Basavanagowda Patil Yathnal: ಕಲ್ ಯಾಕ್ ಒಗೀತಿರೋ ಹಲ್ಕಟ್ ನನ್ ಮಕ್ಳ.!ಯತ್ನಾಳ್ ಕಿಡಿ.
ಮದ್ದೂರಿನ ಗಣಪತಿ ವಿಸರ್ಜನಾ ಸಮಯದಲ್ಲಿ ನಡೆದ ಕಲ್ಲು ತೂರಾಟ ಘಟನೆ ಇಂದಿಗೂ, ಎಂದಿಗೂ ಮೈಸೂರು ಭಾಗದ ಹಿಂದೂಗಳಲ್ಲಿ ಮರೆಯದಂತ ಘಟನೆ ಆಗಿ ಪರಿಣಮಿಸಿದೆ. ಅದಕ್ಕಾಗಿಯೇ ಸಮೂಹಿಕವಾಗಿ ಹಿಂದೂ ಸಂಘಟನೆಗಳು ಒಗ್ಗಾಟ್ಟಾಗಿ ಸಾಮೂಹಿಕ ಗಣಪತಿ ವಿಸರ್ಜನಾ ಕಾರ್ಯಕ್ರಮದ ಮೂಲಕ ಹಿಂದೂಗಳ ಒಗ್ಗಟ್ಟನ್ನು ಪ್ರದರ್ಶನ ಮಾಡೋ ಕೆಲಸ ಮಾಡಿದ್ರು. ಇತ್ತ ಬಿಜೆಪಿ ನಾಯಕರು ಹೋದಲ್ಲಿ, ಬಂದಲ್ಲಿ ಮದ್ದೂರು ಕಲ್ಲು ತೂರಾಟ ಘಟನೆಯನ್ನೇ ಸಂಘಟನೆಯ ಅಸ್ತ್ರವಾಗಿ ಬಳಸ್ತಾ ಇದ್ದಾರೆ. ಯತ್ನಾಳ್ ಇಂದು ತುಮಕೂರಿನ ನಾಗರಕಟ್ಟೆ ಹಿಂದೂಮಹಾಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡ ವೇಳೆ ಮತ್ತೆ ಗುಡುಗಿದ್ದಾರೆ.
ಪಾಕ್‌ಗೆ ಹೋಗಿ. ಕಾಂಗ್ರೆಸ್ ಸರ್ಕಾರ ಟಿಪ್ಪು ಸರ್ಕಾರ.
ಸಾವಿರಾರು ಮಂದಿ ಸೇರಿದ ಸಮಾರಂಭದಲ್ಲಿ ಹಿಂದೂ ಸಂಘಟನೆಯ ಮುಖಂಡರು, ಹಿಂದೂ ಕಾರ್ಯಕರ್ತರು ಸೇರಿದಂತೆ, ಭಜರಂಗದಳದ ನಾಯಕರು ಪಾಲ್ಗೊಂಡಿದ್ದರು. ಈ ಸಮಯದಲ್ಲಿ ಬಿಜೆಪಿ ಉಚ್ಛಾಟಿತ ಶಾಸಕ ಯತ್ನಾಳ್ ʼಕಲ್ಲು ತೂರಾಟ ಮಾಡಿದ ಮುಸ್ಲೀಮರ ಹಾಗೂ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ರು. ಮುಸ್ಲೀಮರ ಪವಿತ್ರ ಹಬ್ಬ ಈದ್ ಮಿಲಾದ್ ವೇಳೆ ದೇಶದ ಯಾವುದೇ ಭಾಗದಲ್ಲಿ ಹಿಂದೂಗಳು ಕಲ್ಲು ತೂರಾಟ ಮಾಡಿದ್ದಾರಾ.?ಇಲ್ಲವಲ್ಲ. ಅಂದಮೇಲೆ ನೀವು ಯಾಕೆ ಕಲ್ ಒಗೀತಿರ್ರೋ ಹಲ್ಕಟ್ ನನ್ ಮಕ್ಳʼ ಎಂದು ಕಿಡಿಕಾರಿದ್ರು. ಕಾಂಗ್ರೆಸ್ ಸರ್ಕಾರ ಎಂದರೆ ಟಿಪ್ಪು ಸರ್ಕಾರ ಇದ್ದ ಹಾಗೆ, ಔರಂಗಜೇಬ್ ಸರ್ಕಾರ ಇದ್ದ ಹಾಗೆ. ಇಷ್ಟ ಇದ್ದರೆ ಪಾಕಿಸ್ತಾನಕ್ಕೆ ಹೋಗಲಿ ಎಂದು ರೊಚ್ಚಿಗೆದ್ದು ಮಾತನಾಡಿದ್ರು.
ಒಟ್ಟಾರೆ, ಬಿಜೆಪಿ ಇಂದ ಹೊರಗಿಟ್ಟರು, ಆರ್‌ಎಸ್‌ಎಸ್ ಸಿದ್ದಾಂತ ಹಾಗೂ ಹಿಂದೂ ಅಜೆಂಡಾ ಬಿಡದೇ ಎಲ್ಲಾ ಕಡೆ ಮದ್ದೂರು ಘಟನೆಯನ್ನು ಉಲ್ಲೇಖಿಸಿ ಯತ್ನಾಳ್ ಕಾಂಗ್ರೆಸ್ ವಿರುದ್ಧ ಟೀಕೆ ಮಾಡೋದು ಮಾತ್ರ ಬಿಡೋದಿಲ್ಲ.