Banglegudda Dharmasthala: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ

ಧರ್ಮಸ್ಥಳ ಪ್ರಕರಣ ಮತ್ತೊಮ್ಮೆ ಹೊಸ ತಿರುವು ಪಡೆದಿದೆ.  ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಬಂಗ್ಲೆಗುಡ್ಡದಲ್ಲಿ ಇಂದು ಶೋಧ ಕಾರ್ಯ ಮುಂದುರೆದಿದ್ದು, ಮತ್ತೆರಡು ತಲೆಬುರುಡೆ ಪತ್ತೆಯಾಗಿವೆ.

ಈ ಸಂಬಂಧ ಬುಧವಾರ ನಡೆದ ಶೋಧದಲ್ಲಿ 5 ತಲೆಬುರುಡೆ ಮತ್ತು ಕೆಲವು ಅಸ್ಥಿಪಂಜರಗಳು ಪತ್ತೆಯಾಗಿತ್ತು. ಇಂದು ಸತತ 3 ಗಂಟೆಗಳ ಶೋಧದಲ್ಲಿ ಮತ್ತೆರಡು ತಲೆಬುರುಡೆ ಹಾಗೂ ಮತ್ತಷ್ಟು ಅಸ್ಥಿಪಂಜರಗಳು ಪತ್ತೆಯಾಗಿವೆ. 2 ದಿನದ ಕಾರ್ಯಾಚರಣೆ ಇಂದಿಗೆ ಮುಕ್ತಾಯಗೊಂಡಿದ್ದು,  ಶೋಧದಲ್ಲಿ ಒಟ್ಟು 7 ತಲೆಬುರುಡೆ ಮತ್ತು ಅಸ್ಥಿಪಂಜರಗಳು ದೊರೆತಿವೆ. ಸ್ಥಳದಲ್ಲಿ ಪತ್ತೆಯಾಗಿರುವ ಅವಶೇಷಗಳನ್ನು SIT ಅಧಿಕಾರಿಗಳು ಪ್ಲ್ಯಾಸ್ಟಿಕ್ ಡಬ್ಬ, ಪೈಪ್​​ಗಳಲ್ಲಿ ತುಂಬಿಸಿಕೊಂಡು ಹೊರಟಿದ್ದಾರೆ.

ಈ ದಿನದ ಶೋಧ ಕಾರ್ಯ ಪೂರ್ಣಗೊಂಡಿದೆ. ಬೇರೆ ಕಡೆ ನಾಳೆಯೂ ಶೋಧ ಕಾರ್ಯ ಮುಂದುವರಿಸಲಾಗುತ್ತದೆಯೋ ಇಲ್ಲವೋ ಎಂಬ ಬಗ್ಗೆ ಎಸ್‌ಐಟಿ ಸುಳಿವು ಬಿಟ್ಟುಕೊಟ್ಟಿಲ್ಲ.


Rakesh arundi

Leave a Reply

Your email address will not be published. Required fields are marked *