Alien ship Earth; ಭೂಮಿಯತ್ತ ಏಲಿಯನ್ ಶಿಪ್!

ಕ್ಷುದ್ರಗ್ರಹ, ಉಲ್ಕೆಗಳು ಭೂಮಿಯ ಸಮೀಪ ಹಾದುಹೋಗುವುದು ಸರ್ವೇ ಸಾಮಾನ್ಯ. ಇವುಗಳಲ್ಲಿ ಕೆಲವು ಭೂಮಿಯ ವಾತಾವರಣವನ್ನು ಪ್ರವೇಶಿಸಿ ಸುಟ್ಟುಹೋಗುವುದೂ ಇದೆ. ಆದರೆ, ಕಳೆದ ಕೆಲವು ವಾರಗಳಿಂದ ಕೋಟ್ಯಂತರ ಕಿಲೋ ಮೀಟರ್ ದೂರದಿಂದ ಭೂಮಿಯತ್ತ ಧಾವಿಸುತ್ತಿರುವ ಆಕಾಶಕಾಯವೊಂದು ವಿಜ್ಞಾನಿಗಳಲ್ಲೂ ಚಿಂತೆಯನ್ನು ಮೂಡಿಸಿದೆ.

ಸುಮಾರು 19 ಕಿಲೋ ಅಗಲವಾದ ಈ ಆಕಾಶಕಾಯ ಇದೇ ವರ್ಷ ಡಿಸೆಂಬರ್ 19ರಂದು ಭೂಮಿಯ ಸಮೀಪ ಹಾದುಹೋಗುವ ಸಾಧ್ಯತೆ ಇದೆ. ಆದರೆ, ಕೆಲವು ವಿಜ್ಞಾನಿಗಳ ಪ್ರಕಾರ ಇದು ಬರಿ ಆಕಾಶಕಾಯವಲ್ಲ, ಬದಲಿಗೆ ಅನ್ಯಗ್ರಹ ಜೀವಿಗಳ ವಾಹನ! 31/ ಅಟ್ಲಾಸ್ ಹೆಸರಿನ ಈ ನಿಗೂಢ ಕಾಯ ಭೂಮಿಯನ್ನೇ ಗುರಿಯಾಗಿಸಿಕೊಂಡು ಬರುತ್ತಿದೆ. ಇದು ಏಲಿಯನ್ ಮತ್ತು ಮನುಕುಲದ ಮೊಟ್ಟಮೊದಲ ಮುಖಾಮುಖಿಯಾಗಲಿದೆ ಎನ್ನುವ ಚರ್ಚೆಗಳು ಅದಾಗಲೇ ಆರಂಭವಾಗಿವೆ.

ಹಲವು ವರ್ಷಗಳಿಂದ ಖಗೋಳ ಅಧ್ಯಯನದಲ್ಲಿ ತೊಡಗಿರುವ ವಿಜ್ಞಾನಿಗಳೇ ಇಂತಹದ್ದೊಂದು ಸಂಶಯವನ್ನು ವ್ಯಕ್ತಪಡಿಸುತ್ತಿರುವಾಗ ಜನಸಾಮಾನ್ಯರ ಪಾಡೇನು? ಸಾಮಾಜಿಕ ಜಾಲತಾಣಗಳಲ್ಲಂತೂ ಅನ್ಯ ಗ್ರಹಜೀವಿಗಳು ಭೂಮಿಗೆ ಭೇಟಿ ಮಾಡುವ ದಿನಕ್ಕೆ ಕೌಂಟ್‌ ಡೌನ್ ಶುರುವಾಗಿದೆ. ಇದಕ್ಕೆ ಎಐ ಚಿತ್ರಗಳು ರಂಗು ತುಂಬುತ್ತಿವೆ. ಆದರೆ, ಆಕಾಶಕಾಯ ಭೂಮಿಯ ಸಮೀಪ ಬರಲು ಇನ್ನೂ ಎರಡೂವರೆ ತಿಂಗಳು ಸಮಯ ಇದೆ. ನವೆಂಬರ್ ವೇಳೆಗೆ ಈ ಆಕಾಶಕಾಯ ನಮ್ಮ ಸೌರವ್ಯೂಹವನ್ನು ಪ್ರವೇಶಿಸಲಿದೆ. ಆ ನಂತರವಷ್ಟೇ ಈ ವಾದ-ವಿವಾದಗಳ ಸತ್ಯಾಸತ್ಯತೆ ತಿಳಿದುಬರಲಿದೆ.

Rakesh arundi

Leave a Reply

Your email address will not be published. Required fields are marked *