Bhatkal: ಭಟ್ಕಳದಲ್ಲಿ ವಿಚಿತ್ರ ರೂಪದ ಹೆಣ್ಣು ಮಗು ಜನನ
ಭಟ್ಕಳ ಪಟ್ಟಣದ ಖಾಸಗಿ ನರ್ಸಿಂಗ್ ಹೋಂನಲ್ಲಿ ಅಪರೂಪದ ವಿಚಿತ್ರ ರೂಪ ಹೊಂದಿರುವ ಹೆಣ್ಣು ಮಗು ಜನಿಸಿದ್ದು, ವೈದ್ಯಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಘಟನೆ ಕೆಲವು ದಿನಗಳ ಹಿಂದೆಯೇ ನಡೆದಿದ್ದರೂ ಇದೀಗ ಬೆಳಕಿಗೆ ಬಂದಿದೆ.
ಸ್ಥಳೀಯ ಮುಸ್ಲಿಂ ದಂಪತಿಯ ಮೂರನೇ ಮಗುವಾಗಿದ್ದು, ಮಗುವಿನ ದೇಹದಲ್ಲಿ ಸಾಮಾನ್ಯ ಮಕ್ಕಳ ಹೋಲಿಕೆಯಾಗದ ಹಲವಾರು ವೈಶಿಷ್ಟ್ಯಗಳು ಕಾಣಿಸಿಕೊಂಡಿವೆ. ಆದರೆ, ಅದರ ಅಳು, ಉಸಿರಾಟ ಸೇರಿದಂತೆ ಇತರೆ ಚಟುವಟಿಕೆಗಳು ಸಾಮಾನ್ಯ ಮಕ್ಕಳ ಹಾಗೆ ಇದೆ. ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾಮಾನ್ಯರ ದೃಷ್ಟಿಗೆ ಭಯಾನಕವಾಗಿ ಕಾಣುವ ಈ ಮಗು ಸ್ಥಳೀಯರ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಇತ್ತೀಚಿಗೆ ನಡೆದ ಚಂದ್ರಗ್ರಹಣದ ಪರಿಣಾಮ ಮಗು ಹೀಗೆ ಜನಿಸಿದೆ ಎಂದು ಹೇಳಿದ್ದಾರೆ. ಆದರೆ ವೈದ್ಯರು ಇದನ್ನು ಕೇವಲ ಜನ್ಮ ಅಸಮಾನ್ಯತೆ ಅಥವಾ ಗರ್ಭಾವಸ್ಥೆಯಲ್ಲಿನ ಅಂಶಗಳಿಂದ ಉಂಟಾಗುವ ವೈದ್ಯಕೀಯ ಸಂಗತಿ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಮಗು ಮಣಿಪಾಲದ ತಜ್ಞರ ಆರೈಕೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಮಗುವಿನ ನಿಖರ ವೈದ್ಯಕೀಯ ಸ್ಥಿತಿ ತಿಳಿಯಲು ಇನ್ನೂ ಕೆಲವು ಪರೀಕ್ಷೆಗಳು ಬಾಕಿ ಉಳಿದಿವೆ ಎಂದು ಮೂಲಗಳು ತಿಳಿಸಿವೆ.