“ಧರ್ಮಸ್ಥಳ ಶವ ರಹಸ್ಯ: ಮಾಸ್ಕ್‌ಮ್ಯಾನ್ ವಿರುದ್ಧ ರಾಜುನ ಸ್ಪೋಟಕ ಹೇಳಿಕೆ!”

ಸ್ನೇಹಿತರೆ ನಮಸ್ಕಾರ ನಾನು ನಿಮ್ಮ ರಾಕೇಶ್‌ ಆರುಂಡಿ.. ಧರ್ಮಸ್ತಳ ದಲ್ಲಿ ಕೇಳಿಬರ್ತಿದ್ದ ನಿರಂತರ ಆರೋಪಗಳ ಸುತ್ತಾ
ಮುತ್ತಾ ಅನೇಕ ಗೊಂದಲಗಳು ಮನೆ ಮಾಡ್ತಿವೆ.. ಸುಜಾತಾ ಭಟ್‌ ಹಿನ್ನೆಲೆಯೇ ಇದೀಗ ಗೋಜಲಮಯವಾಗಿಬಿಟ್ಟಿದೆ..
ಅದಕ್ಕೆ ನಿಖರ ಸಾಕ್ಷ್ಯಗಳನ್ನು ಸಾಭೀತು ಮಾಡುವವರೆಗೂ ಜನ್ರರ ತಲೆಯಲ್ಲಿ ಮೂಡ್ತಾ ಇರೋ ಪ್ರಶ್ನೆಗಳಿಗೆ ಉತ್ತರ
ಸಿಗೋದಿಲ್ಲ.ಇನ್ನು, ಇದೀಗ ಇಷ್ಟು ದಿನಗಳ ನಂತ್ರ ಮಾಧ್ಯಮಗಳ ಮುಂದೆ ಬಂದಿರೋ ಭೀಮ ಎನ್ನುವ ವ್ಯಕ್ತಿಯ ಜೊತೆಗೆ
ಕೆಲಸ ಮಾಡ್ತಿದ್ದೆ ಎನ್ನಲಾಗ್ತಿರೋ ರಾಜು ಎನ್ನುವ ವ್ಯಕ್ತಿಯ ಹೇಳಿಕೆಗಳು.. ಸ್ನೇಹಿತರೆ.. ಒಟ್ಟಾರೆ ಧರ್ಮಸ್ತಳ ನಿಗೂಢ
ಪ್ರಕರಣ ಬಗೆದಷ್ಟು ಕುತೂಹಲವನ್ನು ಕೆರಳಿಸ್ತಾ ಇದೆ.. ಅದೇನೆ ಇರಲಿ, ಕೆಲವೊಮ್ಮೆ ದಿಢೀರ್‌ ಪತ್ರ್ಯಕ್ಷವಾಗುವ ಹೊಸ
ಹೊಸ ಸಾಕ್ಷಿಗಳು ಮಾತ್ರ ಈ ಕೇಸ್‌ನಾ ಸೂಕ್ಷ್ಮವಾಗಿ ಗಮನಿಸುತ್ತಾ ಇರೋರಿಗೆ ಹಲವು ಅನುಮಾನಗಳನ್ನು ಹುಟ್ಟು
ಹಾಕಿದ್ರ…

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರೋದಾಗಿ ಹೇಳಿಕೆ ಕೊಟ್ಟ ಈ ಮಾಸ್ಕ್​ ಮ್ಯಾನ್ ಯಾರು? ಆತನ
ಹಿನ್ನೆಲೆ ಏನು ಅಂತ ಎಸ್​ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಇದರ ನಡುವೆಯೇ ಮಾಸ್ಕ್​ ಮ್ಯಾನ್ ಸ್ನೇಹಿತ
ಅಂತ ಹೇಳಿಕೊಳ್ತಿರುವ ಮಂಡ್ಯದ ರಾಜು ಎಂಬಾತ ಅನಾಮಿಕ ಬಗ್ಗೆ ಅಸಲಿಯತ್ತನ್ನು ಬಿಚ್ಚಿಟ್ಟಿದ್ದಾರೆ.​ ನಾನು, ಅವನು
ಒಟ್ಟಿಗೆ ಧರ್ಮಸ್ಥಳದಲ್ಲೇ ಕಸ ಗುಡಿಸುವ ಕೆಲಸ ಮಾಡ್ತಿದ್ದೆವು ಎಂದು ಈತ ಹೇಳಿದ್ದು, ಅನಾಮಿಕನ ಆರೋಪಗಳ
ಬಗ್ಗೆಯೂ ಮಾತಾಡಿದ್ದಾನೆ.

ಮದ್ದೂರಿನ ವೈದ್ಯನಾಥಪುರ ಗ್ರಾಮದ ರಾಜು ಧರ್ಮಸ್ಥಳದಲ್ಲಿ ಹೆಣಗಳನ್ನು ಹೂತಿಟ್ಟಿದ್ದೇನೆ ಎನ್ನುತ್ತಿರುವ ಅನಾಮಿಕನ
ಬಗ್ಗೆ ರಾಜು ಸ್ಪೋಟಕ ಹೇಳಿಕೆ ನೀಡಿದ್ದಾರೆ. ಅನಾಮಿಕನ ಜೊತೆ ನಾನು ಕೂಡ ದೇಗುಲದ ಬಳಿ ಸ್ವಚ್ಚತೆ ಕೆಲಸ
ಮಾಡಿಕೊಂಡೆ ಇದ್ದೆ ಎಂದು ಈತ ಹೇಳಿದ್ದಾನೆ.
ನಾನು, ರಾಜು, ನಮ್ಮ ಪಕ್ಕದ ಮನೆ ಇಬ್ಬರು.. ಹಾಗೂ ಮುಸುಕುದಾರಿ..
ಪೊಲೀಸನವ್ರ, ಡಾಕ್ಟರ್‌ ಎಲ್ಲರೂ ಇರ್ತಾ ಇದ್ದರು..
‘ನಾನು ಅವನ ಜೊತೆ ಕೆಲಸ ಮಾಡ್ತಿದ್ದೆ’
‘ದುಡ್ಡಿನ ಆಸೆಗೆ ಈ ತರ ಹೇಳಿರಬೇಕು’
ದುಡ್ಡಿನ ಆಸೆಗೆ ಆತ ಈ ರೀತಿ ಹೇಳಿಕೆ ನೀಡಿರಬಹುದು ಎಂದು ಅನಾಮಿಕನ ಸ್ನೇಹಿತ ರಾಜು ಹೇಳಿದ್ದಾರೆ. ಈ ರೀತಿ ಆರೋಪ
ಯಾಕೆ ಮಾಡ್ತಿದ್ದಾನೋ ನನಗೆ ಗೊತ್ತಿಲ್ಲ. ಯಾರೋ ಅವನಿಗೆ ದುಡ್ಡು ಕಾಸಿನ ಆಸೆ ತೋರಿಸ್ಬೇಕು. ನಾವು ಪೊಲೀಸರ
ಅನುಮತಿ ಪಡೆಯದೆ ಯಾವುದೇ ಶವ ಸಂಸ್ಕಾರ ಮಾಡಿಲ್ಲ ಎಂದು ರಾಜು ಹೇಳಿಕೆ ನೀಡಿದ್ದಾರೆ.
 ಆಭರಣ ಕದಿಯುತ್ತಿದ್ದ ಮಾಸ್ಕ್ ಮ್ಯಾನ್​
ನಮಗೆ ಯಾರು ಕೂಡ ಬಂದು ಅಪರಿಚಿತ ಶವ ಹೂತು ಹಾಕಿ ಎಂದು ಹೇಳಿಲ್ಲ. ಧರ್ಮಸ್ಥಳದಲ್ಲಿ ನಾಲ್ಕು ಕುಟುಂಬಗಳು
ಅಲ್ಲಿ ಕೆಲಸ ಮಾಡ್ತಿದ್ರು. ಅನ್ನ ಹಾಕಿ ಸಾಕಿ ಸಲುಹಿದವರ ಮೇಲೆ ಈಗ ಈ ರೀತಿ ಆರೋಪ ಮಾಡ್ತಿರೋದು ಸರಿಯಿಲ್ಲ‌.
ಈತ ಅನಾಥ ಶವಗಳ ಮೇಲಿದ್ದ ಚಿನ್ನಾಭರಣ ಕೂಡ ಕದಿಯುತ್ತಿದ್ದ ಎಂದು ರಾಜು ಗೆಳೆಯನ ಮೇಲೆ ದೊಡ್ಡ ಆರೋಪ
ಮಾಡಿದ್ದಾರೆ.

(ಕೆಲವೊಂದು ಕಡೆ ಅವನಿಗೆ ಮಾತ್ರ ಸಿಕ್ತಾ ಇತ್ತು.. ನನಗೆ ಮಾತ್ರ ಸಿಕ್ತಾ ಇರಲಿಲ್ಲ ಅಂತಾ ಹತಾಶೆಯಿಂದ ಹೇಳಿದ್ದು
ಕೆಲವೊಂದು ಅನುಮಾನಗಳನ್ನು ಹುಟ್ಟಿಸ್ತಾ ಇತ್ತು..

ಅನುಮಾನಗಳು..!
ಅನಾಮಿಕ ಮಾಸ್ಕ್ ಮ್ಯಾನ್‌ ಜೊತೆಗೆ ತಾನು 100ಕ್ಕೂ ಹೆಚ್ಚು ಶವಗಳನ್ನು ಹೂತುಹಾಕಿರುವುದಾಗಿ ರಾಜು ಹೇಳಿದ್ದಾನೆ.
ಆದರೆ, ಇದು ಯಾವುದೇ ಅಪರಾಧದ ಕೃತ್ಯವಲ್ಲ. ಬದಲಾಗಿ, ವಾರಸುದಾರರಿಲ್ಲದ, ಅನಾಥ ಶವಗಳನ್ನು
ಕಾನೂನುಬದ್ಧವಾಗಿ ಅಂತ್ಯಸಂಸ್ಕಾರ ಮಾಡಿದ ಕೆಲಸವಿದು ಎಂದು ರಾಜು ಸ್ಪಷ್ಟಪಡಿಸಿದ್ದಾರೆ. ವೈದ್ಯರು ಮತ್ತು
ಪೊಲೀಸರ ಸಮ್ಮುಖದಲ್ಲಿಯೇ ಈ ಶವ ಸಂಸ್ಕಾರಗಳನ್ನು ನಡೆಸಲಾಗುತ್ತಿತ್ತು. ಪ್ರತಿ ಶವ ಸಂಸ್ಕಾರಕ್ಕೆ ದೇವಸ್ಥಾನದ
ಮಾಹಿತಿ ಕೇಂದ್ರದಿಂದಲೇ 50 ರೂಪಾಯಿ ಪಡೆಯುತ್ತಿದ್ದೆವು ಎಂದು ರಾಜು ತಿಳಿಸಿದ್ದಾರೆ. ಆಗಸ್ಟ್ 8 ರಂದು ರಾಜು ಅವರು
ಈ ಕುರಿತು 6 ಗಂಟೆಗಳ ಕಾಲ ಎಸ್‌ಐಟಿ ಅಧಿಕಾರಿಗಳ ಮುಂದೆ ಸಂಪೂರ್ಣ ಹೇಳಿಕೆಯನ್ನು ದಾಖಲಿಸಿದ್ದಾರೆ.
ಅನಾಮಿಕ ಹೂತ ಜಾಗವನ್ನು ತಪ್ಪಾಗಿ ತೋರಿಸುತ್ತಿದ್ದಾನೆಯೇ?
ಮಾಸ್ಕ್‌ಮ್ಯಾನ್ ತನ್ನ ಆರೋಪಗಳಲ್ಲಿ ಶವಗಳನ್ನು ಹೂತಿದ್ದ ಸ್ಥಳದ ಬಗ್ಗೆ ಹೇಳಿದ್ದ. ಆದರೆ, ರಾಜು, ಅನಾಮಿಕ
ಮಾಸ್ಕ್‌ಮ್ಯಾನ್ ಬೇರೆ ಬೇರೆ ಸ್ಥಳಗಳನ್ನು ತೋರಿಸುತ್ತಿದ್ದಾನೆ. ಅವನು ಹೇಳುತ್ತಿರುವ ಜಾಗಗಳು ನಿಜವಾದವುಗಳಲ್ಲ.
ನಾನು ಬೇಕಾದರೆ ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಸರಿಯಾದ ಸ್ಥಳವನ್ನು ತೋರಿಸುತ್ತೇನೆ’ ಎಂದು ಸವಾಲು
ಹಾಕಿದ್ದಾನೆ. ಇದರಿಂದ ಅನಾಮಿಕನ ಉದ್ದೇಶದ ಬಗ್ಗೆ ಸಂಶಯಗಳು ಮೂಡುತ್ತಿವೆ ಎಂದು ರಾಜು ಹೇಳಿದ್ದಾನೆ.
ಶವಗಳ ಮೇಲಿನ ಒಡವೆಗಳ ಕಳ್ಳತನ?
ರಾಜು ಅವರ ಹೇಳಿಕೆಯ ಪ್ರಕಾರ, ಅನಾಮಿಕ ವ್ಯಕ್ತಿ ಹಣದ ಆಸೆಯಿಂದ ಇಂತಹ ಸುಳ್ಳುಗಳನ್ನು ಹೇಳುತ್ತಿರಬಹುದು. ಶವಗಳ
ಮೇಲಿದ್ದ ಚಿನ್ನದ ಒಡವೆಗಳನ್ನು ಈತ ಕದಿಯುತ್ತಿದ್ದ. ಈ ಕೃತ್ಯದಲ್ಲಿ ಪಾಲು ಕೇಳಿದಾಗ ರಾಜುಗೆ ಪಾಲು ಕೊಡುತ್ತಿರಲಿಲ್ಲ
ಎಂದು ಆರೋಪಿಸಿದ್ದಾರೆ. ಅನಾಮಿಕ ಮಾಡುತ್ತಿರುವುದು ತಪ್ಪು ಕೆಲಸ ಎಂದು ರಾಜು ಎಚ್ಚರಿಕೆ ಕೂಡ ನೀಡಿದ್ದನು.
ಡೌಟ್ಸ್‌::—
ನೇತ್ರಾವತಿ ನದಿಯಲ್ಲಿ ಬಿದ್ದಂತಹ ಶವಗಳನ್ನು ಮಾತ್ರ ಕೊಡ್ತೀವಿ.. ಅಂತಾ ಒದ್ಕಡೆ..
ನೀರೋಳಗಿನ ಮೃತದೇಹಗಳನ್ನು ತೆಗೀತಾ ಇದ್ವಿ..
ಇನ್ನೊಂದ್ಕಡೆ.. ಮೃತದೇಹಗಳು ಆತ್ಮಹತ್ಯೆಯ ಸ್ತೀತಯಲ್ಲಿ ಇರ್ತಾ ಇದ್ದವು ಅಂತಾ..
ಮಾಹಿತಿ ಕೇಂದ್ರದವ್ರು ಯಾಕೆ ಕರೆ ಮಾಢ್ಬೇಕು.
ಕೆಲವೊಂದು ಜಾಗದಲ್ಲಿ ಊತಾಕಿರೋದು ನಮಗೆ ಮಾತ್ರ ಗೊತ್ತು.. ಎಲ್ಲೋಲ್ಲೋ ತಗೆದ್ರೆ ಗೊತ್ತಾಗುತ್ತಾ ಅಂತಾ.. ಆ
ಮೃತದೇಹಗಳು ಯಾರದ್ದು..?
150 ಕ್ಕೆ ಮೇಲೆ ಮೃತದೇಹಗಳು ಸಿಕ್ಕಿದ್ದಾವೆ..
ಸ್ಟ್ರೆಚರ್‌ಗೆ ಹಾಕೋವರೆಗೂ ಮಾತ್ರ ನನ್‌ ಕೆಲಸ ಎಂದು ಹೇಳಿದ ಆದ್ರೆ.. ಡೌಟ್..

ಹೂತಾಕಿ ಅಂತಾ ಹೇಳ್ಥಾ ಇದ್ದಿದ್ದೆ ಮಾಹಿತಿ ಕಛೇರಿ ಅಂತಾ ಒಂದ್ಸಲ ಹೇಳ್ಥಾನೆ.. ಕೊನೆಗೆ, ಗ್ರಾಮ ಪಂಚಾಯಿತಿ ಅವ್ರ
ಇರ್ತಾನೆ ಇರಲಿಲ್ಲ ಅಂತಾ ಹೇಳ್ಥಾನೆ..

Rakesh arundi

Leave a Reply

Your email address will not be published. Required fields are marked *

ನೀವು ತಪ್ಪಿಸಿಕೊಂಡಿರಬಹುದು