Bigg Boss 12 Dog Sathish: ಬಿಗ್ ಬಾಸ್ ಮನೆಗೆ ಡಾಗ್ ಸತೀಶ್.!ಈತನ ಮಾತಿಗೆ ಕಿಚ್ಚ ಶಾಕ್.!ಎದೆ ಮೇಲೆ ಕೈಇಟ್ಕೊಂಡ ಸುದೀಪ್.!
ಬಿಗ್ ಬಾಸ್ ಸೀಸನ್ 12 ಶುರುವಾಗ್ತಿದ್ದಂತೆ ಕಂಟೆಸ್ಟೆಂಟ್ಗಳು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈಗಾಗ್ಲೇ ಮಾತಿನ ಮಲ್ಲಿ ಬಗ್ಗೆ ಎಲ್ಲಾ ಕಡೆ ಟಾಕ್ ಶುರುವಾಗಿದ್ರೆ, ಈಗಾಗ್ಲೇ ಲಕ್ಷಾಂತರ ರೂಪಾಯಿ ಶ್ವಾನಗಳನ್ನು ಸಾಕಿ ಸೆಲೆಬ್ರಿಟಿಯಾಗಿದ್ದ ಡಾಗ್ ಸತೀಶ್ ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ದುಬಾರಿ ಶ್ವಾನಗಳನ್ನು ಸಾಕೋ ಮೂಲಕ ಮನೆಮಾತಾಗಿರೋ ಡಾಗ್ ಸತೀಶ್ ಆಡಿದ ಒಂದು ಮಾತಿಗೆ ಸುದೀಪ್ ಪೆಚ್ಚಾಗಿದ್ದಾರೆ. ಈಗಾಗ್ಲೇ ಬಿಗ್ ಬಾಸ್ ಹೋಸ್ಟ್ ಮಾಡ್ತಿರೋ ಕಿಚ್ಚ ಸುದೀಪ್ ಬ್ಲ್ಯಾಕ್ ಡ್ರೆಸ್ ಧರಿಸಿಕೊಂಡು, ಕರ್ಲಿ ಹೇರ್ಸ್ಟೈಲ್ನಲ್ಲಿ ಮಸ್ತ್ ಆಗಿ ಕಾಣಿಸ್ತಿದ್ದಾರೆ. ಈ ನಡುವೆ ಬಿಗ್ ಬಾಸ್ಗೆ ಆಯ್ಕೆಯಾಗ್ತಿರೋ ಕಂಟೆಸ್ಟೆಂಟ್ಗಳು ಸುದೀಪ್ಗಿಂತ ಎಲ್ಲರ ಕೇಂದ್ರಬಿಂದುಗಳಾಗ್ತಿದ್ದಾರೆ. ಅದ್ರಲ್ಲಿ ಡಾಗ್ ಸತೀಶ್ ಕೂಡ ಒಬ್ಬರು. ಇವ್ರು ಕಿಚ್ಚನಿಗೆ ಶಾಕ್ ಕೊಟ್ಟಿದ್ದಾರೆ.
ಸುದೀಪ್ ಇವ್ರ ಲೈಫ್ಸ್ಟೈಲ್, ದಿನಚರಿ ಬಗ್ಗೆ ವೇದಿಕೆಯಲ್ಲಿ ಮಾತನಾಡಿಸ್ತಾ ಇಲ್ಲಿ ಬಹುಮಾನದ ಮೊತ್ತ ಇಷ್ಟೇ ಕೊಡೋದು ಎಂದು ಅಮೌಂಟ್ನಾ ಅವ್ರಿಗೆ ತಿಳಿಸುತ್ತಾರೆ. ಅದಕ್ಕೆ ಡಾಗ್ ಸತೀಶ್ ತಕ್ಷಣಕ್ಕೆ ರಿಯಾಕ್ಟ್ ಮಾಡಿ ತಾವು ಧರಿಸಿರೋ ಸೂಟ್ ಬೆಲೆ 25 ಲಕ್ಷ ಎಂದು ರಿಯಾಕ್ಟ್ ಮಾಡುತ್ತಾರೆ. ಈ ಮಾತನ್ನು ಕೇಳಿದ ತಕ್ಷಣ ಶಾಕ್ ಆದ ಕಿಚ್ಚ ಎದೆ ಮೈಲೆ ಕೈ ಇಟ್ಟು ಆಶ್ಚರ್ಯ ವ್ಯಕ್ತಪಡಿಸುತ್ತಾರೆ.
ಯಾರೀ ಡಾಗ್ ಸತೀಶ್.!?
ಸಿಲಿಕಾನ್ ಸಿಟಿಯ ಶ್ವಾನಪ್ರೇಮಿ ಸತೀಶ್ ಐಷಾರಾಮಿ ಲೈಫ್ಸ್ಟೈಲ್ ಮುಖಾಂತರವೇ ಎಲ್ಲರ ಗಮನ ಸೆಳೆದವ್ರು. ಭಾರತೀಯ ನಾಯಿ ಸಾಕುವವರ ಸಂಘದ ಅಧ್ಯಕ್ಷರಾಗಿರೋ ಸತೀಶ್ ಬಳಿ ಅಪರೂಪದ ನಾಯಿಗಳಿವೆ. ಹಲವು ವರ್ಷಗಳ ಹಿಂದೆಯೇ ನಾಯಿಗಳನ್ನು ಸಾಕುವುದನ್ನು ನಿಲ್ಲಿಸಿದ್ದರೂ, ಸತೀಶ್ ತಮ್ಮ ಅಪರೂಪದ ನಾಯಿಗಳನ್ನು ಪ್ರಾಣಿ ಪ್ರಿಯರಿಗೆ ಉಡುಗೊರೆಯಾಗಿ ನೀಡುವ ಮೂಲಕ ಹಣ ಸಂಪಾದಿಸ್ತೀನಿ ಎಂದಿದ್ದರು. ಇನ್ನು ಈ ದುಬಾರಿ ಶ್ವಾನಗಳ ಮೂಲಕ ಅನೇಕ ಕಾರ್ಯಕ್ರಮಗಳನ್ನು ಅಟೆಂಡ್ ಮಾಡುವ ಸತೀಶ 30 ನಿಮಿಷಗಳ ಕಾರ್ಯಕ್ರಮಕ್ಕೆ 2 ಲಕ್ಷಕ್ಕೂ ಅಧಿಕ ಹಣ ತೆಗೆದುಕೊಳ್ಳುತ್ತಾರಂತೆ. ಐದು ಗಂಟೆಗಳ ಕಾರ್ಯಕ್ರಮಕ್ಕೆ 10 ಲಕ್ಷಕ್ಕೂ ಅಧಿಕ ಹಣ ಸಂಪಾದನೆ ಮಾಡುತ್ತಾರಂತೆ.
ಇನ್ನು ನಾನು ನಾಯಿಯನ್ನು ಏಳು ಎಕರೆ ವಿಸ್ತೀರ್ಣದ ದೊಡ್ಡ ಬಂಗಲೆಯಲ್ಲಿ ಸಾಕುತ್ತಿದ್ದೇನೆ. ಆ ಮನೆಯಲ್ಲಿ ಇತರ ನಾಯಿ ತಳಿಗಳೂ ವಾಸಿಸುತ್ತಿವೆ. ತಮ್ಮ ಸಾಕುಪ್ರಾಣಿಗಳ ರಕ್ಷಣೆಗಾಗಿ, ಅವರು ತಮ್ಮ ಮನೆಯ ಸುತ್ತಲೂ 10 ಅಡಿ ಎತ್ತರದ ಗೋಡೆಯನ್ನು ನಿರ್ಮಿಸಿದ್ದೇನೆ ಎಂದಿದ್ದರು. 24/7 ಸಿಸಿಟಿವಿ ಕ್ಯಾಮೆರಾ ಕೂಡ ಅಳವಡಿಕೆ ಮಾಡಿದ್ದೇನೆ ಎಂದಿದ್ದರು.
ಡಾಗ್ ಸತೀಶ್ ಮನೆ ಮೇಲೆ ಇಡಿ ದಾಳಿ..!
ಅಪರೂಪದ ಶ್ವಾನಗಳನ್ನು ಪಕ್ಕದಲ್ಲೇ ಇಟ್ಟುಕೊಂಡು ಅನೇಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದ ಸತೀಶ್ ಕಾಡು ತೋಳ ಮತ್ತು ಕಾಕೇಶಿಯನ್ ಶೆಫರ್ಡ್ ತಳಿಗಳ ಮಿಶ್ರಣವಾಗಿದ್ದ ಕಡಬಾಮ್ ಒಕಾಮಿ ಎಂದು ಕರೆಯಲ್ಪಡುವ ಅಪರೂಪದ ನಾಯಿಯನ್ನು ಖರೀದಿಸಲು ಸುಮಾರು ರೂ.50 ಕೋಟಿ ಖರ್ಚು ಮಾಡಿದ್ದಾಗಿ ಹೇಳಿಕೊಂಡಿದ್ದ. ಈ ಒಂದು ಹೇಳಿಕೆಯೇ ಡಾಗ್ ಸತೀಶ್ ನಾ ಅಸಲಿ ಬಂಡವಾಳ ಏನು ಅನ್ನೋದನ್ನು ಸಾಭೀತು ಮಾಡಿತ್ತು. ಇಡಿ ದಾಳಿ ಮಾಡಿದ ನಂತ್ರ ಇದೆಲ್ಲಾ ಸುಳ್ಳು ಅನ್ನೋದು ಗೊತ್ತಾಗಿತ್ತು.
ಇದೀಗ ಅದೇ ರೀತಿಯ ಅಪರೂಪದ ಶ್ವಾನಗಳೊಂದಿಗೆ ಮತ್ತೆ ಬಿಗ್ ಬಾಸ್ ಮನೆಯಲ್ಲಿ ಪ್ರತ್ಯಕ್ಷವಾಗಿರೋ ಡಾಗ್ ಸತೀಶ್ ಅಲ್ಲಿ ಹೇಗೆ ಬಣ್ಣ ಬಣ್ಣದ ಮಾತುಗಳ ಮೂಲಕ ಜನ್ರ ಹೃದಯ ಗೆಲ್ಲುತ್ತಾರೆ ಕಾದು ನೋಡ್ಬೇಕು.