Bengaluru: ಫ್ರೆಂಡ್‌ ಜೊತೆಗೆ ಪ್ರಿಯಕರ ಚೆಲ್ಲಾಟ.! ವಿವಾಹಿತ ಮಹಿಳೆ ಅನೈತಿಕ ಸಂಬಂಧ.! ದುರಂತ ಅಂತ್ಯ..! 

ಅನೈತಿಕ ಸಂಬಂಧಗಳು, ಅನುಮಾನಸ್ಪದ ವಿಚ್ಚೇದನ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿ ಸುದ್ದಿಯಾಗ್ತಿರೋದನ್ನು ನೋಡ್ತಾ ಇದ್ದೀವಿ. ಬದಲಾದ ಕಾಲಘಟ್ಟದಲ್ಲಿ ಗಂಡ ಹೆಂಡತಿ ನಡುವೆ ನಂಬಿಕಗಳು ಕುಸಿದು ಹೋಗ್ತಿವೆ. ಇತ್ತ ಮೋಹಕ್ಕೆ ಬಿದ್ದ ಗಂಡ ಹೆಂಡತಿ ಕ್ಷಣಿಕ ಸುಖಕ್ಕಾಗಿ ಅಕ್ರಮ ಸಂಬಂಧಗಳನ್ನು ಹೊಂದಿ ಅನ್ಯೋನವಾಗಿದ್ದ ಕುಟುಂಬದ ನಂಟನ್ನು ಬೀದಿಗೆ ತರೋ ಘಟನೆಗಳೇ ನಡೆಯುತ್ತಿವೆ. ಅಂತದ್ದೊಂದು ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಪ್ರೀತಿಸಿದ ಪಕ್ಕದ ಮನೆ ಹುಡುಗನಿಗಾಗಿ ಗಂಡ, ಮಕ್ಕಳನ್ನು ತೊರೆದು ಪ್ರಾಣ ಬಿಟ್ಟ ಹೆಣ್ಣು ಮಗಳ ಕಥೆ. ಅಯ್ಯೋ ರಾಮ.. ಹರುಷದ ಕೂಳಿಗಾಗಿ ವರುಷದ ಕೂಳು ಕಳದುಕೊಂಡ್ರು ಅನ್ನೋ ಗಾದೆ ಮಾತಿದೆ. ಈ ಕಥೆ ಕೇಳ್ತಿದ್ರೆ, ಪ್ರೀತಿ, ಮೋಹ, ದೇಹದಾಸೆಗೆ ಮರುಳಾಗಿ ಇಡೀ ಜೀವನವನ್ನೇ ನರಕಕ್ಕೆ ತಳ್ಳಿಕೊಂಡ ಮಹಿಳೆಯ ಕಥೆ ಇದು. ಈ ವಿವಾಹಿತರ ಅಕ್ರಮ ಸಂಬಂಧ ಅನುಮಾನಾಸ್ಪದ ಸಾವಿನಲ್ಲಿ ಅಂತ್ಯ ಕಂಡಿದೆ.

ಬೆಂಗಳೂರಿನ ಮಾಗಡಿ ರಸ್ತೆಯ ಅಗ್ರಹಾರ ದಾಸರಹಳ್ಳಿಯಲ್ಲಿರುವ ಓಯೋ ಚಾಂಪಿಯನ್ ಕಂಫರ್ಟ್ ಲಾಡ್ಜ್ ನಲ್ಲಿ ಈ ಘಟನೆ ನಡೆದಿದ್ದು, ಅನೇಕರಿಗೆ ಪಾಠವಾಗಬೇಕಾಗಿದೆ. ಪ್ರಾಣ ಬಿಟ್ಟ ಮಹಿಳೆ ಯಶೋಧ. ನೋಡಲು ಅಂದವಾಗಿರೋ ಈ ಮಹಿಳೆಗೂ ನಂಬಿಕೊಂಡ ಕುಟುಂಬವಿದೆ. ಪ್ರೀತಿಸೋ ಗಂಡನಿದ್ದಾನೆ. ನೆಚ್ಚಿಕೊಂಡು ಮಕ್ಕಳು ಇದ್ದಾರೆ. ಆದ್ರೆ, ಈ ಮೋಹದ ಹುಚ್ಚು ಕೇಳಬೇಕಲ್ವಾ..? ಎರಡು ಮಕ್ಕಳ ತಾಯಿಯಾದ್ರೂ, ಪಕ್ಕದ ಮನೆಯವ್ನ ಜೊತೆ ಕಳ್ಳ ಸಂಬಂಧ ಹೊಂದಿದ್ದ ಯಶೋಧ, 8 ವರ್ಷದಿಂದ ಅನೈತಿಕ ಸಂಬಂಧ ಹೊಂದಿದ್ದಾಳೆ. ಈ ಚೆಲ್ಲಾಟ ಕೊನೆಗೆ ಹೋಗಿ ತಲುಪಿದ ಘಟನೆಯೇ ದುರದೃಷ್ಟಕರ.

ಕಥೆಯಲ್ಲಿ ಟ್ವಿಸ್ಟ್‌ ಏನ್‌ ಗೊತ್ತಾ..? ಈ ಪಕ್ಕದ ಮನೆಯ ಕಳ್ಳಾಟದ ಕೃಷ್ಣನ ಹೆಸರು ವಿಶ್ವನಾಥ್‌. ನಿನಗೆ ಹೊಸ ಜಗತ್ತು ತೋರಿಸ್ತೀನಿ ಅಂತಾ ಯಶೋಧನಾ ಬಲೆಗೆ ಬೀಳಿಸಿದ್ದ ಈತನಿಗೂ ಒಂದು ಕುಟುಂಬವಿದೆ.
ಆಡಿಟರ್‌ ಆಗಿ ಕೆಲಸ ಮಾಡ್ತಿದ್ದ ವಿಶ್ವನಾಥ್‌ಗೆ ಇರಲಿ ಎಮರ್ಜೆನ್ಸಿ ಕಷ್ಟ ಸುಖಕ್ಕೆ ಅಂತಾ ತನ್ನ ಗೆಳತಿಯನ್ನು ಪರಿಚಯ ಮಾಡಿಕೊಟ್ಟಿದ್ದ ಯಶೋಧ, ಕೊನೆಗೆ ಈ ಹೊಸ ಸ್ನೇಹ ಯಶೋಧ ಕೊರಳಿಗೆ ಉರುಳಾಗಿ ಪರಿಣಮಿಸಿದೆ.

ಚೋರ ಚಿತ್ತ ಚೋರ ವಿಶ್ವನಾಥ್‌ ಯಶೋಧ ಪರಿಚಯ ಮಾಡಿಕೊಟ್ಟ ಗೆಳತಿಗೆ ಒಂದು ಹಾಯ್‌ ಅಂತಾ ಮೇಸೆಜ್‌ ಹಾಕಿದ್ದಾನೆ. ಹೇಗಿದ್ದೀರಿ.. ಸುಂದರವಾಗಿದ್ದೀರಿ.. ನೋಡಲು ಕ್ಯೂಟ್‌ ಆಗಿದ್ದೀರಿ ಅಂತಾ ಸಿಂಗಲ್‌ ಹಾರ್ಟ್‌ ಸಿಂಬಲ್‌ ಟೆಕ್ಸ್ಟ್‌ ಮಾಡೋ ಮೂಲಕ ಶುರುವಾದ ಈ ಸ್ನೇಹ ಮತ್ತೊಂದು ಅನೈತಿಕ ಸಂಬಂಧಕ್ಕೆ ದಾರಿ ಮಾಡಿಕೊಟ್ಟಿದೆ. ಇತ್ಲಾಕಡೆ ಅವಳು ಬೇಕು, ಇತ್ಲಾಕಡೆ ಇವಳು ಬೇಕು ಅಂತಾ ಕೃಷ್ಣಲೀಲೆ ಆಡಲು ಶುರು ಮಾಡಿದ್ದ ವಿಶ್ವಣ್ಣ ಕೊನೆಗೆ ಯಶೋಧ ಜತೆ ಅಂತರ ಕಾಯ್ದುಕೊಂಡಿದ್ದ. ಕದ್ದು ಮುಚ್ಚಿ ಚೆಲ್ಲಾಟ ಆಡ್ತಾ ಇದ್ದಿದ್ದನ್ನು ಸೂಕ್ಷವಾಗಿ ಗಮನಿಸ್ತಿದ್ದ ಯಶೋಧಾಗೆ ಕೊನೆಗೆ ಕಾದಿದ್ದು ಮಾತ್ರ ಆಘಾತಕಾರಿ ಸುದ್ದಿ..

ಯಶೋಧ ಸ್ನೇಹಿತೆ ಜೊತೆಗೆ ಓಯೋ ಚಾಂಪಿಯನ್ ಕಂಫರ್ಟ್‌ ಲಾಡ್ಜ್‌ ಗೆ ವಿಶ್ವನಾಥ್ ಹೋಗಿದ್ದ. ಈ ವಿಚಾರ ತಿಳಿದ ತಕ್ಷಣ ಅನುಮಾನಗೊಂಡಿದ್ದ ಯಶೋಧ ಗುರುವಾರ ರಾತ್ರಿ 07:30ಕ್ಕೆ ತಕ್ಷಣಕ್ಕೆ ಎದುರಿನ ರೂಮ್‌ ಬುಕ್‌ ಮಾಡಿದ್ದಾಳೆ. ಅಷ್ಟೇ ವೇಗವಾಗಿ ಬುಕ್‌ ಮಾಡಿ ಅದೇ ಲಾಡ್ಜ್ ಗೆ ಹೋಗಿ ವಿಶ್ವನಾಥ್ ಹಾಗೂ ಆಕೆಯ ಸ್ನೇಹಿತೆ ಉಳಿದುಕೊಂಡಿದ್ದ ರೂಮ್ ಎದುರಿನ ರೂಮ್ ಅನ್ನೇ ಬಾಡಿಗೆ ಪಡೆದಿದ್ದಾಳೆ. ಈ ವೇಳೆ ಲಾಡ್ಜ್ ನಲ್ಲಿ ಯಶೋಧ ಕೈಗೆ ಗೆಳೆಯ ಅಡಿಟರ್ ವಿಶ್ವನಾಥ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

ತಕ್ಷಣಕ್ಕೆ ಸಿಡಿಲೇ ಬಡಿದಂತಾದ ವಿಶ್ವನಾಥ್‌ಗೆ ಏನೂ ತೋಚದಂತಾಗಿ, ಬದುಕಿಕೋ ಬಡಜೀವವೇ ಅಂತಾ ನಾಟಕ ಶುರು ಮಾಡಿದ್ದಾನೆ. ಅದು ಇದು ನೆಪ ಹೇಳಿ ಸಬೂಬು ಹೇಳಲು ಹೋದ್ರು ರಾಜಿಯಾಗಲು ಸಾಧ್ಯವಾಗಿಲ್ಲ. ಕೊನೆಗೆ ತಾಳ್ಮೆ ಕಳೆದುಕೊಂಡ ವಿಶ್ವನಾಥ್ ಜೊತೆಗೆ ಯಶೋಧ ಲಾಡ್ಜ್ ನಲ್ಲಿಯೇ ಜಗಳವಾಡಿದ್ದಾರೆ. ಇಷ್ಟೆಲ್ಲಾ ಆದ ಮೇಲೆ ಕೊನೆಗೆ ಅದೇ ಲಾಡ್ಜ್‌ ರೂಮ್‌ನಲ್ಲಿ ಯಶೋಧ ಫ್ಯಾನ್‌ಗೆ ತಮ್ಮ ಕೊರಳೊಡ್ಡಿ ತಮ್ಮ ಪ್ರಾಣವನ್ನೂ ತಾವೇ ಕಳೆದುಕೊಂಡಿದ್ದಾರೆ.

Rakesh arundi

Leave a Reply

Your email address will not be published. Required fields are marked *