ಕತ್ತಲಲ್ಲಿ ಕಾಣಲ್ಲ, ಬೆಳಕಲ್ಲಿ ಹೊಳೆಯಲ್ಲ, ಮುಳ್ಳುಹಂದಿ ಮುಖದ ಏಕೈಕ ಕಾಮಿಡಿ ಪೀಸ್ ಪ್ರದೀಪ್ ಈಶ್ವರ್: ಪ್ರತಾಪ್ ಸಿಂಹ
ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ತಮ್ಮ ತಾಯಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಅವರು ಪ್ರದೀಪ್ ಈಶ್ವರ್ ಕತ್ತಲಲ್ಲಿ ಕಾಣಲ್ಲ, ಬೆಳಕಲ್ಲಿ ಹೊಳೆಯಲ್ಲ. ಇನ್ನೊಂದು ಬಾರಿ ನನ್ನ ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ ಮಗನೇ ಎಂದು ಕಿಡಿಕಾರಿದ್ದಾರೆ.
ಮುಳ್ಳುಹಂದಿ ಮುಖದ ಕರ್ನಾಟಕದ ಏಕೈಕ ಕಾಮಿಡಿ ಪೀಸ್ ಪ್ರದೀಪ್ ಈಶ್ವರ್. ನಮ್ಮ ತಂದೆ ವಯಸ್ಸಿನಲ್ಲಿ ಇದ್ದಾಗ ಚಿಕ್ಕಬಳ್ಳಾಪುರದ ಕಡೆಗೆ ಬಂದಿದ್ದರೆ ನೀನು ಕೂಡ ಸುಂದರವಾಗಿಯೇ ಹುಟ್ಟುತ್ತಿದ್ದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಪ್ರದೀಪ್ ಈಶ್ವರ್ ಗೆ ಅವನ ಭಾಷೆಯಲ್ಲೇ ಉತ್ತರ ಕೊಟ್ಟಿರುವುದಕ್ಕೆ ಕರ್ನಾಟಕದ ಜನರ ಕ್ಷಮೆ ಕೇಳುತ್ತೇನೆ, ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.