Kolar: ಕುಡಿಯಲು ಮಿಕ್ಸ್ಚರ್ ಕೊಟ್ಟಿಲ್ಲ ಎಂದು ಬಾರ್ ಕ್ಯಾಷಿಯರ್ನ ಹತ್ಯೆ
ಕುಡಿಯಲು ಮಿಕ್ಸ್ಚರ್ ಕೊಟ್ಟಿಲ್ಲ ಎಂದು ಬಾರ್ ಕ್ಯಾಷಿಯರ್ನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಲಕ್ಕೂರು ಗ್ರಾಮದಲ್ಲಿ ನಡೆದಿದೆ.
ಕುಮಾರ್ (45) ಮೃತ ಕ್ಯಾಷಿಯರ್ ಹಾಸನ ಮೂಲದವರು. ಸುಭಾಷ್ ಹತ್ಯೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ. ಕೊಲೆಯಾದ ಕುಮಾರ್ ಲಕ್ಕೂರು ಗ್ರಾಮದ ಅಶೋಕ ವೈನ್ಸ್ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದರು. ಆರೋಪಿ ಕುಡಿಯುವ ವೇಳೆ, ಮಿಕ್ಸ್ಚರ್ ಕೇಳಿದ್ದಾನೆ. ಮಿಕ್ಸ್ಚರ್ ನೀಡದ ಕಾರಣ ಗಲಾಟೆಯಾಗಿದೆ.
ನಂತರ ಕುಮಾರ್ ಬಾರ್ ಬಂದ್ ಮಾಡಿ ಮನೆಗೆ ತೆರಳುತ್ತಿದ್ದಾರೆ. ಈ ವೇಳೆ ಹಿಂಬಾಲಿಸಿಕೊಂಡು ಬಂದ ಆರೋಪಿ ಕ್ಯಾಷಿಯರ್ನ ಮನೆ ಬಳಿ ಪತ್ನಿ, ಮಕ್ಕಳ ಎದುರೇ ಚುಚ್ಚಿ ಕೊಂದಿದ್ದಾನೆ. ಈ ಸಂಬಂಧ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.