Bigg Boss Kannada: ಅರಮನೆ ಥೀಮ್‌ನಲ್ಲಿ ಕನ್ನಡದ ಬಿಗ್‌ ಬಾಸ್‌ ಸೆಟ್‌..!

ಇನ್ಮುಂದೆ ಮನೆಯಲ್ಲಿ ಯಾರಾದ್ರೂ ನ್ಯೂಸ್‌ ನೋಡೋ ಅಭ್ಯಾಸವಿದ್ರೆ ಸ್ವಲ್ಪ ಬೇಜಾರ್‌ ಆಗೋ ಸುದ್ದಿ. ಯಾಕಂದ್ರೆ ನಿಮ್ಮ ಕೈಯಲ್ಲಿ ಬಿಗ್‌ ಬಾಸ್‌ ಪ್ರಿಯರು ರಿಮೋಟ್‌ ಸಿಗೋಕೆ ಬಿಡೋದಿಲ್ಲ. ಅಷ್ಟರ ಮಟ್ಟಿಗೆ ಬಿಗ್‌ ಬಾಸ್‌ ರಿಯಾಲಿಟಿ ಶೋ ಕನ್ನಡಿಗರಿಗೆ ಹುಚ್ಚು ಹಿಡಿಸಿದೆ. ಇದೀಗ ಕಲರ್ಸ್‌ ಕನ್ನಡ ಚಾನಲ್‌ನಲ್ಲಿ ನಾಳೆಯಿಂದ ಕನ್ನಡದ ಬಿಗ್‌ ಬಾಸ್‌ ರಿಯಾಲಿಟಿ ಶೋ ಆರಂಭವಾಗ್ತಿದೆ. ಕಿಚ್ಚ ಮತ್ತೆ ಹೋಸ್ಟ್‌ ಮಾಡ್ತಿದ್ದಾರೆ. ಕರ್ನಾಟಕದಲ್ಲಿ ಮನೆ ಮಾತಾದ ಬಿಗ್‌ ಬಾಸ್‌ ಶೋ ಈ ಬಾರಿ ವಿಭಿನ್ನ ಪ್ರಯೋಗಗಳ ಮೂಲಕ ಬರ್ತಾ ಇದೆ.


ಪ್ರೇಕ್ಷಕರ ಮನರಂಜನೆಯ ದೃಷ್ಟಿಯಿಂದ, ಕಲರ್ಸ್ ಕನ್ನಡ ಬಿಗ್‌ ಬಾಸ್‌ ಸೆಟ್‌ ವಿನ್ಯಾಸದಲ್ಲಿ ವಿಭಿನ್ನ ಪ್ರಯತ್ನ ಮಾಡಿದೆ.. ಇದೀಗ ಸೆಟ್‌ನಾ ವಿನೂತನ ವೀಡಿಯೋ ರಿಲೀಸ್‌ ಮಾಡಿದ್ದು ಕರುನಾಡನ್ನು ಬಿಂಬಿಸುವ ಬಿಗ್‌ ಬಾಸ್‌ ಅರಮನೆಗೆ ಕಿಚ್ಚ ಸುದೀಪ್‌ ಅಂತಾ ಟೈಟಲ್‌ ಕೊಟ್ಟು ಮೈಸೂರು ಅರಮನೆಯ ಥೀಮ್‌ನಲ್ಲಿ ನಿರ್ಮಾಣ ಮಾಡಲಾಗಿದೆ.


ಇನ್ನೂ ಬಿಗ್ ಬಾಸ್‌ನ ಸೆಟ್ ಅನ್ನು ಪರಿಚಯಿಸುವ ವಿಡಿಯೋದಲ್ಲಿ ಬಿಗ್ ಬಾಸ್ ನಿರೂಪಕ ಕಿಚ್ಚ ಸುದೀಪ್ ಮಾತನಾಡಿದ್ದಾರೆ. ನಮ್ಮ ಶ್ರೀಮಂತವಾಗಿರುವ ಕರ್ನಾಟಕವನ್ನು ಒಂದೇ ಜಾಗದಲ್ಲಿ ಸ್ಕೆಚ್ ಮಾಡಿದ್ರೇ, ನೋಡಲಿಕ್ಕೆ ಹೇಗಿರುತ್ತೆ, ಅಂತ ನೋಡಬೇಕು ಅಂದ್ರೆ, ಈಗಿರುತ್ತೆ. ಹೀಗೆ ಅರಮನೆಯನ್ನು ಉಳಿಸಿಕೊಳ್ಳಲಿಕ್ಕೆ ಎಷ್ಟೋ ಯುದ್ದಗಳು ನಡೆದು ಹೋಗಿವೆ. ಈ ಅರಮನೆಯಲ್ಲಿ ತಮ್ಮನ್ನು ತಾವು ಉಳಿಸಿಕೊಳ್ಳಲಿಕ್ಕೆ ಬಹಳ ಯುದ್ಧಗಳು ನಡೆಯಲಿವೆ. ನಮ್ಮ ನಾಡಿಗೆ ದಸರಾ ಹಬ್ಬ ಶುರುವಾಗಿ ಒಂದು ವಾರ ಆಯ್ತು. ನಮ್ಮ ಬಿಗ್ ಬಾಯ್ ಮನೆಯಲ್ಲಿ ಮಸ್ತಿ ಹಬ್ಬ ಈಗ ಶುರು ಎಂದು ನಿರೂಪಕ ಕಿಚ್ಚ ಸುದೀಪ್ ಹೇಳಿದ್ದಾರೆ.
ನಾಳೆ ಅಂದರೆ ಸೆಪ್ಟೆಂಬರ್‌ 28 ರಿಂದ ಸಂಜೆ 06 ಗಂಟೆಗೆ ಬಿಗ್‌ ಬಾಸ್‌ ಶೋ ಆರಂಭವಾಗಲಿದೆ.ಈ ಬಾರಿ ಕುಸ್ತಿ ಮಸ್ತಿ ಹೇಗಿರಲಿದೆ ಅನ್ನೋದನ್ನು ಕಾದು ನೋಡ್ಬೇಕು.

Rakesh arundi

Leave a Reply

Your email address will not be published. Required fields are marked *