ಧರ್ಮಸ್ಥಳ ಕ್ರೈಮ್ ಫೈಲ್ಸ್: 13 ಸ್ಥಳಗಳಲ್ಲಿ ಉತ್ಖನನ – “ಅನಾಮಿಕ” ಮೇಲೆ ಸ್ಫೋಟಕ ಬಿಚ್ಚುಬಿಟ್ಟಾಟ!
ದೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ದೂರುದಾರನೊಂದಿಗೆ ಎಸ್ಐಟಿಯ ಕಾರ್ಯಾಚರಣೆ ನಾಲ್ಕನೇ ದಿನ ತಲುಪಿದೆ.
ಸಾಕ್ಷಿಯು ಗುರುತುಪಡಿಸಿರುವ 13 ಸ್ಥಳಗಳಲ್ಲಿ ಉತ್ಖನನ ಕಾರ್ಯವು ನಡೆಯತ್ತಿದೆ..
ಅನಾಮಿಕ ವ್ಯಕ್ತಿ ನಟೋರಿಯಸ್ ಕೆಲಸ ಮಾಡಿ ಕ್ಷೇತ್ರದಿಂದ ಉಚ್ಚಾಟನೆಗೊಂಡಿದ್ದ: ಧರ್ಮಸ್ಥಳ ಗ್ರಾ.ಪಂ ಮಾಜಿ ಅಧ್ಯಕ್ಷ
ಅನಾಮಿಕ ವ್ಯಕ್ತಿ ಯಾರು ಅಂತ ಇಡೀ ಧರ್ಮಸ್ಥ ಳದವರಿಗೆ (Dharmasthala) ಈಗ ಗೊತ್ತಾಗಿದೆ. ಆತ ನಟೋರಿಯಸ್
ಕೆಲಸ ಮಾಡಿದ ಕ್ಷೇತ್ರದಿಂದ ಉಚ್ಚಾಟನೆ ಆಗಿದ್ದ ಎಂದು ಧರ್ಮಸ್ಥಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ವಕೀಲ ಕೇಶವ
ಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಪ್ರತಿದಿನ 30 ಸಾವಿರದಷ್ಟು ಪ್ರವಾಸಿಗರು ಧರ್ಮಸ್ಥಳಕ್ಕೆ ಬರುತ್ತಾರೆ. ಅನೇಕ ಸಮಸ್ಯೆಗಳಿಂದ ಬಂದು ಜೀವನವನ್ನು ಅಂತ್ಯ
ಮಾಡುತ್ತಿದ್ದರು. ಪ್ರವಾಸಿಗರು ಮೃತಪಟ್ಟರೆ ಅಂತ್ಯಸಂಸ್ಕಾರ ಮಾಡುವುದೇ ದೊಡ್ಡ ಸಾಹಸವಾಗಿತ್ತು. ಅನಾಮಿಕ ವ್ಯಕ್ತಿ
ಹೆಣದ ಮೇಲೆ ಇದ್ದ ಚಿನ್ನ, ಹಣ ಕದಿಯುತ್ತಿದ್ದ. ಈ ಕಾರಣಕ್ಕೆ ಆತನನ್ನು 2014ರಲ್ಲಿ ಕೆಲಸದಿಂದ ತೆಗೆದು ಹಾಕಲಾಗಿತ್ತು.
ಈ ಬೆಳವಣಿಗೆ ಹಿಂದೆ ಇರುವ ಷಡ್ಯಂತ್ರ ಯಾರದ್ದು ಎಂದು ಗೊತ್ತಿದೆ. ಕ್ಷೇತ್ರದ ಮೇಲೆ ಆರೋಪ ಮಾಡುವವರಿಗೆ ದೇವರು
ತಕ್ಕ ಬುದ್ಧಿ ಕೊಡಲಿ ಎಂದರು
ಅನಾಮಿಕ ವ್ಯಕ್ತಿಯ ಹಿಂದೆ ಯಾರಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಈ ವ್ಯಕ್ತಿಯನ್ನು ವಿಚಾರಣೆ ಮಾಡಬೇಕು,
ಮಂಪರು ಪರೀಕ್ಷೆ ಮಾಡಬೇಕು. ಆತನ ಹಿನ್ನೆಲೆಯಲ್ಲಿರುವವರ ಬ್ರೈನ್ ಮ್ಯಾಪಿಂಗ್ ಮಾಡಬೇಕು. ಅನಾಮಿಕ ಹೇಳಿದ ಹಾಗೆ
ಕೊಲೆ, ಅತ್ಯಾಚಾರ, ಅನ್ಯಾಯ ಪ್ರಕರಣ ನಡೆದಿಲ್ಲ. ಉತ್ಖನನ ಸಂದರ್ಭ ಒಂದೆರಡು ಮೃತ ದೇಹ ಸಿಕ್ಕರೂ ಅಚ್ಚರಿಯಿಲ್ಲ.
ಎಸ್ಐಟಿ (SIT) ಮೂಲಕ ಎಲ್ಲಾ ರೀತಿಯ ಸಮಗ್ರ ತನಿಖೆಯಾಗಲಿ ಎಂದು ತಿಳಿಸಿದರು.
ಇಂತಹ ಬಣ್ಣದ ಕಾಗೆಗಳನ್ನು ಹಾರಿಸುತ್ತಾರೆ. ಎಲ್ಲರ ತನಿಖೆ ಆಗಬೇಕು, ಎಲ್ಲಾ ಸತ್ಯಗಳು ಹೊರಬರಬೇಕು ಎಂದು
ಹೇಳಿದರು.