Bengaluru: ನೀರು ಕೊಡಲು ನಿರಾಕರಿಸಿದಕ್ಕೆ ಪತಿಯಿಂದ ಹಲ್ಲೆ: ಮಹಿಳೆ ಸಾವು
ಕುಡಿಯಲು ನೀರು ಕೊಡದ ಕಾರಣಕ್ಕೆ ಪತಿ, ಪತ್ನಿ ಮೇಲೆ ನಡೆಸಿದ ಹಲ್ಲೆಯಿಂದ ಕೋಮಾಗೆ ಜಾರಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ಪ್ರೀತಿ ಸಿಂಗ್ ಮೃತ ಮಹಿಳೆ, ಆರೋಪಿ ಪತಿ ಛೋಟೆಲಾಲ್ ಸಿಂಗ್ ಎಂದು ಗುರುತಿಸಲಾಗಿದೆ. ದಂಪತಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಪೀಣ್ಯ ಬಳಿಯ ಚೊಕ್ಕಸಂದ್ರದಲ್ಲಿ ನೆಲೆಸಿದ್ದರು. ಸದ್ಯ ಪೊಲೀಸರು ಛೋಟೆಲಾಲ್ ಸಿಂಗ್ ನನ್ನು ಬಂಧಿಸಿದ್ದಾರೆ.
ಸೆಪ್ಟೆಂಬರ್ 24 ರಂದು ಪಾನ ಮತ್ತನಾಗಿ ಮನೆಗೆ ಬಂದ ಛೋಟೆಲಾಲ್ ಸಿಂಗ್ ಪತ್ನಿ ಪ್ರೀತಿಗೆ ಕುಡಿಯಲು ನೀರು ಕೇಳಿದ್ದಾನೆ. ಈ ವೇಳೆ ಪತ್ನಿ ನೀರು ಕೊಡಲು ನಿರಾಕರಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಛೋಟೆಲಾಲ್ ಪತ್ನಿ ಮೇಲೆ ಲಟ್ಟಣಿಗೆ ಯಿಂದ ದಾಳಿ ಮಾಡಿದ್ದಾನೆ. ತಲೆಗೆ ತೀವ್ರವಾಗಿ ಪೆಟ್ಟು ಬಿದ್ದ ಕಾರಣ ಪ್ರೀತಿ ಕೋಮಗೆ ಜಾರಿದ್ದಳು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗೆದೆ ಪ್ರೀತಿ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಛೋಟೆಲಾಲ್ ನನ್ನು ಬಂಧಿಸಿದ್ದಾರೆ.