Koppal: ಹುಟ್ಟು ಹಬ್ಬದ ದಿನದಂದೇ ಕಿರುತೆರೆ ನಟ ಆರ್ಯನ್ ಸಾವು
ಕಿರುತೆರೆ ನಟ ಆರ್ಯನ್ ಗುರುಸ್ವಾಮಿ ತನ್ನ ಹುಟ್ಟು ಹಬ್ಬದ ದಿನದಂದೇ ಸಾವನ್ನಪ್ಪಿದ್ದು, ಪೋಷಕರು ಅಂಗಾಂಗ ದಾನಮಾಡಿ ಸಾರ್ಥಕತೆ ಮೆರೆದಿದ್ದಾರೆ.
ಕೊಪ್ಪಳದ ಕನಕಗಿರಿ ಮೂಲದ ಆರ್ಯನ್ (22) ಮೃತ ಯುವಕ. ಕಳೆದ 15 ದಿನಗಳ ಹಿಂದೆ ಹಾಸಕ್ಕೆ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಅಪಘಾತಕ್ಕೊಳಗಾಗಿ, ಆರ್ಯನ್ ಗಾಯಗೊಂಡಿದ್ದ. ಆತನನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಿಸದೇ ಹುಟ್ಟುಹಬ್ಬದ ದಿನವೇ ಯುವಕ ಸಾವನ್ನಪ್ಪಿದ್ದಾನೆ.
ಆರ್ಯನ್ ಹುಟ್ಟು ಹಬ್ಬದ ಹಿನ್ನಲೆ ಕಟುಂಬಸ್ಥರು ಕೇಕ್ ಕತ್ತರಿಸಿದ್ದರು. ಮೃತಪಟ್ಟ ಮಗನ ಕೈ ಹಿಡಿದು ಪೋಷಕರು ಕೇಕ್ ಕತ್ತರಿಸಿ ಕಣ್ಣೀರಿಟ್ಟಿದ್ದಾರೆ. ಬಳಿಕ ಮಗನ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಹುಟ್ಟೂರಾದ ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ಇಂದು ಆರ್ಯನ್ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.