“ಧರ್ಮಸ್ಥಳ ಪಾಯಿಂಟ್ 13: ಸಾಮೂಹಿಕ ಸಮಾಧಿ ರಹಸ್ಯ ಬಯಲು – ಮೂಳೆ ಚೂರು ಪತ್ತೆ”
ಸ್ನೇಹಿತರೆ ನಮಸ್ಕಾರ ನಾನು ನಿಮ್ಮ ರಾಕೇಶ್ ಆರುಂಡಿ..ಧರ್ಮಕ್ಷೇತ್ರದ ಧರ್ಮಪಾಲಕನ ಸನ್ನಿಧೀಯಲ್ಲೇ ಇಂತದ್ದೊಂದು
ಕರಾಳ ಚರಿತ್ರೆ ಅಡಗಿದೆ ಅನ್ನೋದನ್ನು ನಾವಾಗಲಿ, ನೀವಾಗಲಿ ಇಂದಿಗೂ ಅರಗಿಸಿಕೊಳ್ಳೋದಕ್ಕೆ ಕಷ್ಟ ಸಾಧ್ಯ.. ಈ
ಧರ್ಮಪಾಲಕನ ಈ ಸಾಲುಗಳನೊಮ್ಮೆ ಕೇಳಿ. ನ್ಯಾ ಯ ನೀತಿ ಮೂರ್ತಿವೆತ್ತ ಸತ್ಯ ಧೈವವೇ..ಮಹಾಮಹಿಮ ಮಂಜುನಾಥ
ನಮೋ ಎನ್ನುವೆ..ಭೂಮಿಗಿಳಿದ ಕೈಲಾಸ ನಿನ್ನ ಸನ್ನಿಧಿ..ನೇತ್ರಾವತಿ ನದಿ ಇದುವೆ ಆ ಸುರನದಿ.. ಅನ್ಯಾಯ ಮಾಡಿದವ್ರ
ಪಾಪದ ಕೊಡ ತುಂಬಿದ ಮೇಲೆ ಪಾಪಿಗಳ ವಿನಾಶಕ್ಕಾಗಿ ಮಂಜುನಾಥನೇ ಮೂರನೇ ಕಣ್ಣು ಬಿಟ್ಟಿದ್ದಾನೆ ಎಂದೆಲ್ಲಾ
ಧರ್ಮಸ್ಥಳದ ಸ್ಥಳಿಯರೇ ಮಾತನಾಡಿಕೊಳ್ತಿದ್ದಾರೆ. ಸುರನದಿ ಎಂದೇ ಖ್ಯಾತಿ ಪಡೆದ ಪವಿತ್ರ ನೇತ್ರಾವತಿಯಲ್ಲಿ ನೆತ್ತರು
ಹರಿದಿರೋದನ್ನು ಕಾತ್ರಿ ಪಡೆಸುವಂತೆ.. ಇವತ್ತು ಅದೇ ನದಿಯ ದಂಡೆಯ ಮೇಲೆ ಏಳೆಂಟು ಮೂಳೆ ಚೂರುಗಳು
ಪತ್ತೆಯಾಗಿವೆ.. ಕೈ ಮೂಳೆ,,,ಕಾಲಿನ ಮೂಳೆ.. ತಲೆ ಬುರುಡೆಯ ಚೂರು ಎಲ್ಲವೂ ಪತ್ತೆಯಾಗಿ ಬೂದಿ ಮುಚ್ಚಿದ
ಕೆಂಡದಂತಿದ್ದ ವಿವಾದಕ್ಕೆ ಇದೀಗ ಕಿಡಿ ಹೊತ್ತಿಸಿದೆ.. ಸ್ನೇಹಿತರೆ.. ಇನ್ನು ಈ ಹೊತ್ತಿನ ಅಪ್ಡೇಟ್ಸ್ ಅಂದ್ರೆ, ಇಲ್ಲಿವರೆಗೂ
ಕೂಡ ಪಾಯಿಂಟ್ ನಂ. ಆರರಲ್ಲಿ ಇನ್ನು ಮೃತದೇಹಗಳನ್ನು ಹೂತಿದ್ದೇನೆ.. ಕನಿಷ್ಠ ಆರು ಮೃತದೇಹಗಳಂತೂ ಈ
ಸ್ಥಳದಲ್ಲಿ ಹೂತಿರೋ ಖಾತ್ರಿ ಇದೆ ಅಂತಾ ಭೀಮ ಕೂಡ ವಿನಂತಿ ಮಾಡಿಕೊಳ್ತಾ ಇದ್ದ.. ಆದ್ರೆ, ಸದ್ಯ ಸಿಕ್ಕಿರೋ
ಪಳೆಯುಳಿಕೆಗಳನ್ನು ಸೀಲ್ ಮಾಡಿ ಒಂದೊಂದು ಚೂರಿನ ಮೂಳೆಯ ಅಳತೆ, ವಿನ್ಯಾಸ ಎಲ್ಲವನ್ನು ಹಾರ್ಡ್ ಡಿಸ್ಕ್ನಲಿ
ದಾಖಲಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್ ನ್ಯಾಯಾಧೀಶರಿಗೆ 24 ಗಂಟೆಯ ಒಳಗಾಗಿ ವರದಿ ಸಲ್ಲಿಸೋ ಬಗ್ಗೆ ಎಸ್ಐಟಿ
ಟೀಮ್ ಚಿಂತನೆ ನಡೆಸ್ತಿದೆ..
ಇತ್ತ, ಪಾಯಿಂಟ್ ನಂ.13 ಇಲ್ಲಿ ಸಮಾಧಿ ಅಗೆಯೋಕೆ ಕನಿಷ್ಟ ಮೂರು ಜೆಸಿಬಿಗಳು, ಅರ್ಥ್ ಮೂವರ್ಸ್ಗಳಾದ್ರೂ
ಬೇಕಾಗಲಿದೆ ಅನ್ನೋ ಚರ್ಚೆಗಳೇ ಆ ಜಾಗದ ಕರಾಳತೆಯನ್ನು ಬಿಚ್ಚಿಡ್ತಾ ಇದೆ..ನಾನಿಲ್ಲೇ ಅನೇಕ ಮೃತದೇಹಗಳನ್ನು
ಮುಂಜಾನೆ ಮೂರರಿಂದ ನಾಲ್ಕು ಗಂಟೆಯ ಸಮಯದಲ್ಲಿ ಹೂಳ್ತಾ ಇದ್ದೆ.. ಅದೂ ಕೂಡ ಕಸದ ಗಾಡಿಯಲ್ಲಿ ತಂದು
ಯಾರೂ ಇಲ್ಲದ ಕಗ್ಗತ್ತಲ ರಾತ್ರೀಯಲ್ಲಿ ಒಂದೇ ಕಡೆಯಲ್ಲಿ ಸಮಾಧಿ ಮಾಡುತ್ತಿದೆ ಅನ್ನೋ ಭಯಾನಕ ಸತ್ಯವನ್ನು
ಬಿಚ್ಚಿಟ್ಟಿದ್ದಾನೆ.. ಸ್ನೇಹಿತರೆ. ಆಂಟಿ ನಕ್ಸಲ್ ಫೋರ್ಸ್ನಾ ಇಬ್ಬರು ಪೊಲೀಸ್ ಅಧಿಕಾರಿಗಳು ನಿರಂತರ ಸುರಿಯೋ
ಮಳೆಯಲ್ಲೆ ಸರ್ಪಗಾವಲು ಹಾಕಿದ್ದಾರೆ.. 30- 40 ಸೈಟ್ನಲ್ಲಿರೋ ಈ ನಂ. 13 ಕರಾಳ ಕಥೆಗಳನ್ನು ಬಿಚ್ಚಿಡಲಿದೆ
ಅನ್ನೋ ಪ್ರಾಥಮಿಕ ಮಾಹಿತಿಯೇ ಅಚ್ಚರಿ ಮೂಡಿಸಿದೆ.. ಮೊದ್ಲು ಇಲ್ಲೇ ಅಗೀರಿ ಅಂತಾ ವಿನಂತಿ ಮಾಡಿದ್ದ ಭೀಮನ
ಮಾತುಗಳನ್ನು ಕಡೆಗಣಿಸಿದ ಎಸ್ಐಟಿ ತೀರ್ಮಾನವೂ ಕೂಡ ಕಾನೂನಾತ್ಮಕವಾಗಿ ಸರಿಯಾಗಿಯೇ ಇದೆ… ಯಾಕೆ ಅಂದ್ರೆ,
ನಾಳೆ ಈ ಕೇಸ್ನಾ ವಿಚಾರಣೆ ಕೋರ್ಟ್ನಲ್ಲಿದ್ದಾಗ ಖಚಿತವಾಗಿ ಡೆಫೆನ್ಸ್ ವಕೀಲರಿಗೆ ಯಾಕೆ ಆರಂಭದಲ್ಲಿ ಒಂದರಿಂದ
ಏಕಾಏಕಿ ಸೀರಿಯಲ್ 13 ನ್ನು ಮೊದಲು ಅಗೆಯೋಕೆ ಮುಂದಾದ್ರಿ ಅನ್ನೋ ಪ್ರಶ್ನೆಗಳನ್ನು ಕೇಳಬಹುದು.. ಇನ್ನು ಜಡ್ಜ್
ಕೂಡ ಕಡೆಯಿಂದ್ಲೂ ಈ ರೀತಿಯ ಪ್ರಶ್ನೆಗಳು ಏಳಬಹುದು..ಹಾಗಾಗಿ ಆರೋಪಿಗಳನ್ನು ಬಂಧಿಸುವ ಮುನ್ನ, ಚಾರ್ಜ್
ಶೀಟ್ ರಚನೆ ಮಾಡುವ ಮುನ್ನ ಎಸ್ಐಟಿ ಎಚ್ಚರಿಕೆಯ ಹೆಜ್ಜೆಗಳನ್ನಿಡ್ತಾ ಇದೆ…
ಸ್ನೇಹಿತರೆ.. ಇನ್ನು, ಈ ಪಾಯಿಂಟ್ ನಂ..13 ಪಕ್ಕದಲ್ಲೇ ಒಂದು ಬ್ರಿಡ್ಜ್ ಇದೆ.. ಅಲ್ಲಿಯೂ ಕೂಡ ಮೂರು ನಾಲ್ಕು
ಬಾರಿ ಮಣ್ಣೇರಿಸಲಾಗಿದೆ ಅನ್ನೋ ಮಾತುಗಳು ಕೂಡ ಕೇಳಿ ಬರ್ತಿವೆ.. ಆ ಬ್ರಿಡ್ಜ್ ಪಕ್ಕದ ಸಾಮೂಹಿಕ ಸಮಾಧಿ ಸ್ಥಳವೇ
ಭೀಮ ಡೆಡ್ಲಿ ಟಾರ್ಗೆಟ್ ಪ್ಲೇಸ್..ಸುಮಾರು 2000 ಇಸವಿಯಲ್ಲಿ ಇದೇ ದೊಡ್ಡವ್ರ ಕುಟುಂಬದವ್ರೆ ಉದ್ಘಾಟನೆ
ಮಾಡಿದ ಬ್ರಿಡ್ಜ್ ಅದು.. ಉದ್ಘಾಟನೆ ದಿನವೇ ಒಡೆದು ಹೋಗಿ ವಿವಾದಕ್ಕೆ ಗುರಿಯಾಗಿದ್ದ ಬ್ರಿಡ್ಜ್ ಕೂಡ ಹೌದು..
ಅದಾದ್ಮೇಲೆ ಇದನ್ನು ಪುನಃ ನಿರ್ಮಾಣ ಮಾಢಲಾಯಿತು.. ಇದೇ ಬ್ರಿಡ್ಜ್ ನಾ ಪಕ್ಕದಲ್ಲಿ ಸಾಮೂಹಿಕವಾಗಿ ತುಂಬಾ ಸುಲಭ
ಅನ್ನೋ ಕಾರಣಕ್ಕೆ ಭೀಮ ಸಾಮೂಹಿಕವಾಗಿ ಸಮಾಧಿ ಮಾಢಿದ್ದಾನೆ. ಹಾಗಾಗಿ ಎಲ್ಲರಿಗೂ ಹೆಚ್ಚಿನ ಕುತೂಹಲವನ್ನು ಈ
ಪಾಯಿಂಟ್ ನಂ.. 13 ಮೂಡಿಸಿದೆ..
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಭಾರಿ ಬೆಳವಣಿಗೆಗಳು ನಡೆದಿವೆ. ಮೊದಲ ಸ್ಥಳದಲ್ಲಿದ್ದ ಸಿಕ್ಕಿದ್ದ
ಪಾನ್ಕಾರ್ಡ್ನ ವಿವರಗಳನ್ನು ಹೊರಹಾಕುವಲ್ಲಿ ತನಿಖಾ ತಂಡ ಯಶಸ್ವಿಯಾಗಿದೆ. ಇದು ನೆಲಮಂಗಲದ ಸುರೇಶ್ ಎಂಬ
ವ್ಯಕ್ತಿಯ ಪ್ಯಾನ್ ಕಾರ್ಡ್ ಗೊತ್ತಾಗಿದೆ. ಇವರು 2025 ರಲ್ಲಿ ಕಾಮಾಲೆಯಿಂದ ಮೃತಪಟ್ಟಿದ್ದರು. ಗ್ರಾಮಾಂತರ
ಜಿಲ್ಲೆಯ ನೆಲಮಂಗಲ ತಾಲೂಕಿನ ಸುರೇಶ್ ಎಂಬ ವ್ಯಕ್ತಿ ಮಾರ್ಚ್ 2025ರಲ್ಲಿ ತನ್ನ ಸ್ವಂತ ಗ್ರಾಮದಲ್ಲಿ ಕಾಮಾಲೆಯಿಂದ
ನಿಧನರಾಗಿದ್ದರು. ಅಲ್ಲಿಯೇ ಅವರ ಅಂತ್ಯಕ್ರಿಯೆಯನ್ನು ಸಹ ನಡೆಸಲಾಗಿತ್ತು. ಈ ಪ್ಯಾನ್ ಕಾರ್ಡ್ ಅವರದ್ದೇ ಎಂದು
ತಿಳಿದು ಬಂದಿದೆ. ಈ ಸಂಬಂಧ ಎಸ್ಐಟಿ ಅಧಿಕಾರಿಗಳು ಆ ವ್ಯಕ್ತಿಯ ಮನೆಗೆ ಭೇಟಿ ನೀಡಿದ್ದು, ತಂದೆ ಮಗನ ಪ್ಯಾನ್
ಕಾರ್ಡ್ ಅನ್ನು ದೃಢಪಡಿಸಿದ್ದಾರೆ. ಮೃತ ವ್ಯಕ್ತಿ ಮದ್ಯವ್ಯಸನಿಯಾಗಿದ್ದರು ಎಂದು ಎಸ್ಐಟಿ ಅಧಿಕಾರಿಗಳು ಹೇಳಿದ್ದು,
ಸಾಯುವ ಮೊದಲು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಈ ಪ್ಯಾನ್ ಕಾರ್ಡ್ ಕಳೆದುಹೋಗಿರಬಹುದು ಎಂದು
ಶಂಕಿಸಿದ್ದಾರೆ.
ಇನ್ನು ಎಟಿಎಂ ಕಾರ್ಡ್ ಜೊತೆ ಮಹಿಳೆ ಒಬ್ಬರ ಡೆಬಿಟ್ ಕಾರ್ಡ್ ಕೂಡ ಪತ್ತೆ ಯಾಗಿತ್ತು. ಈ ಬಗ್ಗೆ ಎಸ್ಐಟಿ ಅಧಿಕಾರಿಗಳು
ಬ್ಯಾಂಕ್ ಅನ್ನು ಸಂಪರ್ಕಿಸಿದ್ದು, ಅವರು ಇನ್ನೂ ರೂಪೇ ಡೆಬಿಟ್ ಕಾರ್ಡ್ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಹೇಳಿದ್ದಾರೆ.
ಅವರು ಇರಬಹುದಾದ ಸ್ಥಳದ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.