Chaithanyananda swamiji:ವಿದ್ಯಾರ್ಥಿನಿಯರಿಗೆ ಲೈಂಗಿಕ ಹಿಂಸೆ ಕೊಡೋಕೆ ಪ್ರತ್ಯೇಕ ರೂಮ್‌.! ಚೈತನ್ಯಾನಂದ ಸ್ವಾಮಿ ಕಳ್ಳಾಟ

ಬೆಳ್ಳಗಿರೋದೆಲ್ಲಾ ಹಾಲಲ್ಲ. ಕಾವಿ ತೊಟ್ಟೋರೆಲ್ಲಾ ಒಳ್ಳೇರಲ್ಲ ಅನ್ನೋ ಮಾತು ಅಕ್ಷರಶಃ ಸತ್ಯವಾಗ್ತಿವೆ. ಯಾಕೋ ಇತ್ತೀಚೆಗೆ ಕಾವಿ ತೊಟ್ಟ ಅನೇಕ ಕಳ್ಳ ಸ್ವಾಮೀಜಿಗಳ ರಾಸಲೀಲೆ ಬಯಲಾಗ್ತಿದ್ದು ಭಕ್ತರ ನಂಬಿಕೆಗಳಿಗೆ ಅನ್ಯಾಯವಾಗ್ತಿದೆ. ಇತ್ತೀಚೆಗೆ 17 ವಿಧ್ಯಾರ್ಥಿನಿಯರಿಂದ ಲೈಂಗಿಕ ಕಿರುಕುಳದ ಆರೋಪ ಎದುರಿಸ್ತಿರೋ ಚೈತನ್ಯಾನಂದ ಸರಸ್ವತಿಯನ್ನು ಅರೆಸ್ಟ್‌ ಮಾಡಲಾಗಿದ್ದು 5 ದಿನ ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿದೆ. ಅವ್ರನ್ನು ನೈರುತ್ಯ ದಿಲ್ಲಿಯಲ್ಲಿರೋ ಖಾಸಗಿ ಸಂಸ್ಥೆಗೆ ಕರೆದೊಯ್ಯಲಾಗಿದೆ. ಈಗಾಗ್ಲೇ ರಹಸ್ಯ ಸಿಸಿಟಿವಿ ಕ್ಯಾಮೆರಾಗಳನ್ನು ಪತ್ತೆ ಹಚ್ಚಲಾಗಿದೆ. ಜತೆಗೆ ಯುವತಿಯರಿಗೆ ಕಿರುಕುಳ ನೀಡೋ, ಹಿಂಸೆ ನೀಡಲಾಗ್ತಿದ್ದ ರೂಮ್‌ ಕೂಡ ಪತ್ತೆ ಹಚ್ಚಲಾಗಿದೆ.


ಇನ್ನು ಸ್ವಾಮೀಜಿ ಫೋನ್‌ ಎಫ್‌ಎಸ್‌ಎಲ್‌ಗೆ ಕಳಿಸಿಕೊಡಲಾಗಿದೆ. ಸ್ವಾಮೀಜಿಯ ಎಲ್ಲಾ ವಾಸಸ್ಥಳಗಳು, ಆಫೀಸ್‌, ಗೆಸ್ಟ್‌ ಹೌಸ್‌ಗಳು ಸೇರಿದಂತೆ ಚೈತನ್ಯಾನಂದ ಅವ್ರಿಗೆ ಸಂಬಂಧಪಟ್ಟ ಎಲ್ಲಾ ಜಾಗಗಳಿಗೆ ಕರೆದುಕೊಂಡು ಹೋಗಿ ಶೋಧಕಾರ್ಯ ನಡೆಸಲಾಗಿದೆ.ಫೋನ್‌ ಪಾಸ್‌ವರ್ಡ್‌ ಮರೆತು ಹೋಗಿದೆ ಗೊತ್ತಿಲ್ಲ ಎಂದು ವಿಚಾರಣೆ ವೇಳೆ ಸ್ವಾಮೀಜಿ ತಪ್ಪಿಸಿಕೊಳ್ಥಾ ಇದ್ದರು ಎಂದು ಗೊತ್ತಾಗಿದೆ. ಎರಡು ಪಾಸ್‌ಪೋರ್ಟ್‌ಗಳನ್ನು ನಕಲಿ ದಾಖಲೆ ಕೊಟ್ಟು ಪಡೆದಿರೋ ಮಾಹಿತಿ ಪತ್ತೆಯಾಗಿದೆ.


ಒಂದನೇ ಪಾಸ್ಪೋರ್ಟ್ನಲ್ಲಿ ಅವರ ತಂದೆಯ ಹೆಸರು ಸ್ವಾಮಿ ಘಾನಾನಂದ ಪುರಿ, ತಾಯಿ ಹೆಸರು ಶಾರದಾ ಅಂಬಾ ಎಂದಿದೆ. ಎರಡನೇ ಪಾಸ್ಪೋರ್ಟ್ನಲ್ಲಿ ಸ್ವಾಮಿ ದಯಾನಂದ ಸರಸ್ವತಿ, ತಾಯಿ ಶಾರದಾ ಅಂಬಾಲ್ ಎಂದು ಹೆಸರಿಸಲಾಗಿದೆ. ಚೈತನ್ಯಾನಂದ ಸರಸ್ವತಿ ಬಳಿ ಎರಡು ನಕಲಿ ವಿಸಿಟಿಂಗ್ ಕಾರ್ಡ್ಗಳು ಸಿಕ್ಕಿವೆ. ಒಂದರಲ್ಲಿ ಅವರು ತಮ್ಮನ್ನು ವಿಶ್ವಸಂಸ್ಥೆಯ ಖಾಯಂ ರಾಯಭಾರಿ ಎಂದು ಗುರುತಿಸಿಕೊಂಡಿದ್ದಾರೆ. ಮತ್ತೊಂದರಲ್ಲಿ ಬ್ರಿಕ್ಸ್ ರಾಷ್ಟ್ರಗಳ ಗುಂಪಿನಲ್ಲಿ ಭಾರತದ ವಿಶೇಷ ರಾಯಭಾರಿ ಎಂದು ಗುರುತಿಸಿಕೊಂಡಿದ್ದಾರೆ. ಈ ಎಲ್ಲಾ ದಾಖಲೆಗಳು ಪೊಲೀಸರನ್ನೇ ಬೆಚ್ಚಿ ಬೀಳಿಸಿವೆ.

Rakesh arundi

Leave a Reply

Your email address will not be published. Required fields are marked *