Dharmasthala: ಧರ್ಮಸ್ಥಳ ಕೆ.ವಿ ಧನಂಜೇಯ್ ಫಸ್ಟ್ ರಿಯಾಕ್ಷನ್.!ಸುಳ್ಳು ಸುದ್ದಿ ಪ್ರಸಾರ.! ಮಾಧ್ಯಮಗಳಿಗೆ ಕ್ರಮ.!?
ಕಳದೆರಡು ದಿನಗಳಿಂದ ಧರ್ಮಸ್ಥಳ ಸಾಮೂಹಿಕ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಭಾರೀ ಚರ್ಚೆಯಾಗ್ತಿರೋ ವಿಷ್ಯಗಳೇನಂದ್ರೆ, ಈ ಬುರುಡೆ ಗ್ಯಾಂಗ್ ರಾಜ್ಯ ಸರ್ಕಾರಕ್ಕೆ ಯಾಮಾರಿಸಿ ಎಸ್‌ಐಟಿ ರಚನೆ ಮಾಡಿದೆ. ಈ ಬುರುಡೆ ಗ್ಯಾಂಗ್‌ಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ. ಇಷ್ಟೇ ಅಲ್ಲದೇ, ಈ ಬುರುಡೆ ಗ್ಯಾಂಗ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದ್ದಲ್ಲದೇ, ಇದ್ರಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಕಾಣಿಸ್ತಿಲ್ಲ. ವೈಯಕ್ತಿಕ ಹಿತಾಸಕ್ತಿ ಕಾಣಿಸುತ್ತಿದೆ. ಇದು ಪೈಸಾ ಇಂಟರೆಸ್ಟ್ ಲಿಟಿಗೇಷನ್, ಪೊಲಿಟಿಕಲ್ ಇಂಟರೆಸ್ಟ್ ಲಿಟಿಗೇಷನ್, ಪ್ರೈವೇಟ್ ಇಂಟರೆಸ್ಟ್ ಲಿಟಿಗೇಷನ್ ಎಂದು ಬುರುಡೆ ಗ್ಯಾಂಗ್‌ಗೆ ಕ್ಲಾಸ್ ತೆಗೆದುಕೊಂಡಿದೆ ಅನ್ನೋ ಬ್ರೇಕಿಂಗ್ ನ್ಯೂಸ್ ನೀವೆಲ್ಲಾ ಪ್ರತಿನಿತ್ಯ ಕೇಳಿರಬಹುದು.
ಅಸಲಿಗೆ ಈ ಸುದ್ದಿಗಳ ವಿರುದ್ಧವೇ ಇದೀಗ ಸುಪ್ರೀಂ ಕೋರ್ಟ್ ವಕೀಲರಾದ ಕೆವಿ ಧನಂಜಯ ಪತ್ರಿಕಾ ಪ್ರಕಟಣೆ ಹೊರಡಿಸಿದ್ರೆ, ದೀಪಕ್ ಖೋಸ್ಲಾ ದಿಲ್ಲಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಸುಳ್ಳು ಸುದ್ದಿ ಪ್ರಸಾರಕ್ಕೆ ತಡೆ ನೀಡಬೇಕೆಂದು ವಿನಂತಿ ಮಾಡಿಕೊಂಡಿದ್ದಾರೆ. ಇತ್ತ ವೀರೇಂದ್ರ ಹೆಗಡೆ ಕೂಡ ಮತ್ತೆ ಮೌನ ಮುರಿದಿದ್ದು, ನನ್ನ ಮೇಲ್ಯಾಕೆ ಇಷ್ಟು ಕೋಪ. ನಾನೇನು ಮಾಡಿದ್ದೀನಿ ಎಂದು ತಮ್ಮ ನೋವು ಹೊರಹಾಕಿದ್ದಾರೆ. ಇತ್ತ ಗಿರೀಶ್ ಮಟ್ಟಣ್ಣನವರ್ ಅರೆಸ್ಟ್ ಮಾಡೋಕೆ ಪೊಲೀಸರು ಹೊಂಚು ಹಾಕ್ತಿದ್ದಾರೆ. ಅತ್ತ, ಮಹೇಶ್ ತಿಮರೋಡಿ ಗಡಿಪಾರು ಕೇಸ್ ಏನಾಯ್ತು, ಈ ಎಲ್ಲಾ ಸುದ್ದಿಗಳನ್ನು ಕಂಪ್ಲೀಟ್ ಆಗಿ ನೋಡ್ತಾ ಹೋಗೋಣ.
ಬುರುಡೆ ಗ್ಯಾಂಗ್ ಅನ್ನೋ ಕಳಂಕ ಹೊತ್ತು ಪ್ರತಿನಿತ್ಯ ಒಂದಿಲ್ಲೊಂದು ಟೀಕೆಗೆ ಗುರಿಯಾಗ್ತಿರೋ ಹೋರಾಟಗಾರರ ಪರ ಇದ್ದ ಚಿನ್ನಯ್ಯನೇ ಉಲ್ಟಾ ಹೊಡೆದಿದ್ದಾನೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಇತ್ತ 183 ಸ್ಟೇಟ್‌ಮೆಂಟ್ ರೆಕಾರ್ಡ್ ಮಾಡ್ತಿರೋ ಕೋರ್ಟ್ ಆತ ತಪ್ಪೊಪ್ಪಿಗೆ ಹೇಳಿಕೆ ನೀಡ್ತೀದ್ದಾನೆ ಅನ್ನೋ ಚರ್ಚೆಗಳು ಶುರುವಾಗಿವೆ. ಆರೇಳು ವರ್ಷಗಳ ಹಿಂದೆ ಮಹೇಶ್ ತಿಮರೊಡಿ ಮನೆಯಲ್ಲಿ ಎಲ್ಲಾ ಸತ್ಯ ಬಾಯ್ಬಿಟ್ಟಿದ್ದ ಚಿನ್ನಯ್ಯ ಏಕಾಏಕಿ ಉಲ್ಟಾ ಹೊಡೆದಿದ್ದರ ಹಿಂದಿರೋ ತಂತ್ರ ಪ್ರತಿತಂತ್ರಗಳು ಜನಸಾಮಾನ್ಯರಿಗೆ ಗೊತ್ತಾಗ್ತಿದೆ.
ಇತ್ತ ಮಾಧ್ಯಮಗಳ ಮುಂದೆ ಬಂದು ಚಿನ್ನಯ್ಯನ ಹೆಂಡ್ತಿ ಎಮೋಷನಲ್ ಡ್ರಾಮಾ ಮಾಡ್ತಿದ್ದಾರೆ ಎಂದು ಅನೇಕರು ಆಕೆಯ ಭಿನ್ನ ಭಿನ್ನ ಹೇಳಿಕೆಗಳನ್ನು ಗಮನಿಸಿ ಆಕ್ರೊಶ ಹೊರಹಾಕ್ತಿದ್ದಾರೆ. ಇದೆಲ್ಲದ್ರ ನಡುವೆ, ಬುರುಡೆ ಗ್ಯಾಂಗ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಅಲ್ಲಿ ಬುರುಡೆ ಹೊತ್ತು ಹೋಗಿದ್ದು ಎಲ್ಲವೂ ನನಗೆ ಗೊತ್ತಿದೆ ಎಂದಿರೋ ಡಿಕೆಶಿ ಮಾತುಗಳು, ಎಸ್‌ಐಟಿ ರಾಜಕೀಯ ನಾಯಕರ ಹಣತಿಯಂತೆ ಕೆಲಸ ಮಾಡ್ತಿದೆ ಅನ್ನೋ ಅನುಮಾನಗಳು ಏಳಲು ಶುರುವಾಗಿದೆ.
ಇತ್ತ, ಸುಪ್ರೀಂ ಕೋರ್ಟ್ ವಕೀಲರಾದ ಕೆವಿ ಧನಂಜಯ ಸುಪ್ರೀಂ ಕೋರ್ಟ್ ತೀರ್ಪಿನ ತಪ್ಪು ನಿರೂಪಣೆ ಮಾಡ್ತಿರೋ ಕನ್ನಡ ಸುದ್ದಿ ವಾಹಿನಿಗಳ ವಿರುದ್ಧ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ ಅದ್ರಲ್ಲಿ ತುಂಬಾ ನೀಟ್ ಅಂಡ್ ಕ್ಲೀನ್ ಆಗಿ ಡೆಫನೇಷನ್ ಮಾಡಿದ್ದಾರೆ. ಇತ್ತ ದೀಪಕ್ ಖೋಸ್ಲಾ ಕ್ರಮ ತೆಗೆದುಕೊಳ್ಳಬೇಕೆಂದು ಸಿಜೆಐಗೆ ಪತ್ರ ಬರೆದಿದ್ದಾರೆ. ಅಸಲಿಗೆ ವಕೀಲರಾದ ಕೆವಿ ಧನಂಜೆಯ ಅವ್ರು ಹೇಳ್ತಾ ಇರೋದೇನಂದ್ರೆ, 2025 ರ ಮೇ 05 ರಂದು ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ಪ್ರಸ್ತುತವಾಗಿದ್ದ ಏಕೈಕ ಅಂಶವೆಂದರೆ, ನಾವು ಸುಪ್ರೀಂ ಕೋರ್ಟ್ ಅಫಿಡವಿಟ್ ಸಲ್ಲಿಸಿದ್ವಿ.
ಅರ್ಹತೆಯ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಅರ್ಜಿ ಮಾಡಿದೆ. ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ರಾಜ್ಯ ಸರ್ಕಾರಕ್ಕೆ ತಿಳಿದಿದ್ದರೆ, ಅದು ವಿಶೇಷ ತನಿಖಾ ತಂಡವನ್ನು ರಚಿಸುತ್ತಿರಲಿಲ್ಲ ಎಂಬ ಸಲಹೆಗೆ ಯಾವುದೇ ಆಧಾರವಿಲ್ಲ. ಸುಪ್ರೀಂ ಕೋರ್ಟ್ ಆದೇಶದಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸುವುದನ್ನು ಅಥವಾ ಸರ್ಕಾರವು ಈ ವಿಷಯವನ್ನು ವಿಶೇಷ ತನಿಖಾ ತಂಡಕ್ಕೆ ವಹಿಸುವುದನ್ನು ಕಾನೂನುಬದ್ಧವಾಗಿ ಅಥವಾ ತಾರ್ಕಿಕವಾಗಿ ತಡೆಯುವಂತಹ ಯಾವುದೇ ಅಂಶವಿಲ್ಲ. ಆರೋಪಗಳು, ಅವುಗಳ ಮೇಲ್ನೋಟಕ್ಕೆ ಗಂಭೀರ ಸಾರ್ವಜನಿಕ ಪ್ರಾಮುಖ್ಯತೆಯ ಗುರುತಿಸಬಹುದಾದ ಅಪರಾಧಗಳನ್ನು ಬಹಿರಂಗಪಡಿಸಿದ್ದರಿಂದ ಎಸ್‌ಐಟಿಯನ್ನು ರಚಿಸಲಾಗಿದೆ.
ಆದಾಗ್ಯೂ, ಸ್ಥಳೀಯವಾಗಿ ಯಾವುದೇ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಾಗದ ಕಾರಣ ಮತ್ತು ನ್ಯಾಯಾಲಯವನ್ನು ಸಂಪರ್ಕಿಸುವಲ್ಲಿ ಗಣನೀಯ ವಿಳಂಬವಾದ ಕಾರಣ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಲು ನಿರಾಕರಿಸಿತು. ಬಹುಮುಖ್ಯವಾಗಿ, ಸುಪ್ರೀಂ ಕೋರ್ಟ್ ಆರೋಪಗಳ ಅರ್ಹತೆಯನ್ನು ಪರಿಶೀಲಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿತು. ಆದೇಶವು ದಾಖಲಿಸುತ್ತದೆ. ಈ ನಡೆ ಏನನ್ನೂ ಸೂಚಿಸುತ್ತದೆ ಎಂದರೆ, ಯಾವುದೇ ಪ್ರತಿವಾದಿಗಳಿಗೆ ಅಥವಾ ರಾಜ್ಯ ಸರ್ಕಾರಕ್ಕೆ ಯಾವುದೇ ನೋಟಿಸ್ ನೀಡಲಾಗಿಲ್ಲ. ಪರಿಣಾಮವಾಗಿ, ಯಾವುದೇ ಪ್ರತಿವಾದಿಗಳು ಆರೋಪಗಳನ್ನು ವಿರೋಧಿಸಲು ಅಥವಾ ಸ್ವೀಕರಿಸಲು ಅವಕಾಶವನ್ನು ಹೊಂದಿರಲಿಲ್ಲ.
ಆದ್ದರಿಂದ, ಪ್ರಕರಣದ ಅರ್ಹತೆಯ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಹೇಳಲು ಏನೂ ಇರಲಿಲ್ಲ. ನಾನು ಸಾಂವಿಧಾನಿಕ ವಕೀಲ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಅಭ್ಯಾಸ ಮಾಡುತ್ತೇನೆ. ನಾನು ಈ ಅಂಶಗಳನ್ನು ಕಾನೂನಿನ ವಿಷಯವಾಗಿ ಹೇಳಿದ್ದೇನೆ. 2025 ರ W.P. (Crl.) ಸಂಖ್ಯೆ 184 ರಲ್ಲಿ ಗೌರವಾನ್ವಿತ ಸುಪ್ರೀಂ ಕೋರ್ಟ್ ಮುಂದೆ ಈ ಟಿಪ್ಪಣಿಯನ್ನು ಮಧ್ಯಂತರ ಅರ್ಜಿಯ ಮೂಲಕ ಮಂಡಿಸಲು ಮತ್ತು ಅದರ ವಿರುದ್ಧ ವಾದಿಸಲು ಯಾರಾದರೂ ಸ್ವತಂತ್ರರು.
ವಕೀಲರಾಗಿ, ನಮ್ಮ ಪಾತ್ರವು ಸಲ್ಲಿಸಿದ ದೂರಿನ ಕುರಿತು ತನಿಖೆ ಪ್ರಾರಂಭವಾಗುವುದನ್ನು ಖಚಿತಪಡಿಸಿಕೊಳ್ಳುವುದಾಗಿತ್ತು. ಎಸ್‌ಐಟಿ ರಚನೆಯಾದಾಗ ಅದು ಸುರಕ್ಷಿತವಾಗಿತ್ತು. ಈ ಪ್ರಕರಣವು ಪ್ರಾಥಮಿಕವಾಗಿ ದೂರುದಾರರ ಹೇಳಿಕೆಗಳ ಮೇಲೆ ನಿಂತಿದೆ. ಅವರ ಯಾವುದೇ ಹೇಳಿಕೆಗಳು ಸುಳ್ಳು ಎಂದು ಕಂಡುಬಂದರೆ, ಸುಳ್ಳು ಸಾಕ್ಷ್ಯಕ್ಕಾಗಿ ಅವರು ಮೊಕದ್ದಮೆ ಹೂಡಬೇಕಾಗುತ್ತದೆ ಎಂದು ನಾವು ನಿರಂತರವಾಗಿ ಮತ್ತು ಸಾರ್ವಜನಿಕವಾಗಿ ಹೇಳಿದ್ದೇವೆ ಎಂದು ದೂರಿದ್ದಾರೆ.
ಇತ್ತ ದೀಪಕ್ ಖೋಸ್ಲಾ ಹೇಳೋ ಪ್ರಕಾರ, ಮೇ 5, 2025 ರಂದು ಸುಪ್ರೀಂ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು. ವಿಳಂಬವಾಗಿ ಅರ್ಜಿ ಸಲ್ಲಿಕೆ, ದೂರು-ಎಫ್‌ಐಆರ್ ಯಾವುದೂ ಇಲ್ಲದ ಕಾರಣ ವಜಾ ಮಾಡಿದೆ. ಕೆಲವು ಕನ್ನಡ ವಾಹಿನಿಗಳು ಈ ತೀರ್ಪನ್ನು “ಪ್ರಕರಣವು ಸಂಪೂರ್ಣ ಮುಕ್ತಾಯಗೊಂಡಿದೆ”, “ಆರೋಪಗಳು ತಳ್ಳಿ ಹಾಕಲ್ಪಟ್ಟಿವೆ” ಎಂಬ ರೀತಿಯಲ್ಲಿ ಪ್ರಸಾರ ಮಾಡಿರುವುದು ವೀಕ್ಷಕರಿಗೆ ತಪ್ಪು ಮಾಹಿತಿ ನೀಡಿದಂತಾಗುತ್ತದೆ. ಇದರಿಂದ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್, ಈಗ ನಡೆಯುತ್ತಿರುವ ಎಸ್‌ಐಟಿ ತನಿಖೆ ಹಾಗೂ ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿರುವ ರಿಟ್ ಅರ್ಜಿಗಳ ಪ್ರಾಮುಖ್ಯತೆಯ ಬಗ್ಗೆ ಸಾರ್ವಜನಿಕರಿಗೆ ಕಳವಳ, ಗೊಂದಲ ಉಂಟಾಗುತ್ತದೆ ಎಂದು ತಿಳಿಸಿದ್ದಾರೆ. ಈ ರೀತಿಯ ವರದಿಗಳನ್ನು ದೀಪಕ್ ಖೋಸ್ಲಾ ಅವರು ಉದ್ದೇಶಪೂರ್ವಕ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ಖಂಡಿಸಿದ್ದಾರೆ.
ಈ ರೀತಿಯ ಸುದ್ದಿ ಹರಡಿರುವ ಸುದ್ದಿ ವಾಹಿನಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳುವುದನ್ನು ಪರಿಗಣಿಸಬೇಕು. ಜೊತೆಗೆ ಭವಿಷ್ಯದಲ್ಲಿ ಇಂತಹ ತಪ್ಪು ನಿರೂಪಣೆಗಳನ್ನು ತಡೆಯುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಆದೇಶಗಳನ್ನು, ಮಾರ್ಗಸೂಚಿಗಳನ್ನು ತರಬೇಕು ಎಂದು ಸಿಜೆಐಗೆ ಮನವಿ ಮಾಡಿದ್ದಾರೆ.
ಇತ್ತ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗಡೆ, ನಾನು ನಿರಂತರವಾಗಿ ಯಾವ ತಪ್ಪು ಮಾಡದೇ ಕರ್ತವ್ಯ ನಿಭಾಯಿಸ್ತಾ ಬಂದಿದ್ದನೆ. ನಾವು ಯಾರಿಗೆ ಯಾವುದೇ ನೋವು, ತಪ್ಪು ಮಾಡದಿದ್ದರೂ ನಿಷ್ಠುರವಾಗಿ ದಬ್ಬಾಳಿಕೆ ನಡೆದಿದೆ. ಇದು ಬಹಳ ಆಶ್ಚರ್ಯದ ವಿಚಾರವಾಗಿದೆ. ಸದ್ಯ ಬೇರೆ ಎಲ್ಲವೂ ಗೊತ್ತಾಗಿದೆ. ಆದರೆ ನಮ್ಮ ಮೇಲೆ ಅವರಿಗೆ ಇರುವ ದ್ವೇಷವಾದರೂ ಏನು ಎಂಬದು ಮಾತ್ರ ಗೊತ್ತಾಗಿಲ್ಲ. ನಾವು ಯಾರನ್ನು ಹೀಯಾಳಿಸುವುದಿಲ್ಲ. ನಮ್ಮನ್ನು ಹೀಯಾಳಿಸುವವರ ಬೆನ್ನಿಗೆ ನಾವು ನಿಂತಿದ್ದೇವೆ.
ಭಕ್ತರ ವಿಶ್ವಾಸ ಜೀವಂತ ಇರಿಸಿದೆ. ಯಾವುದೇ ತಪ್ಪು ಮಾಡದಿರುವ ಕಾರಣ ಭಯವಿಲ್ಲ. ಊರ ಜನರು ನಮ್ಮ ಜತೆಗಿದ್ದು ಕ್ಷೇತ್ರದ ವರ್ಚಸ್ಸನ್ನು ಹೆಚ್ಚಿಸಿದ್ದಾರೆ. ಊರ ಜನರ ವಿಶ್ವಾಸ ಯಾವುದೇ ಸಮಸ್ಯೆಗಳನ್ನು ಎದುರಿಸಲು ನಮಗೆ ಶಕ್ತಿಯಾಗಿದೆ. ತನಿಖೆಯಿಂದ ಕ್ಷೇತ್ರದ ವರ್ಚಸ್ಸು ಹೆಚ್ಚಿದೆ ಎಂದಿರುವ ಅವರು, ಯಾವುದೇ ತಪ್ಪು ಮಾಡದಿದ್ದರೂ ದಬ್ಬಾಳಿಕೆ ನಡೆದಿದ್ದು ಆಶ್ಚರ್ಯಕರ ಎಂದಿದ್ದಾರೆ. ಭಕ್ತರು ಮತ್ತು ಊರ ಜನರ ವಿಶ್ವಾಸದಿಂದ ಭಯವಿಲ್ಲದೆ ಸೇವಾ ಕಾರ್ಯಗಳನ್ನು ಮುನ್ನಡೆಸಲು ಸಾಧ್ಯವಾಗಿದೆ ಎಂದಿದ್ದಾರೆ.
ಇನ್ನು ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರಿನ ವಿಷ್ಯಕ್ಕೆ ಸಂಬಂಧಪಟ್ಟಂತೆ,
ಅಕ್ರಮವಾಗಿರಿಸಿಕೊಂಡಿದ್ದ ಎರಡು ತಲವಾರು ಮತ್ತು ಒಂದು ಬಂದೂಕು ಪತ್ತೆ ಪ್ರಕರಣದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಹಾಜರಾಗುವಂತೆ ಎರಡು ನೋಟಿಸ್ ಜಾರಿ ಮಾಡಿದ್ದರೂ ಕೂಡ ವಿಚಾರಣೆಗೆ ಹಾಜರಾಗಿಲ್ಲ ಅನ್ನೋ ಕಾರಣದಿಂದ, ಮೂರನೇ ನೋಟೀಸ್ ಜಾರಿ ಮಾಡಿ, ಮನೆಗೆ ಅಂಟಿಸಿ ಬಂದಿದ್ದಾರೆ. ಮಹೇಶ್ ಶೆಟ್ಟಿ ತಿಮರೋಡಿ ಅವರು ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ ಜಾಮೀನಿಗಾಗಿ ಮಂಗಳೂರಿನ ಸೆಷನ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ಸೆ27ರಂದು ನಡೆಯಲಿದೆ. ಅಲ್ಲಿಯವರೆಗೂ ಪೊಲೀಸ್ ಠಾಣೆಗೆ ಹಾಜರಾಗೋ ಸಾಧ್ಯತೆ ತೀರಾ ಕಡಿಮೆ ಎನ್ನಲಾಗ್ತಿದೆ.
ಈ ನಡುವೆ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಜಿಲ್ಲೆಯಿಂದ ಗಡಿಪಾರು ಮಾಡಿ ಪುತ್ತೂರು ಸಹಾಯಕ ಕಮಿಷನರ್ ಆದೇಶ ಹೊರಡಿಸಿದ್ದು, ಇದು ಮಹೇಶ್ ಶೆಟ್ಟಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಈ ಆದೇಶದ ವಿರುದ್ಧ ಹೈಕೋರ್ಟ್‌ಗೆ ಹೋಗುವ ಸಾಧ್ಯತೆಗಳು ಸಹ ಇವೆ.
ಚಿನ್ನಯ್ಯನ ತಪ್ಪೊಪ್ಪಿಗೆ ಹೇಳಿಕೆ..!
ಈ ಹಿಂದೆ ಎರಡು ಬಾರಿ ಚಿನ್ನಯ್ಯ ಬೆಳ್ತಂಗಡಿ ಕೋರ್ಟ್‌ಗೆ ಬಂದು ನ್ಯಾಯಾಧೀಶರ ಎದುರು ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಿದ್ದ. ಗುರುವಾರ 2ನೇ ಬಾರಿಗೆ ಹೇಳಿಕೆ ದಾಖಲಿಸುವ ಪ್ರಕ್ರಿಯೆ ನಡೆದಿದ್ದು, ಇದರ ಮುಂದುವರಿದ ಭಾಗವಾಗಿ ಶನಿವಾರವೂ ಬೆಳ್ತಂಗಡಿ ಕೋರ್ಟ್‌ಗೆ ಆಗಮಿಸಲಿದ್ದಾನೆ. ಪ್ರಸ್ತುತ ಶಿವಮೊಗ್ಗ ಜೈಲಿನಲ್ಲಿರುವ ಈತನನ್ನು ಶನಿವಾರ ಬೆಳಗ್ಗೆ ಭದ್ರತೆಯೊಂದಿಗೆ ಬೆಳ್ತಂಗಡಿಗೆ ಕರೆ ತರಲಾಗುತ್ತಿದೆ.