Banu Mushtaq: ಹಾಸನಾಂಬ ದೇವಿ ದರ್ಶನ ಪಡೆದ ಬಾನು ಮುಷ್ತಾಕ್‌

ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಅವರು ನಿನ್ನೆ ಹಾಸನದ ಹಾಸನಾಂಬ ದೇವಿ ದರ್ಶನ ಪಡೆದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಾನು ಮುಷ್ತಾಕ್‌ ಅವರು, ನಾನು ದರ್ಶನ ಪಡೆಯುತ್ತಿರುವುದು ಇದು ಮೊದಲನೇ ಬಾರಿ ಅಲ್ಲ. ದೇವಸ್ಥಾನ ನಮ್ಮ ಮನೆ ಮುಂದಿನ ಬೀದಿಯಲ್ಲಿದೆ. ಚಿಕ್ಕಂದಿನಿಂದಲೂ ತಾಯಿಯ ಕೈ ಬೆರಳು ಹಿಡಿದುಕೊಂಡು ದೇವಿ ದರ್ಶನಕ್ಕೆ ಬರ್ತಿದ್ದೆ. ಆಗ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಇಂದು ಗೊತ್ತಾಗುತ್ತಿದೆ. ಭಾವೈಕ್ಯತೆಯ ಸಂಕೇತ ಇದು ಎಂದರು.

ಬಹಳ ಹಿಂದಿನಿಂದಲೂ ಮುಸ್ಲಿಮರು ಹಾಸನಾಂಬೆಯನ್ನು ಹಸನ್ ಬಿ, ಹುಸೇನ್ ಬಿ ಎಂದು ನಂಬುವ ಕಾಲವಿತ್ತು. ನಮ್ಮ ಪೂರ್ವಿಕರು ಮುಸ್ಲಿಂ ಹೆಣ್ಣುಮಕ್ಕಳನ್ನು ಕರೆದುಕೊಂಡು ಬಂದು ವಂದಿಸಲು ಹೇಳಿ ಕೊಡುತ್ತಿದ್ದರು. ಹಾಗಾಗಿ ಇದು ಭಾವೈಕ್ಯತೆಯ ಸ್ಥಳ ಎಂದರು.

Rakesh arundi

Leave a Reply

Your email address will not be published. Required fields are marked *