Asia Cup 2025 Indo-Pak : ಇಂಡೋ ಪಾಕ್ ರಣ ರೋಚಕ ಪಂದ್ಯಕ್ಕೆ ಕ್ಷಣಗಣನೆ.!
ಬದ್ಧವೈರಿ ರಾಷ್ಟ್ರಗಳು ನಾಳೆ ಕ್ರಿಕೆಟ್ ಕಾದಾಟದಲ್ಲಿ ಮುಖಾಮುಖಿಯಾಗಲಿವೆ. ಇಂಡಿಯಾ ಪಾಕಿಸ್ತಾನ ಮ್ಯಾಚ್‌ಗೆ ಭಾನುವಾರ ವೇದಿಕೆ ಸಜ್ಜಾಗಿದ್ದು, ಇಡೀ ವಿಶ್ವ ಎದುರು ನೋಡ್ತಿದೆ. ಪಹಲ್ಗಾಮ್ ಘಟನೆ ನಂತ್ರ ಪಾಕ್ ವಿರುದ್ಧ ಮ್ಯಾಚ್ ನಡೆಯಲೇಬಾರದು ಎನ್ನುವ ವಿರೋಧಗಳ ನಡುವೆ ಪಂದ್ಯ ನಡೀತಾ ಇದೆ. ಬಿಸಿಸಿಐ ಕೊನೆಗೂ ರಾಷ್ಟ್ರಾಭಿಮಾನವನ್ನು ಪಕ್ಕಕ್ಕಿಟ್ಟು ಕ್ರೀಡಾಭೀಮಾನಕ್ಕೆ ಒತ್ತು ಕೊಟ್ಟು ಪಂದ್ಯಕ್ಕೆ ಸಜ್ಜಾಗಿದೆ. ಸೆ.14 ರಂದು ನಡೆಯಲಿರೋ ಇಂಡೋ ಪಾಕ್ ಮ್ಯಾಚ್ ಮಹತ್ವದ್ದಾಗಿದೆ. ಸಂಡೇ ಸ್ಪೆಷಲ್ ಎಂಬಂತೆ ಕ್ರಿಕೆಟ್ ಪ್ರಿಯರಿಗೆ ಭರ್ಜರಿ ರಸದೂಟ ಪಕ್ಕಾ ಆಗಲಿದೆ.
ಅತಿ ದೊಡ್ಡ ಪಂದ್ಯ ಎಂದೇ ಬಿಂಬಿತವಾಗಿರೋ ಆಟಕ್ಕೆ ಕ್ರೀಡಾಭಿಮಾನಿಗಳು ಉತ್ಸುಕರಾಗಿದ್ದಾರೆ. ಯುಎಇ ವಿರುದ್ಧ ನಿರಾಯಾಸವಾಗಿ ಗೆದ್ದಿರೋ ಭಾರತ ತಂಡ ಪ್ಲೇಯಿಂಗ್ 11ನಲ್ಲೂ ಅದೇ ಟೀಮ್‌ನಾ ಕಣಕ್ಕಿಳಿಸಲಿದೆ. ಗೆಲ್ಲುವ ಆತ್ಮವಿಶ್ವಾಸದಲ್ಲೂ ಇದೆ. ಇನ್ನು ಪ್ರೆಸ್ ಮೀಟ್‌ನಲ್ಲಿ ಮಾತನಾಡಿದ್ದ ಸೂರ್ಯ ಕುಮಾರ್ ಯಾದವ್ ಅಕ್ರಮಣಕಾರಿ ಆಟದ ಬಗ್ಗೆ ಸುಳಿವು ನೀಡಿರೋದ್ರಿಂದ ಮ್ಯಾಚ್ ಇನ್ನಷ್ಟು ನಿರೀಕ್ಷೆ ಹುಟ್ಟು ಹಾಕಿದೆ.
ಭಾರತ ಟೀಮ್:
ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.
ಪಾಕ್ ಟೀಮ್:
ಸೈಮ್ ಅಯೂಬ್, ಸಾಹಿಬ್‌ಜಾದಾ ಫರ್ಹಾನ್, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಫಖರ್ ಜಮಾನ್, ಸಲ್ಮಾನ್ ಆಘಾ (ನಾಯಕ), ಹಸನ್ ನವಾಜ್, ಮೊಹಮ್ಮದ್ ನವಾಜ್, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ಸುಫಿಯಾನ್ ಮುಕೀಮ್, ಅಬ್ರಾರ್ ಅಹ್ಮದ್.
ಜೈ ಹಿಂದ್. ಜೈ ಇಂಡಿಯಾ ಎನ್ನುವ ಘೋಷಣೆಗಳೊಂದಿಗೆ ಭಾನುವಾರದ ಪಂದ್ಯ ವೀಕ್ಷಣೆಗೆ ಸಜ್ಜಾಗೋಣ.