Dharmasthala Banglegudda: ಸೌಜನ್ಯ ಅತ್ಯಾಚಾರವಾದ ದಿನ ಏನಾಯ್ತು.? ಚಿನ್ನಯ್ಯ ರಹಸ್ಯ ಮಾಹಿತಿ ಬಹಿರಂಗ
ಸತ್ಯ ಎದುರಿಗೆ ಕಾಣ್ತಿದೆ ಆದ್ರೂ ಷಡ್ಯಂತ್ರದ ಮಾತುಗಳೇಕೆ ಅನ್ನೋದು ಅನೇಕರ ಆರೋಪ. ಚಿನ್ನಯ್ಯ ಎರಡು ವರ್ಷಗಳ ಹಿಂದೆ ತಿಮರೋಡಿ ಮನೆಗೆ ಭೇಟಿ ಕೊಟ್ಟು ಅನೇಕ ಸಂಗತಿಗಳನ್ನು ನೇರಾನೇರವಾಗಿ ಹಂಚಿಕೊಂಡಿದ್ದಾನೆ. ಅನೇಕ ಬೆಚ್ಚಿ ಬೀಳಿಸೋ ಸಂಗತಿಗಳನ್ನು ಶೇರ್ ಮಾಡಿದ್ದಾನೆ. ನನಗೆ ಕಾನೂನಿನ ರಕ್ಷಣೆ ಸಿಕ್ಕರೆ ನಾನೆಲ್ಲವನ್ನು ಒಪ್ಪಿಕೊಳ್ತೀನಿ ಅಂತಾ ರಹಸ್ಯ ಸಂಗತಿಗಳನ್ನು ಬಾಯ್ಬಿಟ್ಟಿದ್ದ ಚಿನ್ನಯ್ಯ ಇವತ್ತು ಜೈಲು ಪಾಲಾಗಿದ್ದಾನೆ.ಅದೇನೆ ಇರಲಿ, ಆತ ಬಂಗ್ಲೆಗುಡ್ಡದ ರಹಸ್ಯ ಸಂಗತಿಗಳನ್ನು ಹಂಚಿಕೊಂಡಿರೋ ಜೊತೆಗೆ ಸೌಜನ್ಯ ಪ್ರಕರಣದ ಬಗ್ಗೆ ಭಯಾನಕ ಸಂಗತಿಯೊಂದನ್ನು ನೋವಿನಿಂದ್ಲೇ ಶೇರ್ ಮಾಡಿದ್ದಾನೆ. ಚಿನ್ನಯ್ಯ ಅಳಲು ತೋಡಿಕೊಂಡಿರೋ ಪ್ರಕಾರ ಸೌಜನ್ಯ ಬಂಗಾರದಂತ ಹೆಣ್ಣು ಮಗಳು. ಆಕೆಯನ್ನು ಚಿಕ್ಕವಯಸ್ಸಿನಿಂದ್ಲೇ ನೋಡಿದ್ದೆ. ಬಂಗಾರದಂತ ಮಗಳು.. ಅಷ್ಟೆ ಅಲ್ಲ ಅವತ್ತು ಸಂತೋಷ್ ರಾವ್ ನಾ ಹಿಡಿದು ತಂದಿದ್ದು ಸಾರ್ವಜನಿಕರಲ್ಲ. ಅವನನ್ನು ಹಿಡಿದಿದ್ದು ಮಲ್ಲಿಕ್ ಜೈನ್ ಜೊತೆಗಿದ್ದ ಕೆಲವರು. ರವಿ ಪೂಜಾರಿ, ಗೋಪಾಲ ಕೃಷ್ಣ, ಮಲ್ಲಿಕ್ ಜೈನ್ ಎಲ್ಲಾ ಜೊತೆಗಿದ್ರು.
ಸೌಜನ್ಯ ಕೇಸ್ ಮುಚ್ಚಿ ಹಾಕೋಕೆ ಡೀಲ್.!ಆಮಿಷ.!?
ಸಂತೋಷ್‌ರಾವ್‌ಗೆ ಸಾರ್ವಜನಿಕರು ಧರ್ಮದೇಟು ಕೊಡಲಿಲ್ಲ. ಮಲ್ಲಿಕ್‌ಜೈನ್ ಜೊತೆಯಲ್ಲಿದ್ದವ್ರೆ ಹೊಡೆದು ತಂದಿದ್ರು. ಮಲ್ಲಿಕ್ ಜೈನ್‌ಗೆ ಒಂದು ಅಭ್ಯಾಸವಿತ್ತು. ಬಾಹುಬಲಿ ಬೆಟ್ಟಕ್ಕೆ ಬರೋ ಹೆಣ್ನು ಮಕ್ಕಳಿಗೆ ತನ್ನ ನಂಬರ್ ಕೊಟ್ಟು ಪುಸಲಾಯಿಸಿ ಅಲ್ಲೆ ಹೀಂದೇ ಇರೋ ಹೆಂಚಿನ ಗೆಸ್ಟ್ ಹೌಸ್‌ಗೆ ಕರೆದುಕೊಂಡು ಹೋಗ್ತಿದ್ದ. ನಾನು ಕೂಡ ಅವ್ರ ಜೊತೆ ಅಲ್ಲಿಗೆ ಹೋಗ್ತಿದ್ದ ಎಂದು ಒಪ್ಪಿಕೊಂಡಿದ್ದಾನೆ. ಈ ಭಯನಾಕ ಸಂಗತಿಗಳು ಎಷ್ಟು ಸತ್ಯ ಅನ್ನೋದು ತನಿಖೆಯಿಂದ ಗೊತ್ತಾಗ್ಬೇಕಾಗಿದೆ. ಇಷ್ಟು ನಿರ್ಭಯನಾಗಿ ಸತ್ಯ ಬಿಚ್ಚಿಡೋ ಚಿನ್ನಯ್ಯನ ವಿಚಾರಣೆ ಎಸ್‌ಐಟಿ ಯ ಮುಂದೆ ಯಾಕೆ ಬೆಳಕಿಗೆ ಬರಲಿಲ್ಲ ಅನ್ನೋದು ಅನುಮಾನಕ್ಕೆ ಎಡೆ ಮಾಡಿಕೊಡ್ತಿದೆ. ಇದ್ಯಾವುದೋ ಅಲ್ಲಿ ವಿಚಾರಣೆಗೆ ಬರಲೇ ಇಲ್ಲವೇ. ಇಲ್ಲಿ ಕೇವಲ ಸಾಮೂಹಿಕ ಶವಗಳ ಹೂತಿಟ್ಟ ಪ್ರಕರಣಗಳಿಗೆ ಮಾತ್ರ ಸೀಮಿತವಾಯ್ತೇ ಅನ್ನೋ ಪ್ರಶ್ನೆ ಕಾಡುತ್ತೆ.
ಸೌಜನ್ಯ ಕೃತ್ಯ ನಡೆದ ದಿನ ರಾಜೇಂದ್ರ ದಾಸ್ (ಹಳೆ ಕಜಾಂಚಿ… ಫೈನಾನ್ಸ್ ಎಲ್ಲ ನೋಡಿಕೊಳ್ತಿದ್ದ ವ್ಯಕ್ತಿ) ಅನ್ನೋ ಧರ್ಮಸ್ಥಳ ವ್ಯಕ್ತಿ ರಾತ್ರಿ ಚಿನ್ನಯ್ಯ ಹಾಗೂ ಕೆಲವ್ರನ್ನು ಕರೆದು ನೇತ್ರಾವತಿ ಸಮೀಪ ಏನೆಲ್ಲಾ ಮಾತಾಡ್ತಾರೆ ಗೊತ್ತಲ್ವಾ..? ನಾನು ಹೇಳಿದ ಹಾಗೆ ಮಾಢಿದ್ರೆ ಕೈತುಂಬಾ ಹಣ ಕೊಡ್ತೀನಿ ಅಂತಾ ಹಣದ ಆಮಿಷ ಒಡ್ಡಿದ್ದರಂತೆ. ಹೇಳಿಕೊಟ್ಟ ಸಾಕ್ಷ್ಯಗಳನ್ನು ಹೈಕೋರ್ಟ್‌ನಲ್ಲಿ ಹೇಳಿಕೊಡ್ಬೇಕು ಇಲ್ಲದೇ ಇದ್ರೆ ರೂಮ್‌ನಲ್ಲಿ ಕೂಡಾಕಿ ಹೊಡೀತಾರೆ. ಧಮ್ಕಿ ಹಾಕ್ಥಾರೆ ಅಂತಾ ಹೆದರಿಸಿದ್ರಂತೆ. ಹಾಗಾಗಿ ನಿಮಗೆ ಕೆಲವ್ರ ಶ್ರೀರಕ್ಷೆ ಇದೆ ಎಂದು ಬೆದರಿಸಿದ್ದನಂತೆ ಹಾಗಾಗಿ ಚಿನ್ನಯ್ಯ ಒಪ್ಪಿಕೊಳ್ತೀನಿ ಎಂದು ಸಮ್ಮತಿ ಸೂಚಿಸಿದ್ದ.
ಇದಿಷ್ಟು ಒಂದು ಮಗ್ಗುಲಿನ ಸತ್ಯಾಂಶಗಳನ್ನು ಬಿಚ್ಚಿಟ್ಟರೆ, ಬಂಗ್ಲೆಗುಡ್ಡದ ರಹಸ್ಯಗಳು ಇನನ್ನಷ್ಟು ಕಾಡಿನ ಜಾಡನ್ನು ಕುತೂಹಲದ ಕಡೆಗೆ ತಳ್ತಿವೆ. ಬಂಗಲೆ ಗುಡ್ಡೆಯ ಎದುರಿನ ಗುಡ್ಡದಲ್ಲಿ ಅಸ್ಥಿಪಂಜರಗಳನ್ನು ತೋರಿಸುವ ವಿಶೇಷ ಫೋಟೋವೂ ವೈರಲ್ ಆಗ್ತಿದೆ.
ಸದ್ಯ ಸಿಕ್ಕಿರೋ 7 ಬುರುಡೆಗಳು ಯಾರದ್ದು ಅನ್ನೋದನ್ನು ಎಸ್‌ಐಟಿ ಮೊದಲು ತನಿಖೆ ಮಾಡಲಿ ಅನ್ನೋ ಆಗ್ರಹಗಳು ಕೇಳಿ ಬರ್ತಿರೋ ನಡುವೆ, ಈ ಅವಶೇಷಗಳು, ಅಸ್ಥಿಪಂಜರಗಳು ಬಂಗ್ಲೆಗುಡ್ಡಗೆ ಸೀಮಿತವಾಗಿಲ್ಲ ಬದಲಾಗಿ ಇತರ ಸ್ಥಳಗಳಲ್ಲಿ ಅಂದ್ರೆ ಕೊಲ್ತ್ಯಾರು ಗುಡ್ಡೆ ಮತ್ತು ಮಾದೇರಿ ಗುಡ್ಡದಲ್ಲೂ ಈ ರೀತಿ ಇದೆ ಅನ್ನೋದನ್ನು ಸೂಕ್ಷ್ಮವಾಗಿ ಹೇಳ್ತಿದೆ. ಈ ಬೆಟ್ಟಗಳಲ್ಲೂ ಈ ರೀತಿಯ ಅವಶೇಷಗಳು ಇರಬಹುದು. ಬಂಗ್ಲೆಗುಡ್ಡ ಆತ್ಮಹತ್ಯಾ ಸ್ಥಳ ಅಂತಾ ಅನೇಕರು ಈಗ ಬಲವಾಗಿ ವಾದಿಸ್ತಿದ್ದಾರೆ. ಆದ್ರೆ, ಈ ರೀತಿ ಇತರೆ ಬೆಟ್ಟಗಳನ್ನು ಆ ಸಾಲಿನಲ್ಲಿ ಸೇರಿಸಬಹುದು. ಈ ರೀತಿಯ ಪ್ರಶ್ನೆಗಳು ಉದ್ಭವಿಸುತ್ತವೆ. ಅದ್ಯಾಗ್ಯೂ ಕೂಡ ಬಂಗಲೆಗುಡ್ಡ ಆ ರೀತಿಯ ತಮ್ಮ ಪ್ರಾಣವನ್ನು ಕಳೆದುಕೊಳ್ಳಲು ಆಯ್ಕೆ ಮಾಡುವ ಪ್ರಥಮ ಸ್ಥಳ ಎಂದು ಹೇಳಲು ಯಾವುದೇ ಪುರಾವೆಗಳಿಲ್ಲ ಎಂದು ಎಸ್‌ಐಟಿ ಮೂಲಗಳೇ ಒಪ್ಪಿಕೊಂಡಿವೆ.
ಸದ್ಯ ವೈರಲ್ ಆಗಿರೋ ಫೋಟೋವನ್ನು ನಾನು ಕಮ್ಯೂನಿಟಿ ಗೈಡ್‌ಲೈನ್ಸ್ ಮಿತಿಗಳ ಅಧಾರದಲ್ಲಿ ತೋರಿಸಲು ಸಾಧ್ಯವಿಲ್ಲ. ಆದ್ರೂ, ಈ ಫೋಟೋದಲ್ಲಿ ಒಂದು ದೊಡ್ಡ ಅಸ್ಥಿಪಂಜರ,, ಒಂದು ಚಿಕ್ಕ ಅಸ್ಥಿಪಂಜರ ಇದೆ. ಬೆಟ್ಟೆಗಳು ಹರಿದಿದ್ದರು, ಇಂದು ಪ್ಯಾಂಟ್‌ನಂತೆ ಕಾಣ್ತಿದೆ. ಹೂಳುವ ಬದಲು ಮೇಲೆ ಹಾಕಲಾಗಿದೆ. ಇಂತಹ ಕಾಡಿನಲ್ಲಿ ಮೃತದೇಹಗಳನ್ನು ಯಾರು ಎಸೆದು ಹೋದರು ಅನ್ನೋ ಅನುಮಾನ ಕಾಡ್ತಿವೆ.
ಬಂಗ್ಲೆಗುಡ್ಡದಲ್ಲಿ ಸಿಕ್ಕಿದ್ದು ಪುರುಷರ ಅವಶೇಷ.!?
ಬಂಗ್ಲೆಗುಡ್ಡದಲ್ಲಿ ಸಿಕ್ಕಿರೋ ಎಲ್ಲಾ ಬುರುಡೆಗಳು ಪುರುಷರದ್ದಾಗಿವೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಕೂಡ ಮಾಡಿದೆ. ಅದ್ಯಾಗ್ಯೂ ಬೆಂಗಳೂರಿನ ಮಡಿವಾಳ ಎಫ್‌ಎಸ್ಎಲ್ ಲ್ಯಾಬ್‌ನಲ್ಲಿ ಫೈನಲ್ಲಿ ಕನ್ಫರ್ಮ್ ಮಾಡಬೇಕಾಗಿದೆ. ಇದ್ರ ಮದ್ಯೆ ಧರ್ಮಸ್ಥಳ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ್ ರಾವ್ ಮತ್ತು ಮಾಜಿ ಅಧ್ಯಕ್ಷ ಕೇಶವ ಗೌಡ ಅವರಿಂದ ಗ್ರಾಮದಲ್ಲಿನ ಸಮಾಧಿಗಳ ಕುರಿತು ಹೆಚ್ಚುವರಿ ಮಾಹಿತಿಯನ್ನು ಎಸ್‌ಐಟಿ ಸಂಗ್ರಹಿಸಿದೆ. ಪ್ರಕರಣದಲ್ಲಿ ಸಂಭಾವ್ಯ ಮಾಟಮಂತ್ರ ನಡೆದಿರೋ ಬಗ್ಗೆಯೂ ತನಿಖಾಧಿಕಾರಿಗಳು ತನಿಖೆ ನಡೆಸ್ತಿದ್ದಾರೆ.
ಇನ್ನು ಈ ಎಲ್ಲ ಬೆಳವಣಿಗೆಗಳ ನಡುವೆ ಧರ್ಮಸ್ಥಳ ನಿವಾಸಿ ಕೆ.ಸಿ ಚಂದ್ರನ್ ಅವ್ರು ಎಸ್‌ಐಟಿ ಕಚೇರಿಗೆ ಆಗಮಿಸಿ ದೂರು ಸಲ್ಲಿಸಿದ್ದಾರೆ. ಸ್ಥಳಿಯ 25 ಜನರ ಸಹಿ ಪಡೆದು ದೂರು ನೀಡಿದ್ದಾರೆ. ಒಂದೇ ಸಮುದಾಯ ಮೂವರ ಮೇಲೆ ಪದೇ ಪದೇ ಸೌಜನ್ಯ ಕೇಸ್‌ನಲ್ಲಿ ಆರೋಪ ಮಾಡಲಾಗ್ತಿದೆ. ಮೂವರ ವಿರುದ್ಧ ಈಗಾಗ್ಲೇ ಕ್ಲೀನ್ ಚಿಟ್ ಸಿಕ್ಕಿದೆ. ಮಾನಸಿಕವಾಗಿ ಕುಗ್ಗಿಸೋ ಕೆಲಸ ಮಾಢ್ತಿದ್ದಾರೆ. ಸೌಜನ್ಯ ತಾಯಿ ತನ್ನ ಪತಿಯನ್ನು ಸ್ಲೋ ಪಾಯ್ಸನ್ ನೀಡಿ ಕೊಂದಿದ್ದಾರೆ ಎನ್ನುತ್ತಿದ್ದಾರೆ ಅದ್ರ ವಿರುದ್ಧವೂ ತನಿಖೆಯಾಗ್ಲಿ ಎಂದು ಆಗ್ರಹಿಸಿದ್ದಾರೆ.
ಧರ್ಮಸ್ಥಳ ಕೇಸ್ ಇದೇ ರೀತಿ ಆರೋಪ ಪ್ರತ್ಯಾರೋಪಗಳ ನಡುವೆ ಯಾವ ಹಂತಕ್ಕೆ ಹೋಗಿ ನಿಲ್ಲುತ್ತೋ ಕಾದು ನೋಡಬೇಕಾಗಿದೆ.