Hasan: ಕಾಂಗ್ರೆಸ್ ಅವಧಿ ಇದೇ ಕೊನೆ, ಆಮೇಲೆ ಜನ್ಮ ಜನ್ಮದಲ್ಲೂ ಅಧಿಕಾರಕ್ಕೆ ಬರಲ್ಲ: ಬ್ರಹ್ಮಾಂಡ ಗುರೂಜಿ ಸ್ಪೋಟಕ ಭವಿಷ್ಯ
ರಾಜ್ಯ ರಾಜಕಾರಣದ ಬಗ್ಗೆ ಬ್ರಹ್ಮಾಂಡ ಗುರೂಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಕಾಂಗ್ರೆಸ್ ಅವಧಿ ಇದೇ ಕೊನೆ, ಇದಾದ್ಮೇಲೆ ಜನ್ಮದಲ್ಲೂ ಅಧಿಕಾರಕ್ಕೆ ಬರಲ್ಲ ಅಂತ ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮ ಅವರು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಹಾಸನಾಂಬ ದೇವಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಆರೋಗ್ಯ ಕ್ಷೀಣಿಸುವ ಸಾಧ್ಯತೆ ಇದೆ. ಅವರ ಬಳಿಕ ಇಬ್ಬರಿಗೆ ಸಿಎಂ ಆಗುವ ಯೋಗ ಇದೆ. ಆದರೆ ಬಹಳ ಹಗ್ಗ ಜಗ್ಗಾಟ ನಡೆಯಲಿದ್ದು, ಈಗ ಮುಖ್ಯಮಂತ್ರಿ ಸ್ಥಾನ ಸಿಗದಿದ್ದರೆ ಮತ್ತೆ 10 ವರ್ಷಗಳ ಬಳಿಕ ಅವಕಾಶ ಸಿಗಲಿದೆ. ಇಲ್ಲವಾದರೆ ರಾಜ್ಯದಲ್ಲಿ ಕಾಂಗ್ರೆಸ್ಗೆ ಅಧಿಕಾರ ಇದೇ ಕೊನೆ, ಮುಂದೆ ಜನ್ಮ ಜನ್ಮದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರೋದಿಲ್ಲ ಎಂದಿದ್ದಾರೆ.
ಎಲ್ಲ ರಾಜಕೀಯ ಪಕ್ಷದವರು ಗೊಂದಲದಲ್ಲಿ ಸಿಲುಕಲಿದ್ದಾರೆ. ಕಚ್ಚಾಟ ಶುರುವಾಗುತ್ತೆ. ಕರ್ನಾಟಕವು ಕುರ್ಚಿಗಾಗಿ ಬಡಿದಾಡಿಕೊಳ್ಳುವ ವಿಚಾರದಲ್ಲಿ ಇಡೀ ಜಗತ್ತಿನ ಇತಿಹಾಸ ಪುಟದಲ್ಲಿ ಹೆಸರುವಾಸಿಯಾಗುತ್ತದೆ. ಮುಂದಿನ ಸಂಕ್ರಾಂತಿಯೊಳಗೆ ಕೇತು ಮತ್ತು ಸೂರ್ಯ ರಾಹು ಜೊತೆಗೆ ಸೇರಲಿದ್ದು, ಬಹಳ ದೊಡ್ಡ ಗಲಾಟೆಗಳು ನಡೆಯುತ್ತವೆ. ಇದರ ಜೊತೆಗೆ ರಾಜಕಾರಣಿಗಳ ಸ್ಥಾನ ಪಲ್ಲಟ, ಪಕ್ಷ, ಭೇದ ಭಾವ ಎಲ್ಲವೂ ಆಗಲಿದೆ ಎಂದು ಹೇಳಿದ್ದಾರೆ.