Hindu woman: ಹಿಂದೂ ಮಹಿಳೆಗಾಗಿ ರಮೇಶನಾಗಿ ಬದಲಾದ ಅಬ್ದುಲ್!
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಹಿಂದೂ ಮಹಿಳೆಯೊಬ್ಬರ ಜೊತೆ ಲಾಡ್ಜ್‌ಗೆ ಹೋಗಿದ್ದ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಆತ ಹಿಂದೂ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದು ಬಯಲಾಗಿದೆ.
ಎನ್.ಆರ್.ಪುರ ತಾಲ್ಲೂಕಿನ ಬಾಳೆಹೊನ್ನೂರು ಮೂಲದ ಅಬ್ದುಲ್ ಸಮದ್ (42) ಎಂಬ ವ್ಯಕ್ತಿ, ಶೃಂಗೇರಿ ತಾಲ್ಲೂಕಿನ 38 ವರ್ಷದ ಹಿಂದೂ ಮಹಿಳೆಯೊಬ್ಬರ ಜೊತೆ ಲಾಡ್ಜ್‌ಗೆ ಹೋಗಿದ್ದನು. ಈ ವೇಳೆ, ಇಬ್ಬರೂ ಗಂಡ-ಹೆಂಡತಿ ಎಂದು ಸುಳ್ಳು ಹೇಳಿ ರೂಮ್ ಪಡೆದಿದ್ದರು. ಆದರೆ, ಲಾಡ್ಜ್ ಸಿಬ್ಬಂದಿಗೆ ಅನುಮಾನ ಬಂದು ಪೊಲೀಸರಿಗೆ ತಿಳಿಸಿದ್ದಾರೆ. ಈ ವೇಳೆ ಅದು ನಕಲಿ ಎಂದು ಗೊತ್ತಾಗಿದೆ.
ಗಂಡ ಇಲ್ಲದಿದ್ದರಿಂದ ಹಿಂದೂ ಮಹಿಳೆ ಜೊತೆ ಅಬ್ದುಲ್ ಸಮದ್ ಸ್ನೇಹ ಬೆಳೆದಿದೆ. ಕಳೆದ ನಾಲ್ಕೈದು ವರ್ಷಗಳಿಂದ ಇಬ್ಬರ ನಡುವೆ ಸಂಬಂಧ ಇದ್ದು, ಅನುಮಾನ ಬಾರದಂತೆ ಅಬ್ದಲ್ ಎನ್ನುವ ಬದಲಿಗೆ ರಮೇಶ್ ಎಂದು ಆಧಾರ್ ಕಾರ್ಡ್ ಮಾಡಿಕೊಂಡು ಮಹಿಳೆಯನ್ನು ಲಾಡ್ಜ್‌ಗೆ ಕರೆದುಕೊಂಡು ಬಂದಿದ್ದಾನೆ. ಈ ವೇಳೆ ಈ ಜೋಡಿ ಸಿಕ್ಕಿಬಿದ್ದಿದ್ದಾರೆ.
ಸ್ಥಳಕ್ಕೆ ಬಂದ ಶೃಂಗೇರಿ ಪೊಲೀಸರು , ಅಬ್ದುಲ್ ಸಮದ್ ಮತ್ತು ಆತನ ಜೊತೆಗಿದ್ದ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ನಂತರದ ತನಿಖೆಯಲ್ಲಿ, ಅಬ್ದುಲ್ ಸಮದ್ ಹಿಂದೂ ಹೆಸರಿನಲ್ಲಿ ಗುರುತಿನ ಚೀಟಿ ನಕಲಿ ಮಾಡಿಸಿಕೊಂಡಿದ್ದು ದೃಢಪಟ್ಟಿದೆ. ಸದ್ಯ, ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.