ಖತರ್ನಾಕ್ ಮಲತಾಯಿ.! ಮುಗ್ಧ ಮಗು ಜೀವ ಬಲಿ ತೆಗೆದ ಪರಮಪಾಪಿ
ಪತಿ ಕೊಂದ ಪತ್ನಿ, ಪತ್ನಿ ಕೊಂದ ಪತಿ ಎಂಬ ಸುದ್ದಿಗಳ ನಡುವೆ ತಾಯೊಬ್ಬಳು ಮಗುವನ್ನು ಕೊಂದ ಹೃದಯವಿಧ್ರಾವಕ ಘಟನೆ ಬೀದರನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಮಲತಾಯಿಯೇ ೭ ವರ್ಷದ ಕಂದಮ್ಮನನ್ನ ಮೂರನೇ ಮಹಡಿ ಮೇಲಿಂದ ತಳ್ಳಿ ಕೊಲೆ ಮಾಡಿದ ಅಮಾನವೀಯ ಕೃತ್ಯ ಬೀದರ್ನಲ್ಲಿ ನಡೆದಿದೆ. ನಗರದ ಆದರ್ಶ ಕಾಲೋನಿಯಲ್ಲಿ ಆಗಷ್ಟ್ ೨೭ ರಂದು ನಡೆದಿದ್ದು ಈ ಘಟನೆಯ ಸತ್ಯ ತಡವಾಗಿ ಬೆಳಕಿಗೆ ಬಂದಿದೆ.
ಮಗು ಆಟವಾಡುವ ವೇಳೆ ಆಯ ತಪ್ಪಿ ಮಹಡಿಯಿಂದ ಬಿದ್ದಿದೆ ಎಂದು ಕುಟುಂಬಸ್ಥರು ಅಂದುಕೊAಡಿದ್ದರು. ಆದರೆ ಮಲತಾಯಿಯ ಮಾಸ್ಟರ್ ಪ್ಲಾನ್ ಬೇರೆನೇ ಇತ್ತು. ಈ ಕಥೆ ತಿರುವು ಪಡೆದಿದ್ದು ಪಕ್ಕದ ಮನೆಯವರು ಸಿಸಿ ಕ್ಯಾಮೆರಾ ದೃಶ್ಯಾವಳಿಯೇ ಬೇರೆ ಇತ್ತು.
ಮಗುವಿನ ಸಾವಿನ ನಿಗೂಢ ಸತ್ಯವನ್ನ ಸಿಸಿ ಕ್ಯಾಮರದಲ್ಲಿ ನೋಡಿದ ಪಕ್ಕದ ಮನೆಯವರು ಅದನ್ನು ಮಗುವಿನ ಕುಟುಂಬಸ್ಥರಿಗೆ ಕಳುಹಿಸಿದ ನಂತರ ಮಲತಾಯಿ ಮಾಡಿದ ಕೃತ್ಯ ಬೆಳಕಿಗೆ ಬಂದಿದೆ.
ಮಲತಾಯಿಯ ಪಾಶಕ್ಕೆ ಬಲಿಯಾಗಿದ್ದು ಏಳು ವರ್ಷದ ಮಗು ಶಾನವಿ. ಆಗಸ್ಟ್ ೨೭ರಂದು ಶಾನವಿ ಮೃತಪಟ್ಟಾಗ ಮಹಡಿಯಿಂದ ಆಯತಪ್ಪಿ ಬಿದ್ದು ಮಗಳು ಜೀವ ಬಿಟ್ಟಿದ್ದಾಳೆ ಎಂಬ ಕಟ್ಟು ಕಥೆ ಕಳಚಿದ್ದು ಸಿಸಿಟಿವಿ ದೃಶ್ಯದಿಂದ. ಇದರಿಂದ ತಿಳಿದ ಸತ್ಯವೇ ಮಲತಾಯಿಯೇ ಮಗುವನ್ನು ಕೊಂದಿದ್ದಾಳೆ ಎಂದು ನಂತರ ಕುಟುಂಬಸ್ಥರು ಪೋಲಿಸರಿಗೆ ತಿಳಿಸಿದ್ದು ಮಲತಾಯಿ ರಾಧಾಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಸಿಟಿಟಿವಿ ದೃಶ್ಯವನ್ನ ಸೆಪ್ಟೆಂಬರ್ ೧೨ರಂದು ಬಾಲಕಿ ತಂದೆ ಸಿದ್ಧಾಂತ ವಾಟ್ಸಾಪ್ಗೆ ಪಕ್ಕದ ಮನೆಯವರು ಕಳುಹಿಸಿದ್ದಾರೆ. ಮೇಲ್ಮಹಡಿಯಲ್ಲಿ ಖುರ್ಚಿ ಇಟ್ಟು ಅದರ ಮೇಲೆ ಬುಟ್ಟಿ ಉಲ್ಟಾ ಇಟ್ಟು ಶಾನವಿಯನ್ನ ಕೂರಿಸಿರೊದು ಪತ್ತೆಯಾಗಿದೆ. ಸಿಸಿಟಿವಿ ದೃಶ್ಯ ಆಧರಿಸಿ ಮೃತ ಬಾಲಕಿ ಅಜ್ಜಿ, ರಾಧಾ ವಿರುದ್ಧ ದೂರು ನೀಡಿದ್ದು, ಪೊಲೀಸರು ಆರೋಪಿ ರಾಧಾಳನ್ನು ಬಂಧಿಸಿದ್ದಾರೆ.
ಮೃತ ಶಾನವಿ ತಾಯಿ ಖಾಯಿಲೆಗೆ ತುತ್ತಾಗಿ ಕಳೆದ ೬ ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದಳು. ಇದಾದ ಬಳಿಕ ಮೃತ ಶಾನವಿ ತಂದೆ ಸಿದ್ಧಾಂತ, ೨೦೨೩ರಲ್ಲಿ ರಾಧಾ ಜೊತೆ ೨ನೇ ವಿವಾಹವಾಗಿದ್ದರು.
ಸಿದ್ಧಾಂತ ಹಾಗೂ ರಾಧಾಗೆ ಎರಡು ಅವಳಿ ಮಕ್ಕಳಿದ್ದಾರೆ. ಸಿದ್ಧಾಂತರ ಮೊದಲನೇ ಮಗಳ ತಮಗೆ ಹೊರೆಯಾಗ್ತಾಳೆಂದು ೨ನೇ ಪತ್ನಿ ಜೀವ ತೆಗೆದಿರುವುದಾಗಿ ವಿಚಾರಣೆವೇಳೆ ತಿಳಿದು ಬಂದಿದೆ.