Hubballi: ಹುಬ್ಬಳ್ಳಿಯಲ್ಲಿ ಗುತ್ತಿಗೆದಾರನ ಅಪಹರಣ : ಸಿಸಿಟಿವಿಯಲ್ಲಿ ಸೆರೆಯಾದ ಘಟನೆ
ಹಾಡಹಗಲೇ ಜನರ ಎದುರೆ ನೋಡ ನೋಡುತ್ತಿದ್ದಂತೆ ಗುತ್ತಿಗೆದಾರ ಮೋಹನ್ ಚೌಹಾಣ್ ನನ್ನುಅಪಹರಣ ಮಾಡಿರುವ ಘಟನೆ ನೆನ್ನೆ ಮಧ್ಯಾನ 12:30 ರ ವೇಳೆ ಹುಬ್ಬಳ್ಳಿಯಲ್ಲಿ ನಡೆದಿದೆ. ಈ ಘಟನೆ ಸಿಸಿ ಕ್ಯಾಮರಾದಲ್ಲಿ ಸೇರೆಯಾಗಿದೆ.
ಮೋಹನ್ ಚೌಹಾಣ್ ಹಾಗೂ ಬಸಪ್ಪ ದಳವಾಯಿ ನಡುವೆ ಗುತ್ತಿಗೆ ವಿಚಾರವಾಗಿ ನಡೆದ ಗಲಾಟೆಯೇ ಅಪಹರಣ ಮಾಡಲು ಕಾರಣ ಎಂದು ತಿಳಿದು ಬಂದಿದೆ. ಸಿನಿಮಾ ರೀತಿಯಲ್ಲಿ ನಡೆದಿದ್ದ ಕಿಡ್ನ್ಯಾಪ್ನ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೇರೆಯಾಗುದ್ದು, ವಿಡಿಯೋ ವೈರಲ್ ಆಗಿವೆ.
ಸದ್ಯ ಪ್ರಕರಣ ಗೋಕಲ ರೋಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.