಶವಗಳು ನಗ್ನ ಸ್ಥಿತಿಯಲ್ಲಿದ್ದವು. ಇವೆಲ್ಲ
ಅನಾಥ ಶವಗಳು ಅಂತ ನಾನು ಭಾವಿಸಿದ್ದೆ. ಅನಂತರ ನನಗೆ ಅನುಮಾನ ಬರಲು ಶುರುವಾಯ್ತು. ನನಗೆ ಯಾರ ಭಯವೂ,
ಒತ್ತಡವೂ ಇಲ್ಲ. ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿ ಎಂದೇ ನಿರ್ಬೀತಿಯಿಂದ ಒಪ್ಪಿಕೊಂಡಿದ್ಧಾನೆ ಎಂದು
ಸದ್ಯದ ಮೂಲಗಳು ಸ್ಪಷ್ಟಪಡಿಸ್ತಿವೆ.. ಒಂದು ವೇಳೆ, ವಿಚಾರಣೆ ಎಲ್ಲಾ ಮುಗಿದಿದ್ರೆ, ತನಿಖೆಗೆ ತಡ ಮಾಡದೇ ಇಂದೇ
ಆತನನ್ನು ಸ್ಥಳ ಮಹಜರಿಗೆ ಕರೆದುಕೊಂಡು ಹೋಗಬೇಕು.. ಇನ್ನು ಒಂದು ಚರ್ಚೆ ಕೂಡ ಈ ನಡುವಲ್ಲಿ ಸಾಮಾಜಿಕ
ವಲಯದಲ್ಲಿಯೂ ಕೂಡ ಕೇಳಿ ಬಂತು.. ಭೀಮ ಬುರುಡೆನಾ ಮೊದಲೇ ತೋರಿಸಿ ತಪ್ಪು ಮಾಡಿಬಿಟ್ನಾ ಅಂತಾ.. ನೋಡಿ
ಸುಪ್ರೀಂ ಕೋರ್ಟ್ ವಕೀಲರಾಗಿರೋ ಕೆವಿ ಧನಂಜಯ ಬಳಿ ಭೀಮ ಸತ್ಯವನ್ನೆಲ್ಲಾ ಒಪ್ಪಿಕೊಳ್ಳೋ ಮುನ್ನವೇ ಆತ ತಾನೂ
ಹುತಿಟ್ಟ ಧರ್ಮಸ್ಥಳದ ಗುಡ್ಡದ ಬಳಿಯ ಆ ಜಾಗಕ್ಕೆ ಹೋಗಿ ಒಂದು ತಲ ಬುರುಡೆಯನ್ನು ಚೀಲದಲ್ಲಿ ತುಂಬಿ ಸಾಕ್ಷಿಯಾಗಿ
ತಂದುಬಿಟ್ಟಿದ್ದ…ಬಹುಶಃ ಮೊದ್ಲೇ ಧನಂಜಯ ಅವ್ರ ಬಳಿ ಧರ್ಮಸ್ಥಳದ ಹತ್ಯಾಕಾಂಡಗಳ ಸತ್ಯವನ್ನೆಲ್ಲಾ ಬಿಚ್ಚಿಟ್ಟಿದ್ರೆ,
ಈ ಕೆಲಸ ಮಾಢೋಕೆ ಸುಪ್ರೀಂ ವಕೀಲಾಗಿರೋ ಧನಂಜಯ ಅವ್ರು ಹೇಳ್ತಾ ಇರಲಿಲ್ಲ ಅನ್ನೋದೇ ವಕೀಲರ ವಲಯದಲ್ಲಿನ
ಚರ್ಚೆ.. ಅದಕ್ಕೆ ಕಾರಣ ಕೂಡ ಇದೆ.. ಆ ಮೃತದೇಹವನ್ನೇ ಆಕೆ ಮೊದ್ಲೂ ಆಯ್ಕೆ ಮಾಡಿಕೊಂಡೆ.. ಅದನ್ನು ತೆಗೆಯೋಕೆ
ಯಾರೂ ಹೇಳಿದ್ರು.. ಏನಕ್ಕೆ ತೆಗೆದುಕೊಂಡು ಬಂದೆ ಅನ್ನೋ ರೀತಿಯಾಗಿ ಎಲ್ಲಾ ಪ್ರಶ್ನೆಗಳು ಹೇಳುತ್ತವೆ.. ಅದಕ್ಕಿಂತ
ಮುನ್ನ, ಕ್ರೈಮ್ ಸೀನ್ಗಳಲ್ಲಿ ನಾವೇ ಮೊದಲು ಅವುಗಳನ್ನು ಮುಟ್ಟೋ ಮೂಲಕ ಕೆಲವು ಸಾಕ್ಷಿಗಳಿಗೆ ಏನನ್ನು ನಾಶ
ಮಾಡಲು ಅವಕಾಶ ಕೊಡಬಾರದು.. ಅದೇನೇ ಇರಲಿ.. ಈ ಕೇಸ್ಗೆ ಮೈಲೇಜ್ ಬೇಕಾಗಿತ್ತು… ನ್ಯಾಷನಲ್ ಲೆವೆಲ್ಗೆ
ಚರ್ಚೆಗಳು ಶುರುವಾಗಬೇಕಿತ್ತು.. ಸೆನ್ಸೇಷನ್ ಹುಟ್ಟುಹಾಕಬೇಖಿತ್ತು.. ಎಲ್ಲರೂ ಇದರ ಸೆನ್ಸಿಟಿವಿಟಿ ಅರ್ಥ
ಮಾಡಿಕೊಳ್ಳಬೇಕಾದ್ರೆ, ಇಲ್ಲಿ ಬುರುಡೆಯನ್ನು ಮೊದಲು ಸಾಕ್ಷಿ ರೂಪದಲ್ಲಿ ಕೋರ್ಟ್ ಒಪ್ಪಿಸಬೇಕು ಅನ್ನೋದು
ದೂರುದಾರ ಭೀಮನಿಗೆ ಚೆನ್ನಾಗಿ ಗೊತ್ತಿದೆ.. ಆದಕಾರಣ ಈ ಪುಟ್ಟ ತಪ್ಪನ್ನು ಆತ ಮಾಡಿದ್ದಾನೆ..
ಸೌಜನ್ಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಹಾಗೂ ಧರ್ಮಸ್ಥಳದ ಸುತ್ತಮುತ್ತ ನಡೆದಿದೆ ಎನ್ನಲಾದ ಸರಣಿ ಕೊಲೆಗಳ
ವರದಿ ಮಾಡುವ ವಿಚಾರದಲ್ಲಿ ನ್ಯಾಯಾಲಯಗಳ ಆದೇಶವನ್ನು ಪಾಲಿಸುವುದರ ಜೊತೆಗೆ, ಸತ್ಯ ಸುದ್ದಿಯ ಪ್ರಸಾರವನ್ನು
ಮುಂದುವರಿಸಲು ಡಿಜಿಟಲ್ ಮಾಧ್ಯಮಗಳು ಮತ್ತು ಯೂಟ್ಯೂಬರ್ಗಳು ಒಮ್ಮತದ ನಿರ್ಣಯ ತೆಗೆದುಕೊಂಡಿವೆ.
ನ್ಯಾಯಾಂಗದ ಪ್ರಕ್ರಿಯೆಯನ್ನು ಗೌರವಿಸುತ್ತಲೇ, ಪತ್ರಿಕಾ ಸ್ವಾತಂತ್ರ್ಯ ಮತ್ತು ಸಾರ್ವಜನಿಕ ಹಿತಾಸಕ್ತಿಯ ರಕ್ಷಣೆಗೆ
ಬದ್ಧವಾಗಿರುವುದಾಗಿ ಅವರು ಘೋಷಿಸಿದ್ದಾರೆ.
ಧರ್ಮಸ್ಥಳದ ದೇವಾಲಯ ಹಾಗೂ ಸಂಸ್ಥೆಗಳ ಕಾರ್ಯದರ್ಶಿಯಾಗಿರುವ ಹರ್ಷೇಂದ್ರ ಕುಮಾರ್, ತಮ್ಮ ವಿರುದ್ಧ
ಆನ್ಲೈನ್ನಲ್ಲಿ ಮತ್ತು ಮಾಧ್ಯಮಗಳಲ್ಲಿ ಸುಳ್ಳು ಹಾಗೂ ಮಾನಹಾನಿಕರ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು
ಆಕ್ಷೇಪಿಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಈ ದಾವೆಯಲ್ಲಿ, 4,140 ಯೂಟ್ಯೂಬ್ ವಿಡಿಯೋಗಳು, 932
ಫೇಸ್ಬುಕ್ ಪೋಸ್ಟ್ಗಳು, 3,584 ಇನ್ಸ್ಟಾಗ್ರಾಮ್ ಪೋಸ್ಟ್ಗಳು, 108 ಸುದ್ದಿ ಲೇಖನಗಳು, 37 ರೆಡ್ಡಿಟ್
ಪೋಸ್ಟ್ಗಳು ಮತ್ತು 41 ಟ್ವೀಟ್ಗಳು ಸೇರಿದಂತೆ ಒಟ್ಟು 8,842 ಲಿಂಕ್ಗಳನ್ನು ನಿರ್ಬಂಧಿಸುವಂತೆ ಅವರು
ಕೋರಿದ್ದರು. ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ನಲ್ಲಿ ತಮ್ಮ ವಿರುದ್ಧ ನೇರ ಆರೋಪಗಳು
ಇಲ್ಲದಿದ್ದರೂ, ತಮ್ಮ ಕುಟುಂಬ, ದೇವಾಲಯ ಮತ್ತು ಸಂಸ್ಥೆಗಳ ವಿರುದ್ಧ ವ್ಯವಸ್ಥಿತವಾಗಿ ಅಪಪ್ರಚಾರ
ಮಾಡಲಾಗುತ್ತಿದೆ ಎಂಬುದು ಅವರ ಮುಖ್ಯ ವಾದವಾಗಿತ್ತು.
ಈ ವಾದವನ್ನು ಆಲಿಸಿದ್ದ ಬೆಂಗಳೂರಿನ ಹೆಚ್ಚುವರಿ ನಗರ ಸಿವಿಲ್ ಮತ್ತು ಸತ್ರ ನ್ಯಾಯಾಧೀಶ ವಿಜಯ ಕುಮಾರ್ ರೈ
ಅವರು, ಜುಲೈ 18ರಂದು ಏಕಪಕ್ಷೀಯ ಪ್ರತಿಬಂಧಕ ಆದೇಶವನ್ನು ಹೊರಡಿಸಿದ್ದರು. ಈ ಆದೇಶದ ಅನ್ವಯ, ಮುಂದಿನ
ವಿಚಾರಣೆಯವರೆಗೆ ಡಿಜಿಟಲ್, ಸಾಮಾಜಿಕ ಅಥವಾ ಮುದ್ರಣ ಮಾಧ್ಯಮಗಳಲ್ಲಿ ಯಾವುದೇ ಮಾನಹಾನಿಕರ ವಿಷಯವನ್ನು
ಪ್ರಕಟಿಸದಂತೆ ಅಥವಾ ಹಂಚದಂತೆ ಪ್ರತಿವಾದಿಗಳು ಮತ್ತು ಅಪರಿಚಿತ ವ್ಯಕ್ತಿಗಳಿಗೆ ನಿರ್ಬಂಧ ವಿಧಿಸಲಾಗಿತ್ತು.
ಈ ಆದೇಶದ ಹಿನ್ನೆಲೆಯಲ್ಲಿ, ಬೆಂಗಳೂರಿನ ಈದಿನ ಡಾಟ್ ಕಾಮ್ ಕಚೇರಿಯಲ್ಲಿ ಶುಕ್ರವಾರ ಪ್ರಮುಖ
ಯೂಟ್ಯೂಬರ್ಗಳು ಮತ್ತು ಡಿಜಿಟಲ್ ಮಾಧ್ಯಮಗಳ ಪ್ರತಿನಿಧಿಗಳ ಮಹತ್ವದ ಸಭೆಯನ್ನು ಕರೆಯಲಾಗಿತ್ತು. ಈ
ಸಭೆಯಲ್ಲಿ, ನ್ಯಾಯಾಲಯದ ಆದೇಶವನ್ನು ಪಾಲಿಸುವ, ಸತ್ಯ ಸುದ್ದಿಯ ಪ್ರಸಾರವನ್ನು ಮುಂದುವರಿಸುವ ಹಾಗೂ ಈ
ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟವನ್ನು ಒಗ್ಗಟ್ಟಿನಿಂದ ಮುಂದುವರಿಸುವ ಬಗ್ಗೆ ಸರ್ವಾನುಮತದ ನಿರ್ಣಯ
ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ ಕೈಗೊಂಡ ಮಹತ್ವದ ನಿರ್ಣಯಗಳ ಜೊತೆಗೆ, “ಸದರಿ ಆದೇಶಗಳನ್ನು ನ್ಯಾಯಾಲಯದಲ್ಲೇ ಪ್ರಶ್ನಿಸುವ ನಮ್ಮ
ಹಕ್ಕನ್ನು ಉಳಿಸಿಕೊಳ್ಳುತ್ತಾ, ಈ ಸದ್ಯಕ್ಕೆ ಕೆಳಹಂತದ ಮತ್ತು ರಾಜ್ಯ ಉಚ್ಚ ನ್ಯಾಯಾಲಯದ ಆದೇಶಗಳನ್ನು ನಾವು
ಪಾಲಿಸಲು ಬದ್ಧರಿದ್ದೇವೆ” ಎಂದು ಪ್ರತಿನಿಧಿಗಳು ಸ್ಪಷ್ಟಪಡಿಸಿದರು. “ಆದರೆ, ಆದೇಶದಲ್ಲೇ ಸೂಚಿಸಿರುವ ಹಾಗೆ ಮತ್ತು
ನಮ್ಮ ಪತ್ರಿಕಾಧರ್ಮಕ್ಕೆ ಬದ್ಧರಾಗಿದ್ದುಕೊಂಡು ಯಾರದ್ದೇ ಮೇಲೆ ಆಧಾರರಹಿತವಾದ, ಮಾನನಷ್ಟಕ್ಕೆ ಕಾರಣವಾಗುವ
ಸುದ್ದಿ ಅಥವಾ ವಿಶ್ಲೇಷಣೆಗಳನ್ನು ನಾವು ಪ್ರಕಟಿಸುವುದಿಲ್ಲ. ಅದೇ ಸಂದರ್ಭದಲ್ಲಿ ನಡೆಯುವ ಘಟನಾವಳಿಗಳಿಗೆ
ಸಂಬಂಧಿಸಿದಂತೆ ಯಥಾವತ್ ಸುದ್ದಿಗಳನ್ನು ಪ್ರಕಟಿಸುವ ನಮ್ಮ ಹಕ್ಕನ್ನು ನ್ಯಾಯಾಲಯವು ನಿರ್ಬಂಧಿಸಿಲ್ಲ ಎನ್ನುವುದನ್ನು
ನಾವು ಅರಿತಿದ್ದೇವೆ. ಹೀಗಾಗಿ, ಸುದ್ದಿಗಳನ್ನು ಪ್ರಕಟಿಸುವ ಮತ್ತು ಈ ಹೊತ್ತು ಎತ್ತಬೇಕಾದ ಪ್ರಶ್ನೆಗಳನ್ನು ಎತ್ತುವ ನಮ್ಮ
ಹಕ್ಕನ್ನು ಚಲಾಯಿಸುತ್ತೇವೆ ಮತ್ತು ಆ ಮೂಲಕ ನಮ್ಮ ಕರ್ತವ್ಯವನ್ನು ಪಾಲಿಸಲು ನಾವು ಬದ್ಧರಾಗಿದ್ದೇವೆ” ಎಂಬ
ನಿರ್ಣಯವನ್ನು ಡಿಜಿಟಲ್ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವವರು ತೆಗೆದುಕೊಂಡರು.
ಒಂದ್ಕಡೆ ಆಶಾದಾಯಕ ಬೆಳವಣಿಗೆಗಳು ಇವೆಲ್ಲಾ ಇಂದೇನಾಗುತ್ತೆ ಅನ್ನೋ ಅಪ್ಡೇಟ್ಸ್ಗಳೊಂದಿಗೆ ಮತ್ತೆ ಬರ್ಥೀನಿ