“ಧರ್ಮಸ್ಥಳ ಕೇಸ್: ಶೋಧ ಕಾರ್ಯ ಏಕೆ ನಿಂತಿತು? ಭೀಮನ ಆರೋಪ ಸತ್ಯನಾ ಸುಳ್ಳಾ?”

ಸ್ನೇಹಿತರೆ ನಮಸ್ಕಾರ ನಾನು ನಿಮ್ಮ ರಾಕೇಶ್‌ ಆರುಂಡಿ, ಧರ್ಮಸ್ಥಳ ಸರಣಿ ಕೃತ್ಯಗಳ ಆರೋಪಗಳಿಗೆ ಸಂಬಂಧ
ಪಟ್ಟಹಾಗೆ ಅಸಲಿಗೆ ಏನ್‌ ಆಗ್ತಿದೆ.. ಯಾಕೆ ಇವತ್ತು ಶೋಧಕಾರ್ಯವನ್ನು ನಿಲ್ಲಿಸಲಾಗಿದೆ.. ಎಸ್‌ಐಟಿ ತನಿಖೆಯನ್ನು
ಇಲ್ಲಿಗೆ ನಿಲ್ಲಿಸಲಾಗುತ್ತಾ..? ಸುಜಾತಾ ಭಟ್‌ ವಿರುದ್ಧ ಕೇಳಿ ಬರ್ತಿರೋ ಆರೋಪಗಳೆಲ್ಲಾ ಸತ್ಯಾನಾ..? ಭೀಮನ ಕೇಸ್‌
ಹಳ್ಳ ಹಿಡಿತಿದ್ಯಾ..?ಇಲ್ಲಿವರೆಗೂ ಕೇಳಿಬಂದ ಆರೋಪಗಳೆಲ್ಲಾ ಕಟ್ಟು ಕಥೆನಾ..? ಇದೆಲ್ಲದ್ರ ಕುರಿತಾಗಿ ಡೀಟೈಲ್‌ ಆಗಿ
ನೋಡ್ಥಾ ಹೋಗೋಣ ಮಿಸ್‌ ಮಾಡದೇ ಈ ಸ್ಟೋರಿ ನೋಡಿ.. ಕರ್ನಾಟಕ ವಿಧಾನಸಭಾ ಅಧಿವೇಶನದಲ್ಲೂ ವ್ಯಾಪಕ
ಚರ್ಚೆಗಳಾಗ್ತಿವೆ.. ಬಿಜೆಪಿಯ ನಾಯಕರಾದ ಆರ್‌.ಅಶೋಕ್‌, ಸುನೀಲ್‌ಕುಮಾರ್‌, ಯತ್ನಾಳ್‌ ಸೇರಿದಂತೆ ಅನೇಕ
ನಾಯಕರು ಸರ್ಕಾರದ ನಿಗೂಢ ನಡೆಯ ವಿರುದ್ಧವೇ ತಿರುಗಿಬಿದ್ದರು.. ಭೀಮ ಯಾರು..? ಈತನ ಹಿಂಧೆ ಯಾರಿದ್ದಾರೆ..?
ಇವ್ರನ್ನೆಲ್ಲಾ ತನಿಖೆ ಮಾಢ್ಬೇಕು.. ಕ್ಷೇತ್ರದ ಖ್ಯಾತಿಗೆ ಧಕ್ಕೆ ತರಲು ಕರ್ನಾಟಕದಿಂದ ದುಬೈವರೆಗೂ ದೊಡ್ಡ ಮಟ್ಟದ
ಪಿತೂರಿ ನಡೀತಾ ಇದೆ ಎಂದೆಲ್ಲಾ ಆಕ್ರೋಶ ಹೊರ ಹಾಕಿದ್ರು. 13 ನೇ ಪಾಯಿಂಟ್‌ನಲ್ಲೂ ಏನಿಲ್ಲ ಇದೆಲ್ಲಾ ಕಟ್ಟು ಕಥೆ
ಇದ್ರ ಸಂಬಂಧವಾಗಿ ಶೂನ್ಯವೇಳಯಲ್ಲೂ ಪ್ರಶ್ನೆ ಮಾಡಿ ಸದ್ಯದ ಎಸ್‌ಐಟಿ ಅಪ್ಡೇಟ್ಸ್‌ ಏನು ಅನ್ನೋದನ್ನು ಗೃಹ
ಸಚಿವರು ಸೋಮವಾರ ಉತ್ತರ ಕೊಡ್ಬೇಕು ಅಂತಾ ಆಗ್ರಹಿಸಿದ್ರು.. ಸದ್ಯ, ಕಾಂಗ್ರೆಸ್‌ ಎಸ್‌ಐಟಿ ಫಾರ್ಮ್‌ ಮಾಡಿದ್ದೇ
ಷಡ್ಯಂತ್ರ ಎನ್ನುವಂತೆ ಬಿಜೆಪಿ ಪಾಳಯ ಗಡುಗ್ತಾ ಇದ್ದರೆ, ಒಬ್ಬ ವ್ಯಕ್ತಿ ಗಂಭೀರ ಸಾಕ್ಷ್ಯವನ್ನಿಟ್ಟುಕೊಂಡು ಬಂದಾಗ,
ಸಾಮೂಹಿಕವಾಗಿ ಕೇಳಿ ಬಂದ ಹಕ್ಕೋತ್ತಾಯದ ಮೇರೆಗೆ ನಾವು ಎಸ್‌ಐಟಿ ಫಾರ್ಮ್‌ ಮಾಡಿದ್ದೇವೆ.. ಇದ್ರಲ್ಲ ನಮ್ಮ
ಹಸ್ತಕ್ಷೇಪ ಖಂಡಿತ ಇಲ್ಲ.. ವರದಿ ಬರೋವರೆಗೂ ಕಾಯೋಣ ಅಂತಾ ಸಮರ್ಥಿಸಿಕೊಳ್ತಾ ಇದ್ದಾರೆ. ಇನ್ನು ಡಿಕೆಶಿ
ಹೇಳಿದಂತೆ.. ಎಸ್‌ಐಟಿ ಫಾರ್ಮ್‌ ಆದಾಗ ಯಾಕೆ ಯಾರು ತುಟಿಕ್‌ ಪಿಟಿಕ್‌ ಎನ್ನಲಿಲ್ಲ..ಈಗೆಲ್ಲಾ ಚರ್ಚೆ ಮಾಡ್ತಿರೋ
ಬಿಜೆಪಿಗರೆಲ್ಲಾ ರಾಜಕೀಯ ಮಾಡ್ತಿದ್ದಾರೆ… ಇವ್ರಿಗೆಲ್ಲಾ ಧರ್ಮಸ್ಥಳ ಕ್ಷೇತ್ರದ ಮೇಲಿನ ಗೌರವದಿಂದ ಹೀಗೆ ಮಾಡ್ತಿಲ್ಲ..
ಕೇವಲ ಧರ್ಮಸ್ಥಳ ಕ್ಷೇತ್ರವನ್ನು ಇಟ್ಕೊಂಡು ರಾಜಕೀಯ ಮಾಢ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.. ಒಟ್ಟಾರೆ..
ಧರ್ಮಸ್ಥಳ ಸರಣಿ ಕೃತ್ಯಗಳ ಆರೋಪಗಳಿಗೆ ನಿಖರ ಕಾರಣಗಳನ್ನು ಎಸ್‌ಐಟಿ ಅಂತಿಮ ವರದಿ ಬಂದ್ಮೇಲೆ ಕಂಡು
ಕೊಳ್ಳಬೇಕು.. ಇಲ್ಲಾ ಗೃಹ ಸಚಿವರು ಏನಾದ್ರೂ ಸುಳಿವು ಬಿಟ್ಟುಕೊಟ್ಟರೆ.. ಇಲ್ಲಿಗೆ ಎಸ್‌ಐಟಿ ತನಿಖೆ ಸ್ಟಾಪ್‌ ಮಾಡಿದ್ರೆ,
ಒಂದು ಮಟ್ಟಿಗಿನ ಕ್ಲಾರಿಟಿ ಸಿಗಲಿದೆ ಅನ್ನೋದಂತೂ ಸತ್ಯ..

ಸ್ನೇಹಿತರೆ.. ಆರಂಭದಿಂದ ಇಲ್ಲಿವರೆಗೂ ದೂರುದಾರನಿಗಿದ್ದ ಆತ್ಮವಿಶ್ವಾಸದಲ್ಲಿ ಕಿಂಚಿತ್ತೂ ಲೋಪವಿಲ್ಲದಿದ್ದರೂ, ಆತ
ತೋರಿಸಿದ ಜಾಗದಲ್ಲಿ ಯಾಕೆ ಯಾವುದೇ ಪಳೆಯುಳಿಕೆಗಳಿಲ್ಲ ಅನ್ನೋದು ಯಕ್ಷ ಪ್ರಶ್ನೆಯಾಗಿದೆ.. ಇನ್ನು ಸಿಕ್ಕಿದೆ
ಎನ್ನಲಾಗ್ತಿರೋ ಪಾಯಿಂಟ್‌ ನಂ. 6 ರ ಸತ್ಯಾಸತ್ಯೆಯ ಚಿತ್ರಣ ಗೊತ್ತಾಗಬೇಕಿದೆ.. ಇನ್ನು ಸುಜಾತ ಭಟ್‌ ಮುಕ್ತವಾಗಿ ಕೇಳಿ
ಬರ್ತಿರೋ ಆರೋಪಗಳಿಗೆ ಕ್ಲಾರಿಟಿ ಕೊಡ್ಬೇಕು.. ಸ್ಟೆನೋಗ್ರಾಫರ್‌ ಆಗಿ ಕೆಲಸ ಮಾಡಿದ್ದು ಸತ್ಯಾನಾ..? ಮಗಳು ಇಲ್ಲವೇ
ಇಲ್ಲವಾ..? ಸದ್ಯ ವೈರಲ್‌ ಆಗ್ತಿರೋ ಅನನ್ಯಾ ಭಟ್‌ ಫೋಟೋ ಯಾರದ್ದು ಅನ್ನೋ ಅಂಶಗಳ ಕುರಿತಾಗಿ ಅವ್ರ ಪರ
ವಕೀಲರು ಉತ್ತರ ಕೊಡ್ಬೇಕು.. ಇನ್ನು ಸ್ನೇಹಿತರೆ.. ಭೀಮ ಎನ್ನಲಾಗ್ತಿರೋ ದೂರುದಾರ ನಾಣು 13 ನೇ
ಪಾಯಿಂಟ್‌ನಲ್ಲೇ ರಾಶಿ ಹೆಣಗಳನ್ನು ಗೂತಿದ್ದೇನೆ.. ಸಿಗ್ತಾ ಇಲ್ಲ ಅಂದ್ರೆ ನಾನೇನು ಮಾಡ್ಲಿ.. ನನ್ನ ಜೊತೆ ಇದ್ದ
ಸಹಚರರು ಯಾರು… ಯಾರೆಲ್ಲಾ ಇದ್ದಿವಿ ಅನ್ನೋದನ್ನು ಬಹಿರಂಗವಾಗಿ ನ್ಯಾಷನಲ್‌ ಮೀಡಿಯಾ ಮುಂದೆ ಬಾಯ್ಬಿಟ್ಟ
ದೂರುದಾರನ ಧೈರ್ಯ ಒಂದ್ಕಡೆ ಮೆಚ್ಚಲೇಬೇಕು.. ಯಾವ ಆತ್ಮವಿ‍ಶ್ವಾಸದಲ್ಲಿ ಇವ್ರೆಲ್ಲರ ಹೆಸ್ರು ತೆಗೆದುಕೊಳ್ಥಾ
ಇದ್ದಾನೆ.. ಅವ್ರನ್ನು ಎಸ್‌ಐಟಿ ತನಿಖೆ ಮಾಡುತ್ತೇ ಅನ್ನೋ ಆತಂಕವೂ ಇಲ್ಲವಾ..? ಅಥವಾ ಇವನ ಮಾತು ಸುಳ್ಳಾಗಿದ್ರೆ,
ಅವ್ರ ಹೆಸ್ರನ್ನೆಲ್ಲಾ ಅದೇಗೆ ನೇರವಾಗಿ ತೆಗೆದುಕೊಳ್ತಿದ್ದ.. ಒಟ್ಟಾರೆ.. ಮೀಡಿಯಾ ಟ್ರಯಲ್‌ ಮಾಡುವಷ್ಟು ಸುಲಭವೂ
ಅಲ್ಲ ಈ ಕೇಸ್…‌ಭೀಮನ ಹಿನ್ನೆಲೆ ಏನು..? ಅವನನ್ನು ಇಲ್ಲಿಗೆ ತಂದವ್ರರಾರು ಅನ್ನೋ ನಿಟ್ಟಿನಿಲ್ಲ ತನಿಖೆಗೆ ಆಗ್ರಹ ಕೇಳಿ
ಬರ್ತಿದ್ರು ಕೂಡ, ಎಸ್‌ಐಟಿ ಇದನ್ನೆಲ್ಲಾ ಮಾಡದೇ ತನಿಖೆ ಮಾಡ್ತಿದೆ ಅನ್ನೋದನ್ನು ನಾವು ನಂಬಲಿಕ್ಕೆ ಸಾಧ್ಯವೇ..?

ಇಲ್ಲಿಗೆ ಏನೂ ಸಾಕ್ಷ್ಯ ಸಿಗದೇ ಹೋದಲ್ಲಿ, ಮತ್ತೆ ಹೇಳುವ ಭೀಮನ ಮಾತುಗಳನ್ನು ಎಸ್‌ಐಟಿ ನಂಬುತ್ತಾ..? ಅವನ
ವಿರುದ್ಧದ ತನಿಖೆಯ ಮೊರೆ ಹೋಗುತ್ತಾ ಎಲ್ಲವೂ ಇನ್ನು ಪ್ರಶ್ನಾರ್ತಕ.. ಇನ್ನು ಈ ನಡುವೆ,

ಮೇಲಿಂದ ಮೇಲೆ ಇದೇ ರೀತಿ ಕಂಪ್ಲೆಂಟ್‌ಗಳು ಬರ್ತಾ ಇರೋದನ್ನು ಎಸ್‌ಐಟಿ ಟೀಮ್‌ ಹೇಗೆ ನೋಡ್ತಿದೆ ಅನ್ನೋದು
ಇನ್ನು ನಿಗೂಢ.. ಈ ಕೇಸ್‌ಗೂ ಸೌಜನ್ಯ ಕೇಸ್‌ಗೂ ಅಜಗಜಾಂತರ ವ್ಯತ್ಯಾಸಗಳಿವೆ.. ಈ ಕೇಸ್‌ನಲ್ಲಿ ಇನ್ನು ನಾವು ಒಂದು
ತಾರ್ಕಿಕ ಅಂತ್ಯಕ್ಕೆ ಬರದೇ ಇನ್ನು ಕಾದು ನೋಡುವ ವಿಶ್ವಾಸದಲ್ಲಿ ಇರೋಣ..

Rakesh arundi

Leave a Reply

Your email address will not be published. Required fields are marked *

ನೀವು ತಪ್ಪಿಸಿಕೊಂಡಿರಬಹುದು