D.K Shivakumar: ಡಿಕೆ ಶಿವಕುಮಾರ ಲಾಲ್​ಬಾಗ್ ನಡಿಗೆ: ಜನರ ಸಮಸ್ಯೆ ಆಲಿಸಿದ ಡಿಸಿಎಂ

ಇಂದಿನಿಂದ ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರು ನಡಿಗೆ ಆರಂಭಿಸಿದ್ದಾರೆ. ಮುಂದಿ ನ 6 ದಿನಗಳವರೆಗೆ 6 ಪಾರ್ಕ್​ಗಳಲ್ಲಿ ನಡಿಗೆ ಮುಂದುವರಿಸಿ ಜನಾಭಿಪ್ರಾಯವನ್ನು ಆಲಿಸಲಿದ್ದಾರೆ. ಡಿಸಿಎಂ ಅವರು ಲಾಲ್​ ಬಾಗ್​​ನಲ್ಲಿ ಒಂದೂವರೆ ಗಂಟೆಗಳ ಕಾಲ ವಾಕಿಂಗ್ ಮಾಡಿದರು. ಬಳಿಕ ಲಾಲ್ ಬಾಗ್ ಸಾರ್ವಜನಿಕರ ಜೊತೆ ಡಿಸಿಎಂ ಡಿಕೆ ಶಿವಕುಮಾರ್ ಸಂವಾದ ನಡೆಸಿ ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ.

ಈ ವೇಳೆ ಸಾರ್ವಜನಿಕರು ಬೆಂಗಳೂರಿನಲ್ಲಿ ರಸ್ತೆಗಳು ಹಾಳಾಗಿದೆ, ಓಡಾಡೋದು ಕಷ್ಟ ಆಗುತ್ತಿದೆ, ಅದನ್ನು ಸರಿಪಡಿಸಿ. ಅಲ್ಲದೇ ಲಾಲ್ ಬಾಗ್ ಒಳಗೆ ಬೀದಿ ದೀಪಗಳು ಸಂಪೂರ್ಣ ಹಾಳಾಗಿದೆ. ಸ್ವಚ್ಛತೆ ಹಾಗೂ ಕಸದ ಅವ್ಯವಸ್ಥೆ, ಎಲ್ಲೆಂದರಲ್ಲಿ ಕಸ ಕಾಕುವವರಿಗೆ ದಂಡ ಹಾಕಿ ಎಂದು ಜನರು ಮನವಿ ಮಾಡಿದ್ದಾರೆ. ಅಲ್ಲದೇ ಆ್ಯಂಬುಲೆನ್ಸ್, ಟನಲ್ ವ್ಯವಸ್ಥೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ.

ಇದೇ ವೇಳೆ ಮಾತಾಡಿದ ಡಿಕೆ ಶಿವಕುಮಾರ್, ಟನಲ್ ರಸ್ತೆ ಬೇಕೇ ಬೇಕಿದೆ. ಲಾಲ್ ಬಾಗ್ ಅಲ್ಲಿ ಒಂದು ರಸ್ತೆ ಓಪನಿಂಗ್ ಕೊಡಬೇಕಿದೆ. ಲಾಲ್​ಬಾಗ್​ನಲ್ಲಿ ಹೆಣ್ಣು ಮಕ್ಕಳು ಓಡಾಡುತ್ತಾರೆ . ಹೀಗಾಗಿ ಇಲ್ಲಿ ಸಿಸಿ ಕ್ಯಾಮೆರಾ ಅವಶ್ಯಕತೆಯಿರುವುದರಿಂದ 10 ಕೋಟಿ ರೂ.ಗಳನ್ನು ನಾನು ಲಾಲ್ಬಾಗ್ ಅಭಿವೃದ್ಧಿಗೆ ನೀಡುತ್ತೇನೆ. ನಾನು ಈಗ ಪರಿಶೀಲನೆ‌ ಮಾಡ್ತೀನಿ. ಬೆಂಗಳೂರು ನಗರದಲ್ಲಿ ಹೊಸದಾಗಿ ಇನ್ಮುಂದೆ ಡಬ್ಬಲ್ ಡೆಕ್ಕರ್ ರಸ್ತೆ ನಿರ್ಮಾಣ ಮಾಡುತ್ತೇವೆ. ಡ್ರೈನೇಕ್ ಪಕ್ಕ 50 ಮೀಟರ್ ರಸ್ತೆ ಬಳಕೆಗೆ ನಿರ್ಧಾರ ಮಾಡಿದ್ದೇವೆ ಎಂದು ಡಿಸಿಎಂ ಹೇಳಿದ್ದಾರೆ.

Rakesh arundi

Leave a Reply

Your email address will not be published. Required fields are marked *