Murder: 2 ಸಾವಿರ ಹಣಕ್ಕಾಗಿ ಸ್ನೇಹಿತನಿಗೆ ಚಟ್ಟ ಕಟ್ಟಿದ ಯುವಕ
ಕೊಟ್ಟ ಸಾಲ ವಾಪಸ್ ನೀಡಿಲಿಲ್ಲ ಎಂದು ಸ್ನೇಹಿತನಿಗೆ ತನ್ನ ಸ್ನೇಹಿತನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗಿರಿಯಾಲ ಗ್ರಾಮದಲ್ಲಿ ನಡೆದಿದೆ.
ಮಂಜುನಾಥ ಗೌಡರ (30) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಕಳೆದ ವಾರ ಸ್ನೇಹಿತ ದಯಾನಂದ ಗುಂಡ್ಲೂರನಿಂದ ಎರಡು ಸಾವಿರ ಸಾಲ ಪಡೆದಿದ್ದ ಮಂಜುನಾಥ ಒಂದು ವಾರದೊಳಗೆ ಹಣ ವಾಪಸ್ ನೀಡುವುದಾಗಿ ಹೇಳಿದ್ದ. ಅವಧಿ ಮುಗಿದ ಹಿನ್ನೆಲೆಯಲ್ಲಿ ಸಾಲ ಕೇಳಲು ದಯಾನಂದ ಮುಂದಾಗಿದ್ದ. ಇದೇ ಹಣದ ವಿಚಾರಕ್ಕೆ ಮಂಜುನಾಥ ಹಾಗೂ ದಯಾನಂದ ಮಧ್ಯೆ ಜಗಳವಾಗಿದೆ. ಇದು ವಿಕೋಪಕ್ಕೆ ತಿರುಗಿ ಮಂಜುನಾಥನನ್ನು ದಯಾನಂದ ಕೊಲೆ ಮಾಡಿದ್ದಾನೆ.
ರಾತ್ರಿ ನಡೆದ ಜಗಳದ ಸಿಟ್ಟಿನಲ್ಲೇ ಬೆಳಗಿನ ಜಾವ ಕೊಡಲಿಯಿಂದ ಹೊಡೆದು ಮಂಜುನಾಥನ ಹತ್ಯೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಆಸ್ಪತ್ರೆಗೆ ಸಾಗಿಸುವ ಮುನ್ನವೇ ಮಂಜುನಾಥನ ಪ್ರಾಣ ಪಕ್ಷಿ ಹಾರಿಹೋಗಿದೆ. ಮಂಜುನಾಥ ಗೌಡರ ಸಾವನಪ್ಪಿರುವ ಸುದ್ದಿ ತಿಳಿಯುತ್ತಿದ್ದಂತೆ ದಯಾನಂದ ಪೊಲೀಸರಿಗೆ ಶರಣಾಗಿದ್ದಾನೆ.