Chinnayya video: ಚಿನ್ನಯ್ಯನ ಇನ್ನೊಂದು 2 ನಿಮಿಷದ ವಿಡಿಯೋ ವೈರಲ್, ಏನಿದೆ ವಿಡಿಯೋದಲ್ಲಿ?

ಧರ್ಮಸ್ಥಳದಲ್ಲಿ ಅಕ್ರಮವಗಿ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ತನಿಖೆ ತೀವ್ರಗತಿಯಲ್ಲಿ ನಡೆಯುತ್ತಿದೆ. ಈ ಪ್ರಕರಣದ ದೂರುದಾರ ಚಿನ್ನಯ್ಯ ಇದೀಗ ಶಿವಮೊಗ್ಗ ಜೈಲಿನಲ್ಲಿದ್ದಾನೆ. ಚಿನ್ನಯ್ಯ ದೂರು ದಾಖಲಿಸುವ ಮುನ್ನ ಮಾಡಿದ ಕೆಲ ವಿಡಿಯೋಗಳು ಈಗ ಸದ್ದು ಮಾಡ್ತಿದೆ. ಇದೀಗ ಚಿನ್ನಯ್ಯನ ಇನ್ನೊಂದು ವಿಡಿಯೋ ವೈರಲ್ ಆಗಿದೆ.


ತಿಮರೋಡಿ ಮನೆಯಲ್ಲಿ ಮಾಡಲಾಗಿದೆ ಎನ್ನಲಾದ ಚಿನ್ನಯ್ಯನ ಇನ್ನೊಂದು 2 ನಿಮಿಷದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ದೂರುದಾರ ಚಿನ್ನಯ್ಯ, ಸೌಜನ್ಯನ ಹೋರಾಟಗಾರರನ್ನು ಭೇಟಿ ಮಾಡಿದ ವೇಳೆ ಮಾತಾಡಿದ ವಿಡಿಯೋ ಇದಾಗಿದೆ.

ತಿಮರೋಡಿ ಮನೆಯ ಮಾಡಲಾದ 2 ನಿಮಿಷದ 58 ಸೆಕೆಂಡ್​​ಗಳ ಈ ವಿಡಿಯೋದಲ್ಲಿ ಏನಿದೆ?

ತಿಮರೋಡಿ ಮನೆಯಲ್ಲೇ ಮಾಡಲಾಗಿದೆ ಎನ್ನಲಾಗ್ತಿರೋ ಈ 2 ನಿಮಿಷ 58 ಸೆಕೆಂಡ್​​ಗಳ ಈ ವಿಡಿಯೋದಲ್ಲಿ ದೂರುದಾರ ಚಿನ್ನಯ್ಯ, ಧರ್ಮಸ್ಥಳದಲ್ಲಿ ತಾನೇ 70ಕ್ಕೂ ಹೆಚ್ಚು ಶವಗಳನ್ನ ಹೂತಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಅಲ್ಲದೆ ಅವು ಸಹಜ ಸಾವಲ್ಲ ಅದು ಕೊಲೆಯಾಗಿರುವುದಾಗಿ ಅನುಮಾನವನ್ನ ವ್ಯಕ್ತಪಡಿಸಿದ್ದಾನೆ.

ಸ್ಪಾಟ್ ನಂಬರ್ 17ರ ಬಗ್ಗೆಯೂ ಚಿನ್ನಯ್ಯ ಮಾತಾಡಿದ್ದಾನೆ. ಗೋಮಟ್ಟ ಬೆಟ್ಟದಿಂದ ಬರುವ ಫಸ್ಟ್ ಟರ್ನ್ ನಲ್ಲಿ ಏನಿಲ್ಲ ಅಂದ್ರೂ 70ಕ್ಕೂ ಹೆಚ್ಚು ಹೆಣ ಹೂತು ಹಾಕಿದ್ದೇನೆ. ಆ ಟರ್ನ್ ನಲ್ಲಿ ಬಿಳಿ ಸೀರೆಯ ಕೇರಳ ಮೂಲದ ಹೆಂಗಸಿನ ಹೆಣ ಹೂತು ಹಾಕಿದ್ದೇನೆ. ಅದು ಸ್ಮಶಾನ ಅಲ್ಲ, ತರಕಾರಿ ತೆಗೆದುಕೊಂಡು ಹೋಗುವ ಗಾಡಿಯಲ್ಲಿ ಹೆಣ ತಂದು ಹೂತು ಹಾಕಿದ್ದೇನೆ. ನೇತ್ರಾವತಿ ತೀರದಲ್ಲಿ ಹೆಣ ಹೂತುಹಾಕಿದ್ದಕ್ಕೆ ಲೆಕ್ಕವೇ ಇಲ್ಲ ಎಂದು ಚಿನ್ನಯ್ಯ ಹೇಳಿದ್ದಾನೆ.

ಪ್ರಾಥಮಿಕ ಶಾಲೆಯ ಹಿಂಭಾಗದ ಭಟ್ರ ಮನೆಯ ಬಾವಿಯಲ್ಲಿ ಒಂದು ಹೆಣ ಸಿಕ್ಕಿತ್ತು. ಅಲ್ಲಿ ಕೇಳಿದ್ರೆ ಹುಡುಗಿ ಫೇಲ್ ಆಗಿದ್ದಕ್ಕೆ ಬಾವಿಗೆ ಹಾರಿದ್ದಾಳೆ ಅಂತ ಹೇಳಿದ್ರು. ಆದ್ರೆ ಮನೆಯವರು ಅಳುತ್ತಿರಲಿಲ್ಲ. ಬಳಿಕ ನಾನು ಹೆಣವನ್ನ ಮೇಲೆ ಹಾಕಿ ವಾಪಸ್ ಬಂದಿದ್ದೆ ಎಂದು ಚಿನ್ನಯ್ಯ ವಿಡಿಯೋದಲ್ಲಿ ಹೇಳಿದ್ದಾನೆ.

Rakesh arundi

Leave a Reply

Your email address will not be published. Required fields are marked *