ಪ್ರಸಿದ್ಧ ಶಂಕರಲಿಂಗೇಶ್ವರ ಸಂಸ್ಥಾನ ಹಿರೇಮಠದ ಮಠಾಧಿಪತಿ ಶ್ರೀ ಶಾಂತಲಿಂಗ ಶಿವಾಚಾರ್ಯರು

ಇತ್ತೀಚೆಗೆ ಜಿಲ್ಲೆಯ ರಾಯಬಾಗ ತಾಲೂಕಿನ ಮೇಕಳಿ ಗ್ರಾಮದಲ್ಲಿ ರಾಮ ಮಂದಿರದ ಮಠ ಕಟ್ಟಿಕೊಂಡು ವಾಸವಿದ್ದ ಹಠಯೋಗಿ ಲೋಕೇಶ್ವರ ಸ್ವಾಮೀಜಿ ಅಪ್ರಾಪ್ತ ಬಾಲಕಿಯನ್ನು ಕಿಡ್ನ್ಯಾಪ್ ಮಾಡಿ ಆಕೆಯ ಮೇಲೆ ಅತ್ಯಾಚಾರವೆಸಗಿದ ಘಟನೆ ನಡೆದಿತ್ತು. ಬಳಿಕ ಪೊಲೀಸರು ಸ್ವಾಮೀಜಿಯನ್ನು ಬಂಧಿಸಿದ್ದರು.

ಮೇ 13ರಂದು ಸೋದರ ಮಾವನ ಮನೆಗೆ ಹೋಗಿ ಬರುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಮನೆಗೆ ಬಿಡುವುದಾಗಿ ನಂಬಿಸಿ ಕಾರಿನಲ್ಲಿ ಕಿಡ್ನ್ಯಾಪ್ ಮಾಡಿಕೊಂಡು ಆಕೆಯನ್ನು ರಾಯಚೂರಿನ ಲಾಡ್ಜ್‌ ಕರೆದುಕೊಂಡು ಹೋಗಿ ಎರಡು ದಿನ ಜೊತೆಗೆಯಲ್ಲಿ ಇರಿಸಿಕೊಂಡು ಅತ್ಯಾಚಾರ ಎಸಗಿದ್ದರು. ಬಳಿಕ ಬಾಗಲಕೋಟೆಗೆ ಕರೆದುಕೊಂಡು ಬಂದು ಅಲ್ಲಿಯೂ ದೌರ್ಜನ್ಯ ಎಸಗಿದ್ದರು. ಇಷ್ಟೇಲ್ಲಾ ಆದ ಮೇಲೆ ಬಾಲಕಿಗೆ ಧಮ್ಕಿ ಹಾಕಿ, ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದರು. ಈ ಬಗ್ಗೆ ಬಾಲಕಿ ಫೋಷಕರು ದೂರು ನೀಡಿದ್ದರು.
ಇನ್ನು..,

Forget About Starting From Scratch

ಪ್ರಸಿದ್ಧ ಶಂಕರಲಿಂಗೇಶ್ವರ ಸಂಸ್ಥಾನ ಹಿರೇಮಠದ ಮಠಾಧಿಪತಿ ಶ್ರೀ ಶಾಂತಲಿಂಗ ಶಿವಾಚಾರ್ಯರು ಜ.8ರಂದು ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಕಂಠ ಪೂರ್ತಿ ಮದ್ಯ ಸೇವಿಸಿ ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸಿ ಅಪಘಾತ ನಡೆಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಅದೀಗ ವೈರಲ್‌ ಆಗಿತ್ತು..
ಇನ್ನು ಮುರಾಘಾ ಮಠದ ‍ಶ್ರೀಗಳ ಕಥೆ ಒಂದೇರಡು ಮಾತುಗಳಲ್ಲಿ ಮುಗಿಸುವಂತದ್ದಲ್ಲ..

ಸ್ನೇಹಿತರೆ,, ದೇವರ ಹೆಸರಲ್ಲಿ ಅಮಾಯಕ ಭಕ್ತರಿಗೆ ವಂಚನೆ ಮಾಡೋ ಅನೇಕ ಪ್ರಕರಣಗಳು ನಮ್ಮ ಮುಂದಿವೆ.. ಹಿತವಚನಗಳು ನಿಮ್ಮ ಬದುಕನ್ನು ಬದಲಾಯಿಸಿದ್ರೆ ಯಾರು ಬೇಡ ಅನ್ನೋಲ್ಲ.. ಆದ್ರೆ ವ್ಯಕ್ತಿ ಪೂಜೆಯಿಂದ ಮುಂದಾಗುವ ಅನಾಹುತಗಳಿಗೆ ನೀವೆ ಹೊಣೆಗಾರರಾಗಬೇಕಾಗುತ್ತದೆ..

Rakesh arundi

Leave a Reply

Your email address will not be published. Required fields are marked *

ನೀವು ತಪ್ಪಿಸಿಕೊಂಡಿರಬಹುದು