Bagalkote: ವಿಜಯಪುರ ಬಳಿಕ ಇದೀಗ ಬಾಗಲಕೋಟೆ ಪ್ರವೇಶಕ್ಕೂ ಕಾಡಸಿದ್ದೇಶ್ವರ ಶ್ರೀಗಳಿಗೆ ನಿರ್ಬಂಧ: ಮಠ ತೊರೆಯುವಂತೆ ನೋಟಿಸ್

ಮಹಾರಾಷ್ಟ್ರದಲ್ಲಿ ಲಿಂಗಾಯತ ಶ್ರೀಗಳ ಬಗ್ಗೆ ಅವಹೇಳನಕಾರಿ ಭಾಷಣ ಹಿನ್ನೆಲೆಯಲ್ಲಿ ಕನ್ನೇರಿ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳಿಗೆ ಬಾಗಲಕೋಟೆ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಬಾಗಲಕೋಟೆಯ ಬೀಳಗಿ ತಾಲೂಕಿನಲ್ಲಿರೋ ಕನ್ನೇರಿ ಶ್ರೀಗಳಿಗೆ ಇದೀಗ ಜಿಲ್ಲಾಧಿಕಾರಿ ಸಂಗಪ್ಪ ನೋಟಿಸ್ ನೀಡಿದ್ದು ಬಾಗಲಕೋಟೆಗೆ ಪ್ರವೇಶ ಮಾಡದಂತೆ ಹಾಗೂ ಚಿಕ್ಕಾಲಗುಂಡಿ ಮಲ್ಲಿಕಾರ್ಜುನ ಮಠಕ್ಕೆ ಬಾರದಂತೆ ನೋಟಿಸ್ ನೀಡಲಾಗಿದೆ.

ಜಿಲ್ಲಾಧಿಕಾರಿ ಹೊರಡಿಸಿದ ನೋಟಿಸ್​ ಅನ್ನು ತಹಶೀಲ್ದಾರ ವಿನೋದ್ ಅವರು ಬೀಳಗಿ ತಾಲೂಕಿನ ಚಿಕ್ಕಾಲಗುಂಡಿ ಗ್ರಾಮದಲ್ಲಿರುವ ಮಠಕ್ಕೆ ತೆರಳಿ ಕನ್ನೇರಿಯ ಕಾಡಸಿದ್ದೇಶ್ವರ ಶ್ರೀಗಳಿಗೆ ನೀಡಿದ್ದು, ಮಠ ತೆರವು ಮಾಡುವಂತೆ ನೋಟಿಸ್‌ನಲ್ಲಿ ಸೂಚಿಸಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಇದೆ. ಹೀಗಾಗಿ ಬಾಗಲಕೋಟೆ ಜಿಲ್ಲೆಯಲ್ಲಿ ಇರಬಾರದು. ನಿಮ್ಮ ಮೂಲ ಜಾಗಕ್ಕೆ ತೆರಳಿ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಶ್ರೀಗಳಿಗೆ ನೋಟಿಸ್ ನೀಡಿದ್ದು ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದ್ದು, ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Rakesh arundi

Leave a Reply

Your email address will not be published. Required fields are marked *