Dharamsthala case: ಎಸ್.ಐ.ಟಿ ಉಡುಗೊರೆ ಸಂಸ್ಥೆನಾ..!? ಸುಜಾತಾ ಭಟ್‌ಗೆ ಹೊಸ ಮೊಬೈಲ್, ವಾಚ್..!
ಧರ್ಮಸ್ಥಳ ಸಾಮೂಹಿಕವಾಗಿ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಒಂದು ಇಂಟ್ರೆಸ್ಟಿಂಗ್ ವಿಷ್ಯವನ್ನು ಹೇಳ ಬೇಕು. ಇಲ್ಲಿವರೆಗೂ ಧರ್ಮಸ್ಥಳ ಕೇಸ್‌ಗೆ ಸಂಬಂಧಪಟ್ಟ ಹಾಗೆ ಎಸ್‌ಐಟಿ ವಿಚಾರಣೆ ಪಾರದರ್ಶಕವಾಗಿ ನಡೀತಾ ಇದೆ. ಯಾವುದೇ ಅನುಮಾನವಿಲ್ಲ. ಅವ್ರ ಕೆಲಸವನ್ನು ಅವ್ರು ಮಾಡ್ತಿದ್ದಾರೆ. ಎಲ್ಲಾ ನಿಟ್ಟಿನಲ್ಲೂ ಪಾರದರ್ಶಕವಾಗಿಯೇ ತನಿಖೆ ನಡೀತಿದೆ ಎಲ್ಲಾ ರೀತಿಯ ವಿಷ್ಯಗಳನ್ನು ಇಂಚು ಇಂಚಾಗಿ ಕಲೆ ಹಾಕ್ತಿದ್ದಾರೆ ಎಂದೇ ವಿಮರ್ಶಿಸಲಾಗ್ತಿದೆ. ಆದ್ರೆ, ಇದೀಗ ಜನಸಾಮಾನ್ಯರ ಬಾಯಲ್ಲಿ ಮ್ಯಾಜಿಕ್ ಅಜ್ಜಿ ಎಂದೇ ಹೆಸರುವಾಸಿಯಾಗಿರೋ ಸುಜಾತಾ ಭಟ್ ಎಸ್‌ಐಟಿ ಅಧಿಕಾರಿಗಳನ್ನೇ ಸಿಕ್ಕಿಹಾಕಿಸೋ ಕೆಲಸ ಮಾಡಿದ್ದಾರೆ.
ಸುಜಾತಾ ಭಟ್ ಮಾತಲ್ಲಿ ಯಾವುದೇ ಹುರುಳಿಲ್ಲ, ಆಕೆಯ ಮಗಳು ಅನನ್ಯಾ ಭಟ್ ಕೂಡ ಅಲ್ಲ, ಅವಳ ಪರ ವಕಾಲತ್ತು ವಹಿಸಿದ್ದ ವಕೀಲರಾದ ಮಂಜುನಾಥ್ ಕೂಡ ಹಿಂದೆ ಸರಿದ್ರು. ಸುಜಾತಾ ಭಟ್ ಗಂಟೆಗೊಂದು ಮಾತನಾಡ್ತಿದ್ದರೆ, ಎಸ್‌ಐಟಿ ಆದಿಯಾಗಿ ಈ ಕೇಸ್‌ನಾ ಸೂಕ್ಷ್ಮವಾಗಿ ಗಮನಿಸ್ತಿದ್ದ ಎಲ್ಲರಿಗೂ ತಲೆಕೆಟ್ಟಂತಾದ ಅನುಭವ ಕೊಟ್ಟವ್ರು ಸುಜಾತಾ ಭಟ್ ಅಜ್ಜಿ. ಇನ್ನು ಕೆಲವ್ರೊಬ್ಬರು ಇದನ್ನೇ ಸದವಕಾಶ ಎನ್ನುವಂತೆ, ನಿಮಿಷಕ್ಕೊಂದು ಸ್ಟೇಟ್‌ಮೆಂಟ್ ಕೊಡೋ ಅಜ್ಜಿಯಿಂದ ಉದ್ದೇಶಪೂರ್ವಕವಾಗಿ ಬುರುಡೆ ಗ್ಯಾಂಗ್ ಷಡ್ಯಂತ್ರ ಇಂತವ್ರೇ ನನ್ನ ಕರೆದುತಂದ್ರು, ಇವ್ರೇ ನನ್ನ ಮೇಲೆ ಒತ್ತಡ ಹಾಕಿದ್ರೆ ಅಂತೆಲ್ಲಾ ಹೇಳಿಸುವ ಸಣ್ಣ ಬುದ್ಧಿಯನ್ನು ಮಾಡಿದ್ದನ್ನು ಮಾಧ್ಯಮಗಳಲ್ಲಿ ಕಂಡಿದ್ದೇವೆ.
ಅಷ್ಟೂ ಕೂಡ ಅರಿಯದಷ್ಟು ನಮ್ಮ ಜನ ದಡ್ಡರಿಲ್ಲ ಬಿಡಿ. ಅದೇನೆ ಇರಲಿ, ಇದೀಗ ಎಸ್‌ಐಟಿ ಅಧಿಕಾರಿಗಳಾದ ಮಂಜುನಾಥ್ ಗೌಡ, ಗುಣಪಾಲ್ ಗೌಡ ಸುಜಾತಾ ಭಟ್ ಅವ್ರಿಗೆ ಖುದ್ದಾಗಿ ಮೊಬೈಲ್ ಹಾಗೂ ವಾಚ್ ಕೊಡಿಸಿ ಎಸ್‌ಐಟಿ ತನಿಖೆಯ ಬಗ್ಗೆಯೇ ಅನುಮಾನ ಮೂಡುವಂತೆ ಮಾಡಿದ್ದಾರೆ. ಹೌದು ಸುಜಾತಾ ಭಟ್ ಮಾತನಾಡುವ ಭರದಲ್ಲಿ ಯ್ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡುವಾಗ ಮಂಜುನಾಥ್ ಗೌಡ, ಗುಣಪಾಲ್ ಗೌಡ ಅನ್ನೋ ಅಧಿಕಾರಿಗಳು ಎಷ್ಟು ಒಳ್ಳೆಯವ್ರು. ಅವ್ರ ವಿರುದ್ಧ ವಿನಾಕಾರಣ ಆರೋಪ ಮಾಡ್ತಾರೆ. ಭಟ್ ಅವರು ವಿಚಾರಣೆಯ ಸಮಯದಲ್ಲಿ ಎಸ್‌ಐಟಿ ಅಧಿಕಾರಿಗಳು ತನಗೆ ಉತ್ತಮ ಆತಿಥ್ಯವನ್ನು ನೀಡಿದರು, ಉತ್ತಮ ಆಹಾರ ಮತ್ತು ಚಾಕೊಲೇಟ್‌ಗಳನ್ನು ಒದಗಿಸಿದರು ಎಂದು ಹೇಳಿದರು. “ಅವರು ನನಗೆ ಆತಿಥ್ಯವನ್ನು ನೀಡಿದರು. ಅವರು ಸಮಯಕ್ಕೆ ಸರಿಯಾಗಿ ಆಹಾರವನ್ನು ಒದಗಿಸಿದರು ಮತ್ತು ನಾನು ಹೊರಡುವಾಗ ನನಗೆ ಮೊಬೈಲ್ ಫೋನ್ ಅನ್ನು ಸಹ ನೀಡಿದರು” ಎಂದು ಅವರು ಹೇಳಿದ್ದಾರೆ. ಇದೇ ಮಾತುಗಳು ಇದೀಗ ಧರ್ಮಸ್ಥಳ ಕೇಸ್‌ನಲ್ಲಿ ತನಿಖೆ ಯಾವ ದಿಕ್ಕಿನಲ್ಲಿ ಸಾಗ್ತಾ ಇದೆ ಅನ್ನೋ ವಿಷಯವಾಗಿ ಅನುಮಾನಗಳನ್ನು ಸೃಷ್ಟಿಸಿದೆ.
ಅವರ ಹೇಳಿಕೆಗಳು ನಿಜವಾಗಿದ್ದರೆ, ಅಂತಹ ಉಡುಗೊರೆಗಳನ್ನು ನೀಡಲು ಎಸ್‌ಐಟಿಗೆ ಯಾವುದೇ ಅಧಿಕಾರವಿಲ್ಲ. ಅವ್ರ ಹೇಳಿಕೆಗಳು ನಿಜವಾಗಿದ್ರೆ ದುಬಾರಿ ಮೊಬೈಲ್ ಹಾಗೂ ವಾಚ್ ಕೊಡಿಸುವಂತ ಕಾಳಜಿ ಎಸ್‌ಐಟಿ ಅಧಿಕಾರಿಗಳಿಗೆ ಯಾಕೆ. ಇದು ಜನರಿಗೆ ಗೊಂದಲ ಸೃಷ್ಟಿ ಮಾಡುತ್ತದೆ. ಈಗಾಗ್ಲೇ, ಮಂಜುನಾಥ್ ಗೌಡ ಎಸ್‌ಐಟಿ ಟೀಮ್‌ನಿಂದ ಹೊರಗಿಡಬೇಕು ಎಂದು ಅನೇಕ ವಿರೋಧಗಳು ಕೇಳಿಬಂದಿದ್ವು. ಈ ರೀತಿ ಮೊಬೈಲ್ ವಾಚ್, ಚಾಕೋಲೇಟ್ ಕೊಟ್ಟು ಹೊಸ ಬದುಕು ಕಟ್ಕೊಳ್ಳಿ ಎಂದು ಹೇಳುವ ವೈಯಕ್ತಿಕ ಆಸಕ್ತಿ ಯಾಕೆ..? ಇದನ್ನು ಬೇರೆ ಯಾರಾದ್ರೂ ಕೊಡುವಂತೆ ಹಣ ನೀಡಿದ್ದಾರಾ..? ಅದು ಆ ಅಧಿಕಾರಿಗಳ ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಅನುಮಾನಗಳನ್ನು ಹುಟ್ಟುಹಾಕುತ್ತದೆ. ಎಸ್‌ಐಟಿ ತನಿಖಾ ಸಂಸ್ಥೆಯಾಗಿದೆ, ಉಡುಗೊರೆ ನೀಡುವ ಸಂಸ್ಥೆಯಲ್ಲ. ದಯವಿಟ್ಟು ಆ ರೀತಿ ಕೊಟ್ಟಿದ್ದರೆ ಮತ್ತೊಮ್ಮೆ ಕರೆದು ವಿಚಾರಿಸಲಿ, ಉಡುಗೊರೆ ವಾಪಾಸ್ ನೀಡಲಿ ಎಂದು ಅನೇಕರು ಅಭಿಪ್ರಾಯ ಪಡ್ತಿದ್ದಾರೆ.
ಧರ್ಮಸ್ಥಳ ಕೇಸ್‌ನಲ್ಲಿ ಎಸ್‌ಐಟಿ ಇನ್ವಿಸ್ಟಿಗೇಷನ್ ಪ್ರೊಸೀಜರ್ಸ್ ನೋಡಿದಾಗ ಒಂದಿಷ್ಟು ವಿಶ್ವಾಸ ಮೂಡುತ್ತೆ. ಆರಂಭದಲ್ಲಿ ನೋಟೀಸ್ ಕೊಟ್ಟು ನೀವೆಲ್ಲಿ ಹೇಳ್ತಿರೋ ಅಲ್ಲೇ ಬಂದು ನಾವು ವಿಚಾರಣೆ ಮಾಡ್ತೀವಿ ಅಂತಾನೂ ಅವ್ರಿಗೆ ವಿಶ್ವಾಸ ಮೂಡಿಸಿ ಕೊನೆಗೆ ಸುತ್ತಾ ನಾಲ್ಕು ಕ್ಯಾಮೆರಾಗಳು, ರೆಡಿ ಪ್ರಶ್ನೆಗಳು, ಟೈಪಿಂಗ್ ಆಫಿಸರ್‌ಗಳು, ಎಸ್‌ಐಟಿ ಅಧಿಕಾರಿಗಳು, ಮಹಿಳೇಯರನ್ನು ತನಿಖೆ ಮಾಡ್ತಿದ್ದರೆ ಪಕ್ಕದಲ್ಲಿ ಮಹಿಳಾ ಪೊಲೀಸ್ ಆಫೀಸರ್‌ನಾ ಕೂರಿಸಿ ಪ್ರಶ್ನೆಗಳನ್ನು ನಿರಂತರವಾಗಿ ಕೇಳಲಾಗುತ್ತೆ. ಹಾಗೂ ರಾಂಡಮ್ ಆಗಿ ಪ್ರಶ್ನೆಗಳನ್ನು ಕೇಳಲಾಗುತ್ತೆ. ಎಲ್ಲೂ ಕೂಡ ಯಾಮಾರಿಸೋಕೆ ಬರದಷ್ಟು ಎಲ್ಲಾ ದಾಖಲೆಗಳು ಮೊದಲೇ ಅವ್ರ ಬಳಿ ಇರೋದ್ರಿಂದ ಲೊಕೇಷನ್ ವೈಸ್, ಅಮೌಂಟ್ ಟ್ರಾನ್ಸಕ್ಷಾನ್ ವೈಸ್ ಎಲ್ಲವೂ ಕಟ್ ಅಂಡ್ ಕ್ಲಿಯರ್ ಆಗಿಬೇಕು. ಇಲ್ಲದೇ ಇದ್ದರೆ ಎಸ್‌ಐಟಿ ಕ್ರಾಸ್ ವೇರಿಫೈ ಮಾಡಿದಾಗ ಸಿಕ್ಕಿಬಿದ್ದರೆ, ಕಟ್ಟುನಿಟ್ಟಿನ ಕ್ರಮ ಕಟ್ಟಿಟ್ಟ ಬುತ್ತಿ.
ಇನ್ನು ಇಂಟ್ರೆಸ್ಟಿಂಗ್ ವಿಷ್ಯ ಅಂದ್ರೆ, ಚಿನ್ನಯ್ಯ ಎಸ್‌ಐಟಿ ವಿಚಾರಣೆ ವೇಳೆ ಬಾಯಿಗೆ ಬಂದಂತೆ ಹೇಳಿಕೆಗಳನ್ನು ನೀಡಿದ್ದಾನೆ ಎಂದು ಮೂಲಗಳು ತಿಳಿಸ್ತಿವೆ. ಮ್ಯಾಜಿಸ್ಟ್ರೆಟ್ ವಿರುದ್ಧವೂ ಆರೋಪಗಳನ್ನು ಮಾಡಿದ್ನಂತೆ. ಕೆಲವ್ರನ್ನು ಬೈದರೆ, ವಿನಾಕಾರಣ ಕೆಲವ್ರನ್ನು ಹೊಗಳಿದ್ದಾನಂತೆ. ಇನ್ನು, ಎಸ್‌ಐಟಿ ಅಧಿಕಾರಿಗಳ ವಿರುದ್ಧವೆ ಮ್ಯಾಜಿಸ್ಟ್ರೇಟ್ ಮುಂದೆ ಆರೋಪಗಳನ್ನು ಮಾಡಿದ್ದಾನಂತೆ. ಈಗೆ ಫ್ರಸ್ಟ್ರೇಟ್ ಆಗಿರೋ ಚಿನ್ನಯ್ಯ, ನನ್ನ ಮೇಲೆ ಕವಿತೆ ಬರೀರಿ, ಕಾವ್ಯ ಬರೀರಿ ಎಲ್ಲಾ ಕಡೆ ಫೇಮಸ್ ಆಗ್ತಿದ್ದೀನಿ. ಪ್ರತಿ ನಿತ್ಯ ನನ್ನ ಬಗ್ಗೆಯೇ ಭೀಮ ಅಂತೆಲ್ಲಾ ತೋರಿಸ್ತಿದ್ದಾರೆ ಅಂತೆಲ್ಲಾ ಹುಂಬತನದ ಮಾತುಗಳನ್ನಾಡಿದ್ದನಂತೆ. ಇನ್ನು ಇಂಟ್ರೆಸ್ಟಿಂಗ್ ಅಂದ್ರೆ ಕೋರ್ಟ್‌ನಿಂದ ಜೈಲಿಗೆ ಇತ್ತೀಚೆಗೆ ವಾಪಾಸ್ ಆಗುವ ವೇಳೆ ಕಣ್ಣಿರಿಟ್ಟಿದ್ದಾನೆ.
ಚಿನ್ನಯ್ಯ ನಾನು ಹರಕೆ ಹೊತ್ತಿದ್ದೀನಿ, ಧರ್ಮಸ್ಥಳದ ಅಕ್ರಮಗಳನ್ನೆಲ್ಲಾ ಬಯಲಿಗೆ ಎಳೆದ ಮೇಲೆಯೇ ಗಡ್ಡ ತೆಗೆಸ್ತೀನಿ ಅಂತೆಲ್ಲಾ ಹರಕೆ ಹೊತ್ತಿದ್ದನಂತೆ ಆದ್ರೆ, ಈಗ ಹೆದರಿಕೊಂಡು ಆತ ದಿಕ್ಕು ತಪ್ಪಿಸಿದ್ನಾ ಅನ್ನೋದೆ ಡೌಟಾಗಿ ಉಳಿದಿದೆ. ಇನ್ನು ಗಿರೀಶ್ ಮಟ್ಟಣ್ಣವರ್ ಅಪರಿಚಿತ ಶವಗಳ ಮರಣೋತ್ತರ ಪರೀಕ್ಷೆ ಕೆಎಸ್ ಹೆಗಡೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಕ್ಕೆ ವಿರೋಧ ಹಾಗೂ ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲೇ ಯಾಕೆ ನಾಲ್ಕು ಕಿಮೀ ಹತ್ತಿರ ವಿರೋ ವೆನ್‌ಲಾಕ್ ಆಸ್ಪತ್ರೆ ಸರ್ಕಾರಿ ಆಸ್ಪತ್ರೆಯಾದ್ರೂ ಖಾಸಗಿ ಆಸ್ಪತ್ರೆಯಲ್ಲಿ ಮೂರುನ ನಾಲ್ಕು ದಿನಗಟ್ಟಲೆ ಫ್ರೀಜರ್‌ನಲಿಡೋದಕ್ಕೆ ಹಣ ಕೊಟ್ಟವರಾರು..!?