Basavaraj Bommayi: ಕುರ್ಚಿ ಉಳಿಸಿಕೊಳ್ಳಲು ಸಿದ್ಧರಾಮಯ್ಯ ಜಾತಿ ಸಮೀಕ್ಷೆ.ರಾಜಕೀಯ ಲಾಭಕ್ಕಾಗಿ..!
ಸಂಸದ ಬಸವರಾಜ ಬೊಮ್ಮಾಯಿ ಇಂದು ಮಾಧ್ಯಮಗಳ ಮುಂದೆ ಜಾತಿಸಮೀಕ್ಷೆಯ ಕುರಿತು ಟಕ್ಕರ್ ಕೊಟ್ಟರು. ರಾಜಕೀಯ ಲಾಭಕ್ಕಾಗಿ ಸಿಎಮ್ ಸಿದ್ದರಾಮಯ್ಯ ಅವ್ರು ಜಾತಿ ಸಮೀಕ್ಷೆ ಮಾಡ್ತಿದ್ದಾರೆ. ಇದ್ರಲ್ಲಿ ಯಾವುದೇ ಇಂಟ್ರೆಸ್ಟ್ ಅವರಿಗಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ. ಕುರ್ಚಿ ಉಳಿಸಿಕೊಳ್ಳೋಕೆ ಜಾತಿ ಸಮೀಕ್ಷೆ ಮಾಡಲಾಗ್ತಿದೆ ಎಂದರು. ಇನ್ನು ಹಾಸನದ ಮೊಸಳೆ ಹೊಸಹಳ್ಳಿಯಲ್ಲಿ ನಡೆದಂತ ದುರಂತಕ್ಕೆ ಮರುಗಿದ ಬೊಮ್ಮಾಯಿ ಮೃತರ ಕುಟುಂಬಗಳಿಗೆ ಇನ್ನಷ್ಟು ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಜಾತಿ ಸಮೀಕ್ಷೆ ಮಾಡುವ ಅಧಿಕಾರ ಕೇಂದ್ರಕ್ಕೆ ಮಾತ್ರ ಇದೆ. ರಾಜ್ಯ ಸರ್ಕಾರಕ್ಕೆ ಇಲ್ಲ. ಕುರ್ಚಿ ಗಟ್ಟಿ ಮಾಡಿಕೊಳ್ಳಲು ಸಿಎಮ್ ಈ ಸಮೀಕ್ಷೆ ಮಾಡಿಸ್ತಿದ್ದಾರೆ ಎಂದರು.
ಇನ್ನು ಕ್ರೈಸ್ತ ಧರ್ಮಕ್ಕೆ ಮತಾಂತರದ ಆರೋಪದ ಬಗ್ಗೆ ರಿಯಾಕ್ಟ್ ಮಾಡಿದ ಬೊಮ್ಮಾಯಿ, ಸಂವಿಧಾನದಲ್ಲಿ ಇರೋದು ಕೇವಲ ಆರು ಧರ್ಮಗಳು ಅಷ್ಟನ್ನೆ ಹೇಳಬೇಕು. ಮತಾಂತರಗೊಂಡ ಕ್ರೈಸ್ತರು ಅನ್ನೋ ಹೊಸ ಕಲಂ ಸೇರಿಸಿದ್ದಾರೆ. ಇದೊಂದು ಕಾನೂನು ಬಾಹಿರ ಎಂದು ಕಿಡಿಕಾರಿದರು. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಹಿಂದೂ ಧರ್ಮದಲ್ಲಿ ಸಮಾನತೆ ಇಲ್ಲ ಅಂತಾ ಸಿಎಮ್ ಹೇಳಿದ್ದಾರೆ. ಇದು ಸಮಾನತೆ ಪ್ರಶ್ನೆ ಅಲ್ಲ. ಹಿಂದೂಗಳಿಗೆ ಆಸೆ ಆಮಿಷ ಒಡ್ಡಿ ಮತಾಂತರ ಮಾಡಿದ್ದಾರೆ. ಕೆಲವ್ರು ಕ್ರೈಸ್ತ ಧರ್ಮದಿಂದ ವಾಪಾಸ್ ಆಗಿದ್ದಾರೆ. ಈ ಸರ್ಕಾರಕ್ಕೆ ಜಾತಿ ಕಲಂನಲ್ಲಿ ಮತಾಂತರಗೊಂಡವ್ರಿಗೆ ಹೊಸ ಕಲಂ ಮಾಡಲು ಯಾರು ಅವಕಾಶ ಕೊಟ್ಟರು ಎಂದು ಪ್ರಶ್ನೆ ಮಾಡಿದ್ರು.