“ಧರ್ಮಸ್ಥಳ ಉತ್ಖನನ: ಭೀಮನ ತೋರಿಸಿದ ಜಾಗದಲ್ಲಿ 12 ಅಡಿ ಆಳಕ್ಕೆ ಅಗೆಯಿದ್ರೂ ಶವ ಪತ್ತೆ ಆಗಲಿಲ್ಲ!”

ಸ್ನೇಹಿತರೆ ನಮಸ್ಕಾರ ನಾನು ನಿಮ್ಮ ರಾಕೇಶ್‌ ಆರುಂಡಿ.. ಇಡೀ ರಾಷ್ಟ್ರ ಎದುರು ನೋಡ್ತಿರೋ ಧರ್ಮಸ್ಥಳಕ್ಕೆ
ಸಂಭಮಧ ಪಟ್ಟ ಕೇಸ್‌ ಕ್ಷಣಕ್ಕೊಂದು ತಿರುವು ಪಡೆದು ಕೊಳ್ತಾ ಇದೆ.. ಮಾಸ್ಕ್‌ ಮ್ಯಾನ್‌ ಎಂದೇ ಇಡೀ ರಾಷ್ಟ್ರದ
ಚಿತ್ತವನ್ನು ತನ್ನತ್ತ ತಿರುಗಿಸಿರೋ ಮುಸುಕುದಾರಿ ಭೀಮ ಮಾತ್ರ ನಾನೇಳಿದ ಜಾಗದಲ್ಲೇ ಮೃತದೇಹಗಳಿವೆ ದಯವಿಟ್ಟು
ಅಗೆದು ನೋಡಿ ಅಂತಾ ಮನವಿ ಮಾಡಿಕೊಳ್ತಿದ್ದಾನೆ.. ಈಗಾಗ್ಲೇ ಪಾಯಿಂಟ್‌ ನಂ ಒಂದರಲ್ಲ.. ಅಂದ್ರೆ ನಿನ್ನೆ ಪ್ಲೇ
ಕಾರ್ಡ್‌ ಸಮೇತ ಮಾರ್ಕಿಂಗ್‌ ಮಾಡಿದ್ದ ಜಾಗದಲ್ಲಿ ಈಗಾಗ್ಲೇ ಮೂರರಿಂದ ನಾಲ್ಕು ಅಡಿಯಷ್ಟು ಮಣ್ಣು ಅಗೆದು
ಅವ಼಼ಶೇಷಗಳೇನಾದ್ರೂ ಸಿಗಬಹುದಾ ಅನ್ನೋ ಕುತೂಹದಲ್ಲಿ ಎಸ್‌ಐಟಿ ಟೀಮ್‌, ಎಫ್‌,ಎಸ್‌ಎಲ್‌ ಟೀಮ್‌,
ಸೋಕೋ ಟೀಮ್‌, ವೈಧ್ಯರ ತಂಡ.. ಇನ್ನು ಹಾಋೆ ಗುದ್ದಲಿ ಪಿಕಾಸಿ ಹಿಡಿದು ಪಂಚಾಯಿತಿ ಕಡೆಯಿಂದ ಬಂದಿರೋ
ಧರ್ಮಸ್ತಳದ 12 ಯುವಕರ ಗುಂಪು ಎಲ್ಲರಿಗೂ ಒಂದೇ ಟೆನ್ಷನ್‌ ಯಾವಾಗ, ಎಲ್ಲಿ ಸಿಗಲಿದೆ ಈ ಮೃತದೇಹದ
ಪಳೆಯುಳಿಕೆಗಳು ಅನ್ನೋದು.. ಸ್ನೇಹಿತರೆ.,,. ಮೂರರಿಂದ ನಾಲ್ಕು ಅಡಿ ಆಳದಲ್ಲಿ ಅಗೆದು ನೋಡಿದ್ರು ಇನ್ನು
ಯಾವುದು ಪತ್ತೆ ಆಗ್ತಿಲ್ಲ.. ಇನ್ನು ಹೆಚ್ಚಿನದಾಗಿ 6 ಅಡಿಗಳವೆರೆಗೂ ತೆಗೆಯೋಕೆ ಬೀಮ ಪಟ್ಟು ಹಿಡಿದು ಕೂತಿದ್ದಾನೆ..
ದಯವಿಟ್ಟು ತೆಗೆಯಿರಿ.. ಅಲ್ಲೇ ಹೂತಿದ್ದೀನಿ ಮಿಸ್‌ ಆಗೋಕೆ ಚಾನ್ಸ್‌ ಇಲ್ಲ ಅಂತಾ ತಾನೂ ಮಾಡಿರೋ ಕೃತ್ಯದ ಬಗ್ಗೆ
ಕಾನ್ಫಿಡೆಂಟ್‌ ಆಗಿ ಇದ್ದಾನೆ.. ಹಾಗಾಗಿ ದಯವಿಟ್ಟು ನಾನು ಸುಳ್ಳು ಹೇಳ್ತಾ ಇಲ್ಲ.. ಜೆಸಿಬಿ ನಾದ್ರೂ ತರಿಸಿ ನೋಡಿ
ಅಕ್ಕಪಕ್ಕದಲ್ಲೀ ನೋಡಿ ಅಂತಾ ಮನವಿ ಮಾಡಿಕೊಳ್ತಾ ಇದ್ದಾನೆ.. ಹಾಗಾಗಿ ಈಗಾಗ್ಲೇ ಐಪಿಎಸ್‌ ಅಧಿಕಾರಿ ಆಗಿರೋ
ಅನುಚೇತ್‌ ಕೂಡ ಸ್ಥಳಕ್ಕೆ ಆಗಮಿಸಿ ಬಿಗಿ ಭದ್ರತೆ ಸಮೇತ ಜೆಸಿಬಿ ಕೂಡ ತರಿಸಲಾಗಿದೆ..

ತಹಶೀಲ್ದಾರ್‌ ಹಾಗೂ ಅಸಿಸ್ಟರ್‌ ಕಮಿಷನರ್‌ ಸಮ್ಮುಖದಲ್ಲಿ ಉತ್ಖನನ ಪ್ರಕ್ರಿಯೆ ನಡೀತಾ ಇದೆ.. ಆದ್ರೆ ಧರ್ಮಸ್ಥಳದ
ಭೂ ಪ್ರದೇಶದ ಹವಾಗುಣದ ಬಗ್ಗೆ ನಿಮಗೆ ಮೊದಲೇ ಹೇಳಿದಂತೆ.. ಅಗೆದಷ್ಟು ಮಣ್ಣಿನ ಅಡಿಯಲ್ಲಿ ನೀಡು ಹರಿದು
ಬರ್ತಾ ಇದೆಯಂತೆ..
ಇದು ಕೂಡ ಸವಾಲಾಗಿ ಪರಿಣಮಿಸಿದೆ.. ಕೆಳಗಡೆ ಸಡಿಲಗೊಂಡಿರೋ ಮಣ್ಣು ಇರೋದ್ರಿಂದ ಇನ್ನಷ್ಟು ಸಮಸ್ಯೆ ಉಂಟು
ಮಾಢ್ತಿದೆ..
ಊಟದ ನಂತ್ರ ಮತ್ತೆ ಉತ್ಖನನ ಶುರುವಾಗೋ ಸಾಧ್ಯತೆ ಇದೆ…
ನಾಲ್ಕು ಅಡಿ ಉತ್ಖನನ ಮಾಡಿದಾಗ ನೀರು ಬಂದಿದೆ.
ನದಿ ತಟ ಆದ ಕಾರಣಕ್ಕೆ ಮತ್ತಷ್ಟು ಅಡಿ ಹೋದರೆ ನೀರು ಹೆಚ್ಚುತ್ತದೆ.

ಸ್ನೇಹಿತರೆ.ನಿಮಗೆ ಇದನ್ನು ನೀರಿನ ಸೆಲೆಗಳು ಅಂತಾ ಹೇಳಿ ಕರೀತಿವೆ.. ಅಂದ್ರೆ ಮಣ್ಣಿನ ಆಳದಲ್ಲಿ ಜರಿಗಳ ರೀತಿ
ನೀರು ಹರಿದು ಬರ್ತಾ ಇರುತ್ತೆ.. ಆ ರೀತಿ .. ಜೆಸಿಬಿ ಯಲ್ಲಿ ಮಣ್ಣು ಅಗೆಯಲು ಮುಂಧಾದ್ರೆ ವಿಶಾಲವಾದ ಜಾಗ
ನಿರ್ಮಾಣವಾಗಗುತ್ತೆ.. ಅದೂ ಕೂಡ ಇನ್ನೊಂದು ಸಾಹಸದ ಕೆಲಸ..
ಗುಂಡಿಯಲ್ಲಿ ಪದೇ ಪದೇ ನೀರು ತುಂಬಿಕೊ‍ಳ್ಲೋದು.. ಮತ್ತೆ ಅದೇ ನೀರನ್ನು ಹೊರಗೆ ಹಾಕೋದು ಇದೇ ನಿತ್ಯದ
ಕೆಲಸವಾಗಬಾರದು.. ʼ
ಪಾಯಿಂಟ್‌ ಒಂದು ದೂರುದಾರ ಭೀಮನಿಗೆ ಸ್ಯಾಟಿಸ್‌ಫೈ ಆದ್ಮೇಲೆ ಪಾಯಿಂಟ್‌ ಕೆಲಸ ಶುರುವಾಗೋ ಸಾಧ್ಯತೆ..
ಇದೆ..
ಗುಂಡಿ ಅಗೆಯಲು ಬಂದಿರೋ ಯುವಕರು ಏನೂ ಈ ಕೆಲಸದಲ್ಲೇ ಪರಿಣಿತಿ ಪಡೆದವ್ರಲ್ಲ.. ಪಂಚಾಯಿತಿಯ ಒತ್ತಾಯದ
ಮೇರೆಗೆ ಕುತೂಹಲಕ್ಕೂ ಅವ್ರೆಲ್ಲಾ ಯುವಕರೇ ಆಗಿರೋದ್ರಿಂದ ಒಂದು ಸಹಜ ಕೂತೂಹಲಕ್ಕೂ ಒಪ್ಪಿಕೊಂಡಿದ್ದಾರೆ..
ಎಲ್ಲಿ ಮಣ್ನು ಸಡಿಲ ಇರುತ್ತೆ.. ಅಲ್ಲಿ ಪಿಕಾಸಿ ಹಾಕುವುದಾಗಲಿ.. ಯಾವ ಮಣ್ಣಿನ ಭಾಗದಲ್ಲಿ ಹೆಚ್ಚಾಗಿ ಗಿಡಗಂಟಿಗಳು
ಬೆಳೆದಿವೆ.. ಅವೆಲ್ಲಾ ಅನುಭವದ ಆಧಾರದಲ್ಲಿ ಕಂಡುಹಿಡಿಯಲಾಗುತ್ತೆ..
ಸ್ನೇಹಿತರೆ, ಕೆಲವು ಭಾರಿ ಇಂತಹ ಒತ್ತಡದ ಸನ್ನಿವೇಶದಲ್ಲಿ ಸಾಕ್ಷಿದಾರ ಭೀಮ ಏನೂ ತಮಾಷೆ ನೋಡಲಿಕ್ಕೆ ಈಗೆ
ಮಾಡಿರೋದಿಲ್ಲ,, ಆತನಿಗೂ ಇದೇ 6 ಇಂಟು ಸಿಕ್ಸ್‌ ಅನ್ನೋ ಜಾಗವನ್ನು ಅಷ್ಟು ಕಾನ್ಫಿಡೆಂಟ್‌ ಆಗಿ ಹೇಳೋದು ಸ್ವಲ್ಪ
ಕಷ್ಟ ಸಾಧ್ಯವಾಗಬಹುದು.. ಅದಕ್ಕೆ ಇಟಾಚಿಯನ್ನು ತರಿಸಲಾಗಿದೆ.. ಏನೆಲ್ಲಾ ಆಹಬಹುದು ಅದನ್ನು ನಾವು ಕಾದು
ನೋಢ್ಬೇಖು..
ಮೊದಲು 1ನೇ ಮಾರ್ಕಿಂಗ್ ಜಾಗದಲ್ಲೇ ಕ್ಲಿಯರ್ ಆಗಿ ಅಗೆಯಲು ಸೂಚನೆ ನೀಡಲಾಗಿದೆ, ಎರಡು ಹಾಗೂ ಮೂರನೇ
ಪಾಯಿಂಟ್‌ಗಳನ್ನು ಸದ್ಯಕ್ಕೆ ಅಗೆಯಲು ಹೋಗಿಲ್ಲ. ಈಗ ಒಂದನೇ ಜಾಗದಲ್ಲೇ ಆಳವಾಗಿ ಅಗೆದು, 12 ಅಡಿ
ಆಳವಾದರೂ ಜೆಸಿಬಿ ಮೂಲಕ ತೆಗೆಯಲು ಪ್ಲಾನ್ ಮಾಡಲಾಗಿದೆ.
ಅನಾಮಿಕನ ಜೊತೆ ಡಿಐಜಿ ಅನುಚೇತ್​ ಚರ್ಚೆ
ಆರು ಅಡಿಗಳ ಆಳಕ್ಕೆ ಅಗೆದಿದ್ರೂ ಅಲ್ಲಿ ಯಾವುದೇ ಕಳೆಬರಳ, ಮೂಳೆ, ಗುರುತುಗಳು ಪತ್ತೆಯಾಗಿಲ್ಲ ಎಂದು
ಹೇಳಲಾಗ್ತಿದೆ. ಪಾಯಿಂಟ್ ನಂಬರ್ 1 ಸ್ಥಳಕ್ಕೆ ತೆರಳಿದ ಡಿಐಜಿ ಅನುಚೇತ್ ಭೇಟಿ ನೀಡಿದ್ರು. ಈ ವೇಳೆ ಅನಾಮಿಕನ
ಬಳಿಕ ಕೆಲ ಕಾಲ ಚರ್ಚೆ ಮಾಡಿದ್ದಾರೆ ಎನ್ನಲಾಗ್ತಿದೆ.
ಮಲಾಯಳಂನ ವರದಿಗಾರರು ಕೂಡ ಧರ್ಮಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ..

Rakesh arundi

Leave a Reply

Your email address will not be published. Required fields are marked *

ನೀವು ತಪ್ಪಿಸಿಕೊಂಡಿರಬಹುದು