Selfie teacher death: ಸೆಲ್ಫಿ ತೆಗೆಯಲು ಹೋಗಿ ಪ್ರಪಾತಕ್ಕೆ ಬಿದ್ದು ಪ್ರಾಣ ಬಿಟ್ಟ ಶಿಕ್ಷಕ
ಸೆಲ್ಫಿಅಂದ್ರೆ ಸಾಕು ಎಲ್ಲಿ ಬೇಕಾದರು ಹೋಗಿ ಫೋಟೋ ಕ್ಲಿಕ್ಕಿಸಿಕೊಳ್ತಾರೆ. ಸೆಲ್ಫಿಗಾಗಿ ಅನೇಕರು ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ. ಆದರೂ ಜನರಿಗೆ ಸೆಲ್ಫಿ ಹುಚ್ಚು ಕಡಿಮೆ ಆಗಿಲ್ಲ. ವಿದ್ಯಾರ್ಥಿಗಳಿಗೆ ಬುದ್ಧಿ ಹೇಳಬೇಕಾದ ಶಿಕ್ಷಕರೇ ಸೆಲ್ಫಿ ಹುಚ್ಚಿನಿಂದ ಪ್ರಪಾತಕ್ಕೆ ಬಿದ್ದು ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ.
ಸೆಲ್ಸಿ ತೆಗೆಯಲು ಹೋಗಿ ಶಿಕ್ಷಕ ಕಾಲು ಜಾರಿ ಪ್ರಪಾತಕ್ಕೆ ಬಿದ್ದು ಮೃತಪಟ್ಟ ಘಟನೆ ತರೀಕೆರೆ ತಾಲೂಕು ಕೆಮ್ಮಣ್ಣುಗುಂಡಿ ಸಮೀಪದ ಕ್ರಾಸ್‌ನಲ್ಲಿ ಶನಿವಾರ ನಡೆದಿದೆ.
ಲಕ್ಷ್ಮೀಸಾಗರ ಶಾಲೆಯ ಶಿಕ್ಷಕ ಸಂತೋಷ್ (40) ಪತ್ನಿ ಜೊತೆಗೆ ವಾರಾಂತ್ಯದ ರಜೆ ಕಳೆಯಲು ಕೆಮ್ಮಣ್ಣುಗುಂಡಿಗೆ ಆಗಮಿಸಿದ್ದರು. ವೀವ್ ಪಾಯಿಂಟ್ ಬಳಿ ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ 60 ಅಡಿ ಆಳದ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಲಿಂಗದಹಳ್ಳಿ ಠಾಣೆ ಠಾಣಾಧಿಕಾರಿ ಶಶಿಕುಮಾರ್ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಪ್ರಪಾತದಿಂದ ಶವವನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.