DK-Shivakumar: ‘ನಟ್ಟು ಬೋಲ್ಟ್’ ಹೇಳಿಕೆ ಜಟಾಪಟಿ: ಏನಂದ್ರು ಡಿಕೆ ಶಿವಕುಮಾರ್?
ಬಿಗ್ ಬಾಸ್ ಸೀಸನ್12 ಶೋ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಗೆ ಬೀಗ ಬಿದ್ದ ಬೆನ್ನಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಈ ಹಿಂದೆ ನೀಡಿದ್ದ ‘ನಟ್ಟು ಬೋಲ್ಟ್’ ಹೇಳಿಕೆ ವ್ಯಾಪಕವಾಗಿ ಚರ್ಚೆ ಆಗುತ್ತಿದೆ.
ನಟ್ಟು ಬೋಲ್ಡ್ ಮಿನಿಸ್ಟರ್ ಡಿ.ಕೆ.ಶಿವಕುಮಾರ್ ಅವರು ಬಿಗ್ ಬಾಸ್ ರಿಯಾಲಿಟಿ ಶೋ ಬಂದ್ ಮಾಡಿಸಿ, ಕಲಾವಿದರ ಮೇಲೆ ಸೇಡು ತೀರಿಸಿಕೊಂಡಿದ್ದಾರೆ ಎಂದು ಜೆಡಿಎಸ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಈ ಕುರಿತು ಮಾತಾನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ನನ್ನ ಬಗ್ಗೆ ಮಾತನಾಡಲಿಲ್ಲ ಎಂದರೆ ಜೆಡಿಎಸ್ ಪಕ್ಷದವರಿಗೆ ನೆಮ್ಮದಿಯೇ ಇಲ್ಲ, ನಿದ್ರೆ ಬರಲ್ಲ. ಅವರಿಗೆ ಯಾವುದಕ್ಕೂ ಶಕ್ತಿ ಬರಲ್ಲ. ಎಂದು ತಿರುಗೇಟು ನೀಡಿದ್ದಾರೆ.
ನಾನೇ ಅದನ್ನು ಉದ್ಘಾಟನೆ ಮಾಡಿದ್ದು. ನಮ್ಮ ಸರ್ಕಾರದವರು ತಮ್ಮ ಕರ್ತವ್ಯ ಮಾಡಿದ್ದಾರೆ. ಡಿಸಿ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಿಗೆ ಕರೆ ಮಾಡಿ ಮಾತನಾಡಿದ್ದೇನೆ. ತಪ್ಪಾಗಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಬೇಕು ಅಂತ ಹೇಳಿದ್ದೇನೆ ಎಂದಿದ್ದಾರೆ ಡಿಕೆ ಶಿವಕುಮಾರ್.
ಮಾರ್ಚ್ ನಲ್ಲಿ ನಡೆದ 16 ನೇ ಬೆಂಗಳೂರು ಚಲನಚಿತ್ರೋತ್ಸವದಲ್ಲಿ ಡಿಸಿಎಂ ಕನ್ನಡ ಚಿತ್ರರಂಗದ ವಿರುದ್ಧ ಗರಂ ಆಗಿದ್ದರು. ಯಾರು ಯಾರಿಗೆ ಎಲ್ಲೆಲ್ಲಿ ನಟ್ಟು ಬೋಲ್ಟ್ ಟೈಟ್ ಮಾಡಬೇಕು ಗೊತ್ತಿದೆ ಎಂದು ಕಿಡಿಯಾಗಿದ್ದರು. ಅಂದು ನೀಡಿದ ಹೇಳಿಕೆ ಇಂದು ಚರ್ಚೆಗೆ ಗ್ರಾಸವಾಗಿದೆ.