“ಧರ್ಮಸ್ಥಳ ಸರಣಿ ರಹಸ್ಯ: ಭೀಮ ತೋರಿಸಿದ ನಿಗೂಢ ಸಮಾಧಿಗಳ ಸತ್ಯ”
ಸ್ನೇಹಿತರೆ ನಮಸ್ಕಾರ ನಾನು ನಿಮ್ಮ ರಾಕೇಶ್ ಆರುಂಡಿ.. ಇಡೀ ದೇಶವೇ ಬೆಚ್ಚಿ ಬೀಳೀಸೋ ಧರ್ಮಸ್ಥಳ ಸರಣಿ ಕತ್ಯಗಳಿಗೆ
ಸಂಬಂಂಧ ಪಟ್ಟ ಹಾಗೆ ಇವತ್ತು ಏನೆಲ್ಲಾ ಆಯ್ತು ಅನ್ನೋ ರೋಚಕ ಇನ್‌ಸೈಡ್ ಸ್ಟೋರಿಯನ್ನು ನೋಡ್ತಾ
ಹೋಗೋಣ.. ಭೀಮ ಹೆಸರಿನ ದೂರುದಾರ ಇವತ್ತು ಮೈತುಂಬಾ ಫುಲ್ ಪ್ಯಾಕ್ ಆಗಿ ಕೇವಲ ಕಣ್ಣುಗಳು ಮಾತ್ರ
ಕಾಣುವಂತೆ, ಸುತ್ತಾ ಆಂಟಿ ನಕ್ಸಲ್ ಫೋರ್ಸ್ ಭದ್ರತೆಯೊಂದೆಗೆ ಹೂತಿಟ್ಟ ನಿಗೂಢ ಸಮಾಧಿ ಸ್ಥಳಗಳನ್ನು ಕೊಟ್ಟ
ಮಾತಿನಂತೆ ತೋರಿಸಿಯೇ ಬಿಟ್ಟ… ಸ್ನೇಹಿತರೆ.. ಅಚ್ಚರಿ ವಿಷ್ಯ ಅಂದ್ರೆ.. ಇವತ್ತು ಭೀಮ ತನ್ನ ತಲೆಗೆ ಹಾಕಿದ್ದ ಮಾಸ್ಕ್
ಕೂಡ ವಿಶೇಷ.. ಯಾಕಂದ್ರೆ.. ಇದನ್ನು ನಾವು ಭಾರತೀಯ ರಕ್ಷಣಾ ವಿಭಾಗದಲ್ಲಿ ಭಾರತೀಯ ಸೈನಿಕರು ಬಳಸುವ ವಿಶೇಷ
ತಂತ್ರಗಾರಿಕೆ.. ಅಂದ್ರೆ.. ಇದಕ್ಕೆ ಕೆಮೋಫ್ಲೇಜ್ ಎಂದೇ ಕರೆಯುತ್ತೇವೆ…ನಾವು ಧರಿಸುವ ಬಟ್ಟೆ,, ತಲೆಗೆ ಹಾಕುವ ವಸ್ತ್ರ
ಎಲ್ಲವೂ ಪ್ರಕೃತಿಯೊಂದಿಗೆ ಬೆರೆತುಹೋಗುವ ಧಿರಿಸು ಎಂದೇ ಕರೆಯಲಾಗುತ್ತೆ.. ಸ್ನೇಹಿತರೆ.. ಕೆಮೋಫ್ಲೇಜ್ ಅಂದ್ರೆ
ಮರೆಮಾಚುವಿಕೆ ಎನ್ನುತ್ತೇವೆ.. ಭೀಮ ಹಾಕಿದ್ದ ಮಾಸ್ಕ್ ಮೇಲೆ ಬಿಳಿ ಬಣ್ಣದ ಗೆರೆಗಳಿದ್ವು.. ಆತನ ಮುಖದ
ಛಾಯಾಚಿತ್ರವನ್ನು ಯಾರೂ ಸ್ಕೆಚ್ ಹಾಕಬಾರದೆಂದೆ, ಆತನ ಭದ್ರತೆಯ ಎಚ್ಚರಿಕೆಯಿಂದ್ಲೇ ಎಸ್‌ಐಟಿ
ಮುಖ್ಯಸ್ಥರಾಗಿರೋ ಪ್ರಣವ್ ಮೊಹಂತಿ ಅವ್ರ ಟೀಮ್ ಈ ರೀತಿಯ ತಂತ್ರವನ್ನು ಬಳಸಿದೆ. ಇನ್ನು ಕಾಡಂಚಲ್ಲಿ ಯಾರಿಗೂ
ಆತನ ಶೂಟ್ ಮಾಡುವ ವಿಷ್ಯದಲ್ಲಾಗಲಿ, ಯಾವುದೇ ಸ್ನೈಪರ್‌ಗಳ ಕಣ್ಣಿಗೆ ಬೀಳದಂತೆ ಆತನನ್ನು ಮರೆಮಾಚುವ ಒಂದು
ಸೈನ್ಸ್ ನ್ಯಾಚುರಲ್ ಟೆಕ್ನಾಲಜಿ ಅಂದ್ರೆ ತಪ್ಪಾಗೋದಿಲ್ಲ..
ಇನ್ನು ಇವತ್ತು ಹದಿನೈದು ಜಾಗಗಳನ್ನು ಈಗಾಗ್ಲೇ ಮಾರ್ಕ್ ಮಾಡಿರೋ ಭೀಮ, ಸ್ಥಳ ಗುರುತು ಮಾಡುವ ಕೆಲಸ
ನಾಳೆಗೂ ಕೂಡ ಮುಂದೂಡಲಾಗಿದೆ.. ಆತ ತೋರಿಸಿದ ಆ ನೇತ್ರಾವತಿ ಸ್ನಾನ ಘಟ್ಟದ ಬ್ರಿಡ್ಜ್ ಮುಂಭಾಗದ ಕೆಳಗಿನ ದಟ್ಟ
ಕಾಡಲ್ಲಿ ಈಗಾಗ್ಲೇ ಕ್ರೈಮ್ ಸೀನ್ ಮ್ಯಾಪ್ ಮಾಡಲಾಗಿದೆ.. ಎಲ್ಲೋ ಬಣ್ಣದ ಹಳದಿ ಪ್ಲೇ ಕಾರ್ಡ್ ಆ ಜಾಗಕ್ಕೆ
ಹೆಸರಿಸಿ ಸೂಕ್ತ ಭದ್ರತೆ ಕಲ್ಪಿಸಲಾಗಿದೆ.. ಈ ನಿಗೂಢ ಮೃತದೇಹಗಳ ಸಮಾಧಿ ಕಾಯಲು ತಲಾ ಒಂದು ಜಾಗಕ್ಕೆ ಇಬ್ಬರನ್ನು
ಎಎನ್‌ಎಫ್ ಸಿಬ್ಬಂಧಿಯನ್ನು ಕಾಣ್ಗಾವಲಿಗೆ ಇಡಲಾಗಿದೆ.. ಅಂದ್ರೆ.. ಆಂಟಿ ನಕ್ಸಲ್ ಫೋರ್ಸ್. ಒಂದು ರೀತಿಯ
ಆರ್ಮಿಯಷ್ಟೆ ರಕ್ಷಣೆ ಮೃತದೇಹಗಳಿಗೆ ದೊರೆದಂತಾಗಿದೆ.. ಅನಾಮಿಕ ವ್ಯಕ್ತಿ ಪತ್ತೆ ಹಚ್ಚಿದ ಈ ಸ್ಥಳಗಳಲ್ಲಿ ಶಸ್ತ್ರಸಜ್ಜಿತ
ಎಎನ್‌ಎಫ್ ಸಿಬ್ಬಂದಿಗಳು 24 ಗಂಟೆ ಹದ್ದಿನ ಕಣ್ಣು ಇಡಲಿದ್ದಾರೆ.. ಇನ್ನು ಯಾವುದೇ ಆತಂಕ ಪಡುವ ಅಗತ್ಯವೇ
ಇಲ್ಲ.. ಯಾರೋ ಪ್ರಭಾವಿಗಳು ಬಂದು ಈ ಮೃತದೇಹಗಳನ್ನು ಹೂಳೆತ್ತಿ ಸಾಕ್ಷಿ ಮಾಡ್ಥಾರೆ ಅನ್ನೋ ಆತಂಕಕ್ಕೆ ಕ್ಲಾರಿಟಿ
ಸಿಗಲಿದೆ.. ಗನ್ ಮ್ಯಾನ್‌ಗಳ ಸೂಕ್ತ ಸೆಕ್ಯೂರಿಟಿ ಸಮೇತ ರಕ್ಷಣೆ ಸಿಗ್ಥಾ ಇರೋದ್ರಿಂದ ಈ ಕೇಸ್‌ನಲ್ಲೊಂದು ತಾರ್ಕಿಕ ಅಂತ್ಯ
ಸಿಗಲಿದೆ ಅನ್ನೋದನ್ನು ನಾವೆಲ್ಲರೂ ವಿಶ್ವಾಸದಿಂದ ಕಾಯಬಹುದು.. ಸ್ನೇಹಿತರೆ.. ಇನ್ನು ಕಲ್ಲೇರಿಯ ಬಳಿಯ
ಪೆಟ್ರೋಲ್ ಬಂಕ್ ಸಮೀಪ ಭೀಮ ಹೂತಿಟ್ಟಿರೋ ಬಾಲಕಿಯ ಮೃತದೇಹಕ್ಕೆ ಸಂಬಂಧಪಟ್ಟಹಾಗೆ ವ್ಯಾಪಕ ಚರ್ಚೆಗಳು
ಕೂಡ ನಡೀತಿದೆ.. ಅದೇನೆ ಇರಲಿ.. ಇದೊಂದೆ ಅಲ್ಲಾ.. ಇಂತಹ ನೂರಾರು ಮೃತದೇಹಗಳು ಕೂಡ ಮಣ್ಣಲ್ಲೇ ಮೋಕ್ಷ
ಸಿಗದೇ ನರಳಾಡ್ತಿವೆ..ಅದಕ್ಕೆಲ್ಲಾ ಮುಕ್ತಿ ಸಿಗಬೇಕಾದ್ರೆ.. ಭೀಮ ಮಾಢಿರೋ ಆರೋಪ.. ಗುರುತಿಸಲಾಗಿರೋ ಜಾಗದಲ್ಲಿ
ಎಲ್ಲಾ ಮೃತದೇಹಗಳ ಅವಶೇಷಗಳು ಪತ್ತೆಯಾಗ್ಬೇಕು.. ಆಗ ಮಾತ್ರ, ಬೋನಿ ಮಾರ್ಕಿಂಗ್ ಹಾಗೂ ಬೋನಿ ಸ್ಫಿಕರ್‌ಗಳ
ಮೂಲಕ ಡಿಎನ್‌ಎ ಸ್ಯಾಂಪಲ್ ಪಡೆದು ಆ ಅಪ್ರಾಪ್ತ ಬಾಲಕಿ ಯಾರು.. ಮಹಿಳೆ ಯಾರು.. ಆತನ ಹೈಟ್ ಎಷ್ಟು.. ಆತನ
ಏಜ್ ಎಷ್ಟು.. ಎಲ್ಲವೂ ಕೂಡ ಎಫ್‌ಎಸ್‌ಎಲ್ ಟೀಮ್‌ಗೆ ಸುಲಭಸಾಧ್ಯ.. ಸ್ನೇಹಿತರೆ ಹಾಗಾಗಿ ಈ ಮೃತದೇಹಗಳನ್ನು
ಸಿಕ್ಕ ತಕ್ಷಣವೇ ಯಾವು ಅಂಗಾಗದ ಮೂಳೆಗಳು ಮಿಸ್ ಹಾಗಿವೆ.. ಕೊಲೆ ಮಾಡಲಾಗಿದೆಯಾ..? ಕೇವಲ ಮೈಮುರಿಯುವಂತೆ
ಹೊಡೆದು ಬಟ್ಟ ಕಟ್ಟಿ ಕೆಟ್ಟದಾಗಿ ಬಳಸಿಕೊಂಡು.,, ಪ್ರಾಣವನ್ನೇ ತೆಗೆದು ಭೀಮನಿಗೆ ಹೂಳಲು ಆದೇಶ ನೀಡಲಾಗಿದೆಯಾ
ಎಲ್ಲವೂ ಗೊತ್ತಾಗಲಿದೆ..
ಒಟ್ಟಾರೆಯಾಗಿ, ಈ ಕೇಸ್‌ನಲ್ಲೊಂದು ರಹಸ್ಯ ಅಂತೂ ಖಂಡಿತ ಇದೆ.. ಆ ರಾಕ್ಷಸರ ನಿಜಬಣ್ಣ ಬಯಲಾಗ್ಬೇಕು ಅನ್ನೋ
ಒತ್ತಾಯಕ್ಕೊಂದು ಉತ್ತರ ಸಿಗೋದಂತೂ ಖಂಡಿತ.. ತಪ್ಪು ಮಾಡಿದವ್ನು ಯಾರೇ ಇರಲಿ .. ಶಿಕ್ಷೆ ಕಟ್ಟಿಟ್ಟ ಬುತ್ತಿ.. ಇವತ್ತು
ಆತ ಕಾಲಿಟ್ಟ ಜಾಗಗಳನ್ನು ನೋಢ್ಥಾ ಇದ್ದರೆ, ಭಯವಾಗುತ್ತೆ,,ರಾತ್ರಿಯಂತೂ ಆ ಜಾಗಗಳಿಗೆ ಯಾರೂ ಕಾಲಿಡಲು
ಸಾಧ್ಯವಿಲ್ಲ.ಇನ್ನು ಧರ್ಮಸ್ತಳ ಅಂದ್ರೆ.. ಮಳೆಗಾಲದಲ್ಲಿ ಮನೆ ಬಿಟ್ಟು ಅಂಗಳಕ್ಕೆ ಬರೋ ಜನ್ರು ಕಡಿಮೆ.. ಇನ್ನು ಬೇರೆ
ಸಮಯದಲ್ಲಿ ಈ ಕಾನನವೇ ಹಸಿರನ್ನೂ ತನ್ನ ಮೈಮೇಲೆ ಹೊದ್ದು ಮಲಗಿರೋದ್ರಿಂದ ಕತ್ತಲು ಕಾಡೋಳಗೆ ಹಾಗೆ
ಆವಿರಿಸಿಬಿಡುತ್ತೆ.. ಅಂತ ಜಾಗದಲ್ಲಿ ಭೀಮ ನೂರಾರು ಶವಗಳನ್ನು ಹೂತ ಜಾಗ ಮಾರ್ಕ್ ಮಾಢಿ ತೋರಿಸಿದ್ದಾನೆ.. ಆದ್ರೆ,
ನಾಳೆಯೂ ಸ್ಥಳ ಮಹಜರು ಪ್ರಕ್ರಿಯೆ ಇರೋದ್ರಿಂದ ಮತ್ತೆಲ್ಲಿ ಆತ ಕರೆದುಕೊಂಡು ಹೋಗ್ಥಾನೋ ಅದಿನ್ನು ನಿಗೂಢ..
ಹಾಗೆಂದ ಮಾತ್ರಕ್ಕೆ ಎಲ್ಲ ಮಾರ್ಕಿಂಗ್ ಸಮಾಧಿಗಳನ್ನು ಒಂದೇ ಸಲ ಹೂಳೆತ್ತೋದು ತುಂಬಾ ಕಷ್ಟ ಸಾಧ್ಯ.. ಅದೂ ಕೂಡ
ಇಷ್ಟೊಂದು ಪ್ರಸರ್ ಕ್ರಿಯೇಟ್ ಮಾಡಿರೋ ಕೇಸ್‌ನಲ್ಲಿ.. ಇಷ್ಟೊಂದುಸೆನ್ಸೇಷನ್ ಹುಟ್ಟು ಹಾಕಿರೋ ಕೇಸ್‌ನಲ್ಲಿ
ಸಿಕ್ಕ ಎಲುಬುಗಳನ್ನು ಇನ್ ಫೂಚರ್ ಈ ಕೇಸ್ ತನಿಖೆ ಸರಿಯಾಗಿ ನಡೆಸಿಲ್ಲ ಅನ್ನೋ ವಿರೋಧಗಳು ಕೇಳಿ ಬರಬಾರದು
ಅನ್ನೋ ಉದ್ದೇಶವನ್ನು ಗಮನದಲ್ಲಿಡಬೇಕು..
ಆತ ಹೇಳಿದ ಸಮಾಧಿ ಮತ್ತು ಆಜಾಗಗಳು ಯಾರಿಗೆ ಸೇರಿದ್ದು ಅದನ್ನು ಕಂದಾಯ ಅಧಿಕಾರಿಗಳು ನಿರ್ಧಾರ ಮಾಡಿ ಮುಂದಿನ
ಪ್ರೊಸಿಜರ್ ಫಾಲ್ಲೋ ಮಾಡ್ಬೇಖು.. ಇನ್ನುಈಗ ಕರೆತಂದಿರೋ ಈ ನೇತ್ರಾವತಿ ನದಿಯ ತಟದ ಮೊದಲ ಜಾಗ.. ಕಾಡು
ದಟ್ಟವಾಗಿ ಬೆಳದಿರೋ ನಿರ್ಜನ ಅರಣ್ಯವಾಗಿದ್ದು, ಇದ್ರ ಪಕ್ಕದಲ್ಲೇ ಭೀಮನ ಮನೆಯೂ ಇತ್ತು ಎನ್ನಲಾಗ್ತಿದೆ..
ಅದಕ್ಕಾಗಿಯೇ ಈ ಸರಣಿ ಕೃತ್ಯಗಳನ್ನು ಆತನಿಗೆ ಮಾಡಲು ಸುಲಭವಾಗಿದೆ ಅನ್ನೋ ಅಂಶಗಳು ಬೆಳಕಿಗೆ ಬರ್ತಾ ಇವೆ.. ಆದ್ರೆ,
ಆ ಮೃತದೇಹಗಳನ್ನು ಪತ್ತೆ ಮಾಡಿದ್ಮೇಲೆ ಎಲ್ಲವೂ ನಿರ್ಣಾಯಕ ಅಎನ್ನುವಂತಿಲ್ಲ..
ಇನ್ನು ಆತ ಪತ್ತೆ ಹಚ್ಚಿದ ಮೃತದೇಹಗಳಲ್ಲಿ ಏನಾದ್ರೂ ಕಾಯಿಲೆಗಳಿಂದ ಸಾವನ್ನಪ್ಪಿದ್ರೆ ಅದೂ ಗೊತ್ತಾಗುತ್ತಾ.. ಎಲ್ಲಾ
ಮೃತದೇಹಗಳು ಇದೇ ರೀತಿ ಸ್ವಾಭಾವಿಕ ಗಂಭೀರ ಕಾಯಿಲೆಗಳಿಂದ ಮೃತಪಟ್ಟಿದ್ದರೆ ಅನ್ನೋ ಅನುಮಾನಗಳು ಮೂಡ್ತಾ
ಇವೆ.. ಅದೂ ಕೂಡ ಡಿಎನ್‌ಎ ಸ್ಯಾಂಪಲ್ ನಲ್ಲಿ ಏನಾದ್ರೂ ಬೋನ್ ಕ್ಯಾನ್ಸರ್‌ನಂತಹ ಕಾಯಿಲೆಗಳು,
ಟ್ಯೂಬರ್‌ಕುಲೋಸಿಸ್ ನಂತಹ ಕೆಲವೇ ಕೆಲವು ಕಾಯಿಗಳನ್ನು ಮಾತ್ರ ಮೂಳೆಗಳಲ್ಲಿ ಪತ್ತೆ ಹಚ್ಚಬಹುದು ಇಲ್ಲದಿದ್ರೆ
ಅದೂ ಕೂಡ ಸಾಧ್ಯವಿಲ್ಲ ಎನ್ನಲಾಗ್ತಿದೆ..
ಸ್ನೇಹಿತರೆ.. ಇಲ್ಲಿ ಎಸ್‌ಐಟಿ ಮುಖ್ಯಸ್ಥ ರಾಗಿರೋ ಪ್ರಣವ ಮೊಹಂತಿ ಅನುಭದಲ್ಲಿ ಎಲ್ಲವನ್ನು ಮಾರ್ಕ್ ಮಾಢಿ ಒಂದೇ
ಸಲ ತೆಗೆಯೋಕೆ ಮುಂದಾಗಿದ್ದಾರೆ ಎನ್ನಿಸ್ತಿದೆ.. ಏಕೆಂದರೆ.. ಸೆಕ್ಯೂರಿಟಿ ಲ್ಯಾಪ್ಸ್ ಆಗಬಾರದು.. ಗಂಭೀರ
ಪ್ರಕರಣವಾಗಿರೋದ್ರಿಂದ ಇಲ್ಲಿ ಎಲ್ಲವನ್ನು ಒಂದೇ ಸಲ ಡಿಗ್ ಮಾಢಿ ತೆಗೆದು ಒಂದೊಂದು ಟೀಮ್ ಅಂತೇಳಿ ತನಿಖೆಗೆ
ಕೊಟ್ಟರು ಕೊಡಬಹುದು.. ಐ ತಿಂಕ್ ಅನುಭವಿ ಎಫ್‌ಎಸ್‌ಎಲ್ ತಂತ್ರಜ್ನರು
ಏಕಾಏಕಿಯಾಗಿ ಹೆಲ್ಪ್‌ಲೈನ್ ಟೀಮ್ ಒಂದ್ಕಡೆ…
ಎಕ್ಸ್‌ಮಿನೇಷನ್ ಟೀಮ್.. ಒಂದು ಕಡೆ..
ಆರೋಪಿಗಳು ತಪ್ಪಿಸಿಕೊಂಡು ಹೋಗದಂತೆ ಅವ್ರ ಕಡೆಯೂ ಕಣ್ಗಾವಲು ಟೀಮ್ ಮೂರು ಯ್ಯೂನಿಟ್ ಮಾಡಿಕೋಂಡು
ಈ ಕೇಸ್‌ನಾ ಇನ್ನಷ್ಟು ಸರಳ ಮಾಡಬಹುದು ಎನ್ನಲಾಗ್ತಿದೆ.. ಒಟ್ಟಾರೆಯಾಗಿ ನಿರಂತರ ಸುರಿಯೋ ಮಳೆಯಲ್ಲಿ ಈ ರಾತ್ರಿ
ಆ ಮೃತದೇಹ ಹೂತಿಟ್ಟ ಜಾಗಗಳನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ಪೊಲೀಸರ ಹೊಣೆಯಾಗಿದೆ..