ಧರ್ಮಸ್ಥಳ ಪ್ರಕರಣ: ಶವ ಹೂತಿಟ್ಟ ಸ್ಥಳದಲ್ಲಿ ತಜ್ಞರ ಸಹಕಾರ ಮತ್ತು ಹೊಸ ಬೆಳವಣಿಗೆಗಳು

ಸ್ನೇಹಿತರೆ ನಮಸ್ಕಾರ ನಾನು ನಿಮ್ಮ ರಾಕೇಶ್‌ ಆರುಂಡಿ. ಇವತ್ತು ಧರ್ಮಸ್ಥಳ ಗ್ರಾಮದ ಸರಣಿ ಕೃತ್ಯಗಳ ಆರೋಪಕ್ಕೆ
ಸಂಬಂಧ ಪಟ್ಟ ಹಾಗೆ ಏನೆಲ್ಲಾ ಡೆವೆಲಪ್‌ಮೆಂಟ್ಸ್‌ ಆಯ್ತು ಅನ್ನೋದನ್ನು ನೋಡ್ತಾ ಹೋಗೋಣ.. ಸ್ನೇಹಿತರೆ..
ಧರ್ಮಸ್ಥಳದಲ್ಲಿ ಹೂತಿಟ್ಟ ಶವಗಳನ್ನು ಹೊರತೆಗೆಯೋಕೆ ಸ್ವಯಂ ಪ್ರೇರಿತವಾಗಿ ವಿಜ್ಞಾನಿಗಳು, ಇಂಜಿನಿಯರ್‌ಗಳು
ಮುಂದೆ ಬಂದಿದ್ದಾರೆ.. ನಾವು ನಿಮಗೆ ನೆರವು ಕೊಡ್ತೀವಿ ಅಂತಾ ಎಫ್‌ಎಸ್‌ಎಲ್‌ ಟೀಮ್‌ ಒಂದು ನೆರವಿಗೆ ನಿಂತಿದೆ.. ಈ
ಕೇಸ್‌ನಲ್ಲಿ ಸೋಸೈಟಿ ತೋರ್ತಿರೋ ಸಹಕಾರ ನೋಡ್ತಿದ್ದರೆ ಖುಷಿ ಆಗುತ್ತೆ.. ಇದಕ್ಕೆ ಸಂಭಂಧ ಪಟ್ಟ ಹಾಗೆ ಕಂಪ್ಲೀಟ್‌
ಮಾಹಿತಿಯನ್ನು ನೋಡೋಣ.. ಇನ್ನು,. ಒಂದು ಕಡೆ ಎಸ್‌ಐಟಿ ಟೀಮ್‌ ಮೇಲೆ ನಾವೆಲ್ಲಾ ತುಂಬಾ ಹೋಪ್ಸ್‌
ಇಟ್ಟಿದ್ಧೀವಿ.ಯಾರೂ ಅನುಮಾನ ಪಡುವಂತ ಟೀಮ್‌ ಇದಲ್ಲವೇ ಅಲ್ಲ.ಯಾಕಂದ್ರೆ ಒಡಿಶಾ ಮೂಲದ ಮೊಹಂತಿ ಯಾರ
ಮುಲಾಜಿಗೂ ಕೇರ್‌ ಮಾಡಲ್ಲ.. ಇನ್ನೊಂದ್ಕಡೆ ಅನುಚೇತ್‌ ಈಗಾಗ್ಲೇ ಸೌಜನ್ಯ ಕೇಸ್‌ನಲ್ಲಿ ವರ್ಕ್‌ ಮಾಡಿರೋದ್ರಿಂದ
ಮೋಸ್ಟ್‌ ಎಫಿಶೀಯಂಟ್‌ ಅನ್ನೋದು ಗೊತ್ತು.. ಆದ್ರೆ, ಇದೀಗ ಎಸ್‌ಐಟಿ ಫಾರ್ಮ್‌ ಆಗಿ ಎರಡು ದಿನ ಕಳೆದ್ರು ಇನ್ನು
ಧರ್ಮಸ್ಥಳಕ್ಕೆ ಎಂಟ್ರಿ ಕೊಡದೇ ಇರೋದಕ್ಕೆ ಕಾರಣ ಈ ಟೀಮ್‌ನಲ್ಲಿ ಈಗಾಗ್ಲೇ ಒಬ್ಬ ಅಧಿಕಾರಿ ಹಿಂದೆ ಸರಿಯೋ
ಮಾತುಗಳನ್ನಾಡಿರೋದು.. ಸ್ನೇಹಿತರೆ… ಸೌಮ್ಯಲತಾ ಅವ್ರು ವೈಯಕ್ತಿಕ ಕಾರಣಗಳಿಂದ ಎಸ್‌ಐಟಿ
ಟೀಮ್‌ನಲ್ಲಿರೋದಿಲ್ಲ ಎನ್ನಲಾಗ್ತಿದೆ.. ಅದಕ್ಕೆ ಪುಷ್ಟಿ ನೀಡುವಂತೆ.ಗೃಹ ಸಚಿವರೇ ಅನ್‌ಅಫಿಶಿಯಲ್‌ ಆಗಿ ಈ ಸುದ್ದಿ
ಬಂದಿದೆ ಅಂತಾ ಮಾಧ್ಯಮಗಳ ಮುಂದೆ ಬಹಿರಂಗ ಪಡಿಸಿದ್ದು ಒಂದ್ಕಡೆ ಬೇಸರದ ಸಂಗತಿ.. ಯಾಕಂದ್ರೆ, ಈ ನಾಲ್ಕು ಜನ್ರ
ಟೀಮ್‌ನಲ್ಲಿ ಯಾರೊಬ್ಬರ ಗೈರನ್ನು ನಾವು ಬಯಸೋದಿಲ್ಲ ಅನ್ನೋದು ಸತ್ಯದ ಸಂಗತಿ.. ಇದ್ರ ಜೊತೆಗೆ,
ಧರ್ಮಸ್ಥಳ ಗ್ರಾಮದಲ್ಲಿ ನಿಗೂಢವಾಗಿ ಶವ ಹೂತಿಟ್ಟ ಪ್ರಕರಣ ಸಂಬಂಧ ಹೊಸ ಬೆಳವಣಿಗೆ ನಡೆದಿದೆ. ಶವ ಹೂತ
ಪ್ರಕರಣದ ತನಿಖೆಗೆ ಹಲವು ವಿಜ್ಞಾನಿಗಳು, ಇಂಜಿನಿಯರ್‌ಗಳು ಹಾಗೂ ತಾಂತ್ರಿಕ ತಜ್ಞರು ತಮ್ಮ ಸೇವೆಗಳನ್ನು
ಸ್ವಯಂಪ್ರೇರಿತವಾಗಿ ನೀಡಲು ಮುಂದೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ 2003ರಲ್ಲಿ ನಾಪತ್ತೆಯಾಗಿದ್ದ ಯುವತಿಯ
ತಾಯಿ ಸುಜಾತಾ ಭಟ್ ಅವರನ್ನು ಸಂಪರ್ಕಿಸಿ ನ್ಯಾಯಾಲಯದ ಮುಂದಿಟ್ಟು ಅನುಮತಿ ಪಡೆಯುವಂತೆ ಮನವಿ
ಮಾಡಿದ್ದಾರೆ. ಧರ್ಮಸ್ಥಳದಲ್ಲಿ ಶವ ಹೂತಿರುವ ಸ್ಥಳವನ್ನು ಅನಾವರಣಗೊಳಿಸಲು ಮತ್ತು ಡಿಎನ್ಎ ಮ್ಯಾಚಿಂಗ್
ಪ್ರಕ್ರಿಯೆಗಾಗಿ ಅಗತ್ಯವಿರುವ ತಂತ್ರಜ್ಞಾನವನ್ನು ಬಳಸುವ ಬಗ್ಗೆ ಅವರು ಸಲಹೆ ನೀಡಲು ಸಿದ್ಧರಾಗಿದ್ದಾರೆ’ ಎಂದು
ಹೇಳಿದ್ದಾರೆ. ಇನ್ನು ತಜ್ಞರು ಉಲ್ಲೇಖಿಸಿದಂತೆ, ಸಮಾಧಿ ತೆರೆಯುವ ಕಾರ್ಯವನ್ನು ಹೆಚ್ಚು ಪರಿಣಾಮಕಾರಿಯಾಗಿ ಪತ್ತೆ
ಮಾಡುವುದು, ಶವದ ಗುರುತು ಪತ್ತೆಗೆ ವೈದ್ಯಕೀಯ ಮತ್ತು ಪೋಲಿಸ್ ಅಧಿಕಾರಿಗಳಿಗೆ ಪೂರಕವಾಗಿ ಕೆಲಸ ಮಾಡುವುದಾಗಿ
ಮುಂದೆ ಬಂದಿದ್ದಾರೆ. ಎಲ್ಲರ ಸಹಕಾರದಿಂದ ಈ ತನಿಖೆಯನ್ನು ಮಾಡಿದಲ್ಲಿ ಪ್ರಕರಣವನ್ನು ಸತ್ಯದ ಹಾದಿಯತ್ತ
ಕೊಂಡೊಯ್ಯಲು ಸಹಕಾರಿಯಾಗುತ್ತದೆ. ಈ ಬೆಳವಣಿಗೆಯ ಮಧ್ಯೆ, ವಕೀಲ ಮಂಜುನಾಥ್ ಅವರು ವಿಶೇಷ ತನಿಖಾ ತಂಡ
(SIT) ತನಿಖಾ ಪ್ರಕ್ರಿಯೆ ಪ್ರಾಮಾಣಿಕವಾಗಿರಲಿ ಎಂಬ ದೃಷ್ಟಿಯಿಂದ, ಈ ತಜ್ಞರ ಸಂಪರ್ಕ ಮಾಹಿತಿಯನ್ನು ಸಾರ್ವಜನಿಕವಾಗಿ
ಲಭ್ಯವಾಗುವಂತೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ತಜ್ಞರ ಸಹಕಾರ ಪಡೆದರೆ ಲಾಭವೇನು?
 ಇನ್ನು ಎಸ್‌ಐಟಿ ತನಿಖಾ ತಂಡದ ಜೊತೆಗೆ ಈ ತಜ್ಞರು ಶವ ಹೂತಿಟ್ಟ ಪ್ರಕರಣದ ನಿಖರ ಮತ್ತು ವೇಗವಾದ
ತನಿಖೆಗೆ ನೆರವಾಗಲಿದೆ.
 ಈ ತಜ್ಞರು ತನಿಖಾ ತಂಡದೊಂದಿಗೆ ನೇರವಾಗಿ ಸಂವಹನ ನಡೆಸಲು ಮತ್ತು ತಮ್ಮ ಸೇವೆಗಳನ್ನು ಸ್ವಯಂ
ಪ್ರೇರಿತರಾಗಿ ನೀಡಲು ಸಾಧ್ಯವಾಗುತ್ತದೆ.
 ಈ ರೀತಿಯ ಸಹಯೋಗವು ಸಮಾಧಿ ತೆಗೆಯುವ ಕಾರ್ಯವೈಖರಿಯನ್ನು ಉತ್ತಮಗೊಳಿಸುತ್ತದೆ.

 ಈ ತಂತ್ರಜ್ಞರು ಸಮಾಧಿ ತೆಗೆಯುವ ಪ್ರಕ್ರಿಯೆಯನ್ನು ಹೆಚ್ಚು ಪರಿಣಾಮಕಾರಿಗೊಳಿಸಲಿದ್ದಾರೆ.
 ಶವ ಹೊರ ತೆಗೆಯುವ ಪ್ರಕ್ರಿಯೆಯಲ್ಲಿ ಹೊಸ ತಂತ್ರಜ್ಞಾನ ಮತ್ತು ವಿಧಾನಗಳನ್ನು ಬಳಕೆ ಮಾಡಲಿದ್ದಾರೆ.
ಸ್ನೇಹಿತರೆ… ಇದೆಲ್ಲರ ನಡುವೆ.. ಇನ್ನು ಸ್ಪೋಟಕ ಮಾಹಿತಿಗಳು ಒಂದೊಂದಾಗಿ ತೆರೆದುಕೊಳ್ತಾ ಇವೆ..

ಮೃತಪಟ್ಟವರ ಪೈಕಿ ಅಪ್ರಾಪ್ತರು, ವಯಸ್ಕರು, ಹದಿಹರೆಯದವರು, ಅಪರಿಚಿತ ಪುರುಷರು, ಮಹಿಳೆಯರು,
ವಿದ್ಯಾರ್ಥಿನಿಯರು ಇರುವುದು ಗೊತ್ತಾಗಿದೆ..

ಇನ್ನು ಸ್ವಲ್ಪ ಹಿನ್ನೆಡೆ ಅಂದ್ರೆ..
ಧರ್ಮಸ್ಥಳ ಸರಣಿ ಹತ್ಯೆ ಪ್ರಕರಣದ ತನಿಖೆಗೆ ರಚಿಸಲಾದ ಎಸ್‌ಐಟಿಯ ಇಬ್ಬರು ಅಧಿಕಾರಿಗಳು ಹಿಂದೆ ಸರಿದಿದ್ದಾರೆ.
ವೈಯಕ್ತಿಕ ಕಾರಣಗಳಿಂದಾಗಿ ಐಪಿಎಸ್ ಅಧಿಕಾರಿ ಸೌಮ್ಯಲತಾ ಮತ್ತು ಧರ್ಮಸ್ಥಳದ ಶಿಕ್ಷಣ ಸಂಸ್ಥೆಯಲ್ಲಿ ಓದಿದ್ದ ನಾನ್-
ಐಪಿಎಸ್ ಅಧಿಕಾರಿಯೊಬ್ಬರು ತನಿಖಾ ತಂಡದಿಂದ ದೂರ ಉಳಿದಿದ್ದಾರೆ. ತಂಡಕ್ಕೆ ಹೊಸ ಅಧಿಕಾರಿಗಳನ್ನು ನೇಮಿಸಲು
ಸರ್ಕಾರಕ್ಕೆ ಮನವಿ ಸಲ್ಲಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಧರ್ಮಸ್ಥಳ ಕೇಸ್‌ನ ತನಿಖೆ ನಡೆಸಲು ಸರ್ಕಾರವು 4 ಜನರ ಎಸ್‌ಐಟಿ ರಚನೆ ಮಾಡಿತ್ತು. ಆಂತರಿಕ ಭದ್ರತಾ ವಿಭಾಗದ
ಪೊಲೀಸ್ ಮಹಾ ನಿರ್ದೇಶಕ ಪ್ರಣವ ಮೊಹಂತಿಗೆ ಮುಂದಾಳತ್ವ ನೀಡಿತ್ತು. ಉಳಿದಂತೆ ತಂಡದಲ್ಲಿ ಹಿರಿಯ ಐಪಿಎಸ್‌
ಅಧಿಕಾರಿಗಳಾದ ಎಂ.ಎನ್‌ ಅನುಚೇತ್, ಸೌಮ್ಯಲತಾ ಮತ್ತು ಜಿತೇಂದ್ರ ಕುಮಾರ್ ದಯಾಮ ಇದ್ದರು. ಸದ್ಯ ಸಿಎಆರ್‌
ಕೇಂದ್ರಸ್ಥಾನದ ಉಪ ಪೊಲೀಸ್‌ ಆಯುಕ್ತರಾದ ಸೌಮ್ಯಲತಾ ಅವರು ವಯಕ್ತಿಕ ಕಾರಣಗಳಿಂದ ಹಿಂದೆ ಸರಿಯಲು ನಿರ್ಧರಿಸಿ
ಪತ್ರ ಬರೆದಿದ್ದಾರೆ ಎನ್ನಲಾಗುತ್ತಿದೆ. ತನಿಖೆಯ ಕುರಿತು ಬೆಂಗಳೂರಿನ ಸಿಐಡಿ ಕಚೇರಿಯಲ್ಲಿ ನಡೆದ ಸಭೆಗೂ ಗೈರಾಗಿದ್ದರು.
ಮತ್ತೊಬ್ಬ ನಾನ್‌ ಐಪಿಎಸ್‌ ಅಧಿಕಾರಿ ದೂರ
4 ಜನರ  ಎಸ್‌ಐಟಿ ತಂಡದ ಜತೆಗೆ 20 ನಾನ್‌ ಐಪಿಎಸ್‌ ಅಧಿಕಾರಿ ಗಳನ್ನು ಕರ್ನಾಟಕ ರಾಜ್ಯ ಪೊಲೀಸ್‌ ಮಹಾನಿರ್ದೇಶಕರು
ನೇಮಕ ಮಾಡಿದ್ದರು. ಈ ಪೈಕಿ ಒಬ್ಬರು ಅಧಿಕಾರಿಯು ಧರ್ಮಸ್ಥಳ ಕ್ಷೇತ್ರದ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ
ಮಾಡಿದ್ದೇ ಎಂದು ತನಿಖಾ ಕಾರ್ಯದಿಂದ ದೂರ ಉಳಿಯಲು ನಿರ್ಧರಿಸಿದ್ದಾರಂತೆ. ಇವರೂ ಕೂಡ ಸಿಐಡಿ ಕಚೇರಿಯಲ್ಲಿ
ನಡೆದ ತನಿಖಾ ತಂಡ ಸಭೆಯಲ್ಲಿ ಭಾಗಿಯಾಗಿರಲಿಲ್ಲ.

ಹೊಸಬರ ನೇಮಕಕ್ಕೆ ಸರ್ಕಾರಕ್ಕೆ ಶೀಘ್ರ ಪತ್ರ
ಎಸ್‌ಐಟಿ ತಂಡದ ಮುಖ್ಯಸ್ಥರಾಗಿರುವ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾ ನಿರ್ದೇಶಕ ಪ್ರಣವ ಮೊಹಂತಿ ಅವರು
ತನಿಖೆಯಿಂದ ದೂರ ಸರಿದ ಅಧಿಕಾರಿಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿ ಹೊಸಬರ ನೇಮಕಕ್ಕೆ ಮನವಿ ಮಾಡುವ ಸಾಧ್ಯತೆ
ಇದೆ.

ಇದರ ಜೊತೆಗೆ..
ಮೈಸೂರಿನ ಒಡನಾಡಿ ಸೇವಾ ಸಂಸ್ಥೆ ಧರ್ಮಸ್ಥಳ ಸೌಜನ್ಯ ಪ್ರಕರಣದ ತಪ್ಪಿತಸ್ಥರ ಅಧಿಕಾರಿಗಳ ಪಾರದರ್ಶಕ ತನಿಖೆ
ನಡೆಸಲು ‘ಅಕ್ವಿಟಲ್‌ ಕಮಿಟಿʼ ರಚಿಸಲು ಸರ್ಕಾರಕ್ಕೆ ಒತ್ತಾಯಿಸಿದೆ. ಈ ಪ್ರಕರಣದ ತನಿಖೆಗೆ ರಾಜ್ಯ ವಿಶೇಷ ತನಿಖಾ
ದಳವನ್ನು ರಚಿಸಿರುವುದನ್ನು ಸ್ವಾಗತಿಸಿದೆ. ತನಿಖೆ ಪಾರದರ್ಶಕವಾಗಿ ನಡೆಸಿ ತಾರ್ಕಿಕ ಅಂತ್ಯ ನೀಡಿ ರಾಜ್ಯದಲ್ಲಿ ನೆಲೆಸಿರುವ
ಅನುಮಾನ, ಆಶಾಂತಿ ತೊಲಗಿಸುವ ಕೆಲಸ ಸರ್ಕಾರ ಮಾಡಬೇಕಿದೆ ಎಂದು ಸಂಸ್ಥೆಯ ನಿರ್ದೇಶಕರಾದ ಸ್ಟ್ಯಾನ್ಲಿ, ಪರಶು
ಆಗ್ರಹಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಸುತ್ತಮುತ್ತ ನಡೆದಿದೆ ಎನ್ನಲಾಗಿರುವ ಹಲವಾರು ಅತ್ಯಾಚಾರ ಹಾಗೂ ಹತ್ಯೆಗಳ
ತನಿಖೆಗಾಗಿ ರಾಜ್ಯ ವಿಶೇಷ ತನಿಖಾ ದಳವನ್ನು ರಚಿಸಿರುವುದು ಸ್ವಾಗತಾರ್ಹವಾಗಿದೆ. ವಿಶೇಷ ತನಿಖಾ ದಳದಲ್ಲಿ ಪ್ರಕರಣಗಳ
ಇತಿಹಾಸವು ನಿರೀಕ್ಷಿಸುವಂತೆ ಎಲ್ಲ ಪರಿಣಿತರ ಇರುವಿಕೆಯ ಜತೆಗೆ ತನಿಖೆಯು ದಕ್ಷ, ಪ್ರಾಮಾಣಿಕ, ನಿಷ್ಪಕ್ಷಪಾತ ಹಾಗೂ
ಪಾರದರ್ಶಕವಾಗಿ ನಡೆಯುವ ಭರವಸೆ ಇದೆ. ಈ ಎಲ್ಲ ಪ್ರಕ್ರಿಯೆಯು ಸೌಜನ್ಯಗಳ ಅಪಹರಣ, ಅತ್ಯಾಚಾರ, ಹತ್ಯೆಯ
ಆರೋಪಿಗಳ ಪತ್ತೆಗಾಗಿ ನಡೆದ ಜನಾಗ್ರಹ ಹಾಗೂ ಜನಾಂದೋಲನದ ನೇರವಾದ ಕೊಡುಗೆ ಎಂದು ಒಡನಾಡಿಯು ನಂಬಿದೆ.
ಆದರೆ, ಸೌಜನ್ಯಳ ಪ್ರಕರಣದಲ್ಲಿ ಸಿಬಿಐ ಸ್ಪೆಷಲ್‌ ಕೋರ್ಟ್‌ ನೀಡಿರುವ ತೀರ್ಪಿನಲ್ಲಿ ತನಿಖೆ ನಡೆಸಿದ ಎಲ್ಲ ಅಧಿಕಾರಿಗಳು,
ವೈದ್ಯರು ಸೇರಿದಂತೆ ಮತ್ತಿತರರು ಗುರುತರ ತಪ್ಪೆಸಗಿರುವುದು ಕಂಡು ಬಂದಿದೆ. ಹೀಗಾಗಿ ಸರಕಾರವು ಕೂಡಲೇ ಕ್ವಿಟಲ್‌
ಕಮಿಟಿ (ತನಿಖೆ ವೇಳೆ ಲೋಪವೆಸಗಿದ ಅಧಿಕಾರಿಗಳ ವಿರುದ್ಧ ನಡೆಸುವ ತನಿಖಾ ಸಮಿತಿ) ರಚಿಸಿ ಅದರ ಮೂಲಕ ತಪ್ಪಿತಸ್ಥ
ಅಧಿಕಾರಿಗಳನ್ನು ತನಿಖೆಗೊಳಪಡಿಸಬೇಕು ಎಂದು 2022ರ ಜೂ. 16ರಂದು ಆದೇಶಿಸಿತ್ತು.
ಆದರೆ, ಸರಕಾರವು ಇದುವರೆಗೂ ಆಕ್ವಿಟಲ್‌ ಕಮಿಟಿ ರಚನೆಗೆ ಚಾಲನೆ ನೀಡದೆ ವಿಳಂಬಿಸುತ್ತಿರುವುದು ಖಂಡನೀಯವಾಗಿದೆ
ಎಂದು ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕರಾದ ಸ್ಟ್ಯಾನ್ಲಿ , ಪರಶು ದೂರಿದ್ದಾರೆ. ಸರಕಾರದ ಸರ್ಕಾರದ ನೀತಿಯು
ನ್ಯಾಯಾಲಯದ ಆದೇಶವನ್ನು ಗೌಣ ಮಾಡಿದಂತಾಗಿದೆ. ಈಗಾಗಲೇ ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳ ಪಟ್ಟಿಯಲ್ಲಿ
ವೈದ್ಯರಾಗಿದ್ದ ಆದಂ ನಿಧನರಾಗಿದ್ದು, ಮಹತ್ತರ ವಿಚಾರಗಳು ಹಾಗೂ ಸತ್ಯಗಳು ಅವರೊಂದಿಗೆ ಮರೆಯಾಗಿವೆ. ಮತ್ತೊಬ್ಬ
ತಪ್ಪಿತಸ್ಥ ಪ್ರಕರಣದ ತನಿಖಾಧಿಕಾರಿ ಯೋಗೇಶ್‌ ನ್ಯಾಯಾಲಯದ ಆದೇಶದ ಹೊರತಾಗಿಯೂ ಸರಕಾರದ ಸಕಲ
ಸವಲತ್ತುಗಳ ಜತೆಗೆ ಬಡ್ತಿ ಪಡೆದು ಸರಕಾರಿ ಸಂಬಳದಲ್ಲಿ ಬದುಕುತ್ತಿದ್ದಾರೆ. ಅದೇ ರೀತಿ ವೈದ್ಯೆ ರಶ್ಮಿ ಕೂಡ ತನಿಖೆಯನ್ನು
ಎದುರಿಸದೆ ಮುಂದುವರೆಯುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಸೌಜನ್ಯ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತರಲು ಹಾಗೂ ರಾಜ್ಯದಲ್ಲಿ ನೆಲೆಸಿರುವ ಅನುಮಾನ, ಆತಂಕ ಹಾಗೂ
ಆಶಾಂತಿಯನ್ನು ತೊಡೆದು ಹಾಕಲು ರಾಜ್ಯ ಸರಕಾರ ನ್ಯಾಯಾಲಯದ ಆದೇಶದನ್ವಯ ಸಮರ್ಥ ಆಕ್ವಿಟಲ್‌ ಕಮಿಟಿ ರಚಿಸಿ,
ತಪ್ಪಿತಸ್ಥ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸುವುದರ ಮೂಲಕ ಪ್ರಕ್ರಿಯೆಗೆ ಚಾಲನೆ ನೀಡಬೇಕು ಎಂದು ಒಡನಾಡಿ ಸೇವಾ
ಸಂಸ್ಥೆಯ ನಿರ್ದೇಶಕರಾದ ಸ್ಟ್ಯಾನ್ಲಿ, ಪರಶು ಆಗ್ರಹಿಸಿದ್ದಾರೆ.

Rakesh arundi

Leave a Reply

Your email address will not be published. Required fields are marked *

ನೀವು ತಪ್ಪಿಸಿಕೊಂಡಿರಬಹುದು