Bengaluru: ಉಸಿರುಗಟ್ಟಿಸಿ ಮಗಳ ಕೊಂದ ಮಲತಂದೆ
ಮಲತಂದೆಯೊಬ್ಬ 7 ವರ್ಷದ ಮಗಳ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಕುಂಬಳಗೊಡು ಠಾಣಾ ವ್ಯಾಪ್ತಿಯ ಕನ್ನಿಕಾ ಬಡಾವಣೆಯಲ್ಲಿ ನಡೆದಿದೆ.
ಮಗಳು ಸಿರಿಯನ್ನು ಮಲತಂದೆ ದರ್ಶನ್ ಉಸಿರುಗಟ್ಟಿಸಿ ಕೊಲೆಮಾಡಿದ್ದಾನೆ ಎಂದು ತಿಳಿದು ಬಂದಿದೆ. ಕೊಲೆಯಾದ ಬಾಲಕಿ ಸಿರಿಯ ತಾಯಿ, ಮೊದಲ ಪತಿ ಮೃತಪಟ್ಟ ಬಳಿಕ ದರ್ಶನ್‌ನನ್ನು ಎರಡನೇ ಮದುವೆಯಾಗಿದ್ದಳು. ದರ್ಶನ್ ಪತ್ನಿ ಜೊತೆ ಗಲಾಟೆ ಮಾಡಿಕೊಂಡು ಅದೇ ಕೋಪದಲ್ಲಿ ಬಾಲಕಿಯನ್ನು ಕೊಲೆಮಾಡಿದ್ದಾನೆ. ಮಗಳು ಸಿರಿಯನ್ನು ಹತ್ಯೆ ಮಾಡಿ ದರ್ಶನ್ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಕುಂಬಳಗೊಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.